ಬಂಟ್ವಾಳ : ಯಕ್ಷಗಾನ ಕಲೆಯಲ್ಲಿ ಅನುಭವ ಮತ್ತು ಅಧ್ಯಯನಕ್ಕೆ ಬಹಳಷ್ಟು ಅವಕಾಶವಿದೆ . ಇತಿಹಾಸ, ಧಾರ್ಮಿಕತೆ, ಚರಿತ್ರೆ ಮೊದಲಾದ ಎಲ್ಲಾ ಮಜಲುಗಳನ್ನು ತಿಳಿದುಕೊಂಡು ನಡೆಯುವ ಯಕ್ಷಗಾನ ಕಲೆ ನಮ್ಮ ಕ್ರಿಯಾಶೀಲ ಬದುಕಿಗೆ ಸ್ಪೂರ್ತಿ ನೀಡುತ್ತದೆ ಎಂದು ಬಂಟ್ವಾಳ ತಾಲೂಕು ತಹಶೀಲ್ದಾರ್ ಪುರಂಧರ ಹೆಗ್ಡೆ ನುಡಿದರು. ಅವರು ಯಕ್ಷಗಾನ ಬಯಲಾಟ ಸಮಿತಿ ಅಲೆತೂರು ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ಪ್ರಸಾದಿತ ದ ಶಾವತಾರ ಯಕ್ಷಗಾನ ಮಂಡಳಿಯವರಿಂದ ಜರಗಿದ 6ನೇ ವರ್ಷದ ಯಕ್ಷಗಾನ ಬಯಲಾಟದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. 
ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಮೂಲಕ ನಿರಂತರವಾಗಿ ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ನೆಡೆಸುತ್ತಾ ಬಂದಿರುವ ಕೆ.ಕೆ.ಪೂಂಜ ಹಾಗೂ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಮೋಹನ್ ರಾವ್ ರವರನ್ನು ಸನ್ಮಾನಿಸಲಾಯಿತು.ಸಭಾಧ್ಯಕ್ಷತೆಯನ್ನು ನೇಮಿರಾಜ್ ಶೆಟ್ಟಿಯವರು ವಹಿಸಿದ್ದರು. ವೇದಿಕೆಯಲ್ಲಿ ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು , ಬೂಡಾ ಅಧ್ಯಕ್ಷ ಸದಾಶಿವ ಬಂಗೇರಾ, ಬಂಟ್ವಾಳ ವಿಜಯಾ ಬ್ಯಾಂಕಿನ ಪ್ರಭಂಧಕ ಬೇಬಿ ಕುಂದರ್ ಉಪಸ್ಥಿತರಿದ್ದರು. ಪುರಸಭಾ ನಾಮನಿರ್ದೇಶಿತ ಸದಸ್ಯ ಲೋಕೇಶ್ ಸುವರ್ಣ ಹಾಗು ಬಯಲಾಟ ಸಮಿತಿ ಉಪಕಾರ್ಯದರ್ಶಿ ಸನ್ಮಾನ ಪತ್ರ ವಾಚಿಸಿದರು. ಅಧ್ಯಕ್ಷ ಮೋನಪ್ಪ ಪೂಜಾರಿಯವರು ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಪ್ರಕಾಶ್ ಅಲೆತೂರು ವಂದಿಸಿದರು. ಶ್ರೀಧರ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
