ಬಂಟ್ವಾಳ:ತಾಲ್ಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಎಂಬಂತೆ ವೇದೋಕ್ತ ರೀತಿ ಮೂಲಕ ಕಡಿಮೆ ವೆಚ್ಚದಲ್ಲಿ ವಿನೂತನವಾಗಿ ನಾಗಮಂಡಲ ನಡೆಸಲು ಇಲ್ಲಿನ ಇರ್ವತ್ತೂರು ಬದಿನಡೆ ಶ್ರೀ ನಾಗಬ್ರಹ್ಮ ಸಾನಿಧ್ಯದಲ್ಲಿ ಭಾರೀ ಸಿದ್ಧತೆ ನಡೆಯುತ್ತಿದೆ.

26btl-Nagamandala
ಇದೇ 30ರಂದು ರಾತ್ರಿ ಗಂಟೆ 7.30ರಿಂದ 11.30ರೊಳಗೆ ವೇದ ವಿದ್ವಾಂಸ ಕೆ.ಎಸ್.ನಿತ್ಯಾನಂದ ಇವರ ಮಾರ್ಗದರ್ಶನದಲ್ಲಿ ನಡ್ವಂತಾಡಿ ಪಾಂಗಣ್ಣಾಯ ತಂತ್ರಿ ಪೌರೋಹಿತ್ಯದಲ್ಲಿ ನಡೆಯುವ ವೇದೋಕ್ತ ನಾಗಮಂಡಲದಲ್ಲಿ ನಾಗಪಾತ್ರಿಯಾಗಿ ಶಂಕರ ನಾರಾಯಣ ಹೆಬ್ಬಾರ್ ಕಬ್ಬಿನಾಲೆ ಮತ್ತು ಡಾ.ಎಚ್.ದಿವಾಕರ ಭಟ್ ವೈದ್ಯರಾಗಿ ಕಾರ್ಯನಿರ್ವಹಿಸುವರು.
ಇದೇ 29ರಂದು ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, 30ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಯಕ್ಷಗಾನ ವೈಭವ’ ತಾಳಮದ್ದಳೆ ಕೂಟ ಏರ್ಪಡಿಸಲಾಗಿದೆ.
ಅಂದು ಸಂಜೆ 4ಗಂಟೆಗೆ ನಡೆಯುವ ಧಾಮರ್ಿಕ ಸಭೆಯಲ್ಲಿ ಅಳದಂಗಡಿ ಅರಮನೆ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಸಮಿತಿ ಅಧ್ಯಕ್ಷ ನಡಿಗುತ್ತು ಧೀರಜ್ ನಾಯ್ಕ್ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *