ಮಂಗಳಾ ಫ್ರೆಂಡ್ಸ್ ಸರ್ಕಲ್ ಅಲೆತ್ತೂರಿನ 35ನೇ ವಾರ್ಷಿಕೋತ್ಸವವು ಬಿ.ಸಿ.ರೋಡು ಅಲೆತ್ತೂರು ಮಂಗಳಾ ಭವನದಲ್ಲಿ ಪಂಜುರ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ನೇಮಿರಾಜ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಚಿವ ಬಿ.ರಮಾನಾಥ ರೈ ಮುಖ್ಯ ಅತಿಥಿಯಾಗಿ ಮಾತನಾಡಿ ಸಂಘಟನೆಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರಕಾರದ ಯೋಜನೆಗಳ ಅನುಷ್ಠಾನದಲ್ಲೂ ಸಂಘಟನೆಗಳು ಸಕ್ರೀಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

KAR_2670
ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಧರ್ಮ ಪ್ರಸರಣ ಪ್ರಮುಖ್ ಜಿತೇಂದ್ರ ಕೊಟ್ಟಾರಿ, ಬಂಟ್ವಾಳ ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯರಾದ ದೇವದಾಸ್ ಶೆಟ್ಟಿ, ಸುಗುಣಾ ಕಿಣಿ, ವಿಮಾ ನೌಕರರ ಸಂಘದ ಅಧ್ಯಕ್ಷ ಇಂದಿರೇಶ್ ಬಿ.ಸಿ.ರೋಡು ಅತಿಥಿಗಳಾಗಿ ಭಾಗವಹಿಸಿದರು.
ಸತ್ತಿಗೆ ಪ್ರಕಾಶನ ಪ್ರಕಟಿತ ಯುವ ಲೇಖಕ ಸಂಕೇತ್ ಪೂಜಾರಿ ರಚಿತ ಗ್ರಾಮದೈವ ಶ್ರೀ ಅಲೆತ್ತೂರು ಪಂಜುರ್ಲಿ ಕೃತಿಯನ್ನು ದೈವಾರಾಧಕರ ಕೂಟದ ಗೌರವಾಧ್ಯಕ್ಚ ಜಯಂತ ನಡುಬೈಲು ಬಿಡುಗಡೆಗೊಳಿಸಿದರು. ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷ ಭಾಸ್ಕರ ಕುಲಾಲ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಪ್ರಕಾಶ್ ವಂದಿಸಿದರು. ಕಲಾವಿದ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *