ತುಂಬೆ;ಮನೆಯೇ ಮೊದಲ ಪಾಠಶಾಲೆ ಎಂಬ ನಾಣ್ಣುಡಿಗೆ ಅನ್ವರ್ತಕವಾಗಿ ಈಗ ಅಂಗನವಾಡಿಗಳು ಕಾರ್ಯ ನಿರ್ವಹಿಸುತಿರುತ್ತದೆ. ಮಾತೃ ಸಮಾನವಾದ ಪ್ರೀತಿ, ವಾತ್ಸಲ್ಯದೊಂದಿಗೆ ಎಳೆಯ ಮಕ್ಕಳಿಗೆ ಆಟ-ಪಾಠಗಳನ್ನು ಕಲಿಸಿ ಕೊಡುವುದು ಪುಣ್ಯದ ಕೆಲಸ ಎಂದು ಬಿ.ಎ.ಗ್ರೂಪ್ ತುಂಬೆ ಇದರ ಸ್ಥಾಪಕರಾದ ಬಿ. ಅಹ್ಮದ್ ಹಾಜಿ ಮೊಹಿದ್ದೀನ್ ರವರು ಅಭಿಪ್ರಾಯ ಪಟ್ಟರು.ಇವರು ಬಾಲಸ್ನೇಹಿ ಅಂಗನವಾಡಿ ಕೇಂದ್ರ ತುಂಬೆ ಉನ್ನತೀಕರಣಗೊಂಡ ಕೇಂದ್ರದ ಮರು ಪ್ರಾರಂಭ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರವೀಣ್ ಬಿ.ತುಂಬೆ ಯವರು ಕೇವಲ 1 ಲಕ್ಷ ಅನುದಾನದಿಂದ ಊರವರ ಸಹಕಾರದಿಂದ ಮಾದರಿ ಕಟ್ಟಡ ಗುತ್ತಿಗೆ ದಾರರನ್ನು ಹಾಗೂ ದಾನಿಗಳನ್ನು ಅಭಿನಂದಿಸಿದರು.ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ರವೀಂದ್ರ ಕಂಬಳಿ, ತಾಲೂಕು ಪಂಚಾಯತ್ ಸದಸ್ಯ ಶ್ರೀ ಗಣೇಶ್ ಸುವರ್ಣ ,ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ ಫಾಧರ್ ಮುಲ್ಲಾರ್ಸ್ ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಡಾ.ಕಿರಣ್ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ ತುಂಬೆ,ಮಹಮ್ಮದ್ ವಳವೂರು,ಸಂಜೀವ ಪೂಜಾರಿ,ನೇತ್ರ ಜನಾರ್ಧನ, ಮತ್ತಿತರರು ಉಪಸ್ಥಿತರಿದ್ದರು.ಅಂಗನವಾಡಿ ಶಿಕ್ಷಕಿ ಸಂಧ್ಯಾ ರವರು ಸ್ವಾಗತಿಸಿದರು.
