ಮೂಡುಬಿದಿರೆ: ಬಡವರ ಕಣ್ಣೀರೊರೆಸುವುದೆ ನಿಜವಾದ ಜನ ಸೇವೆ. ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ಬಡವರ ಪರ ಕೆಲಸ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.

ಮೂಡುಬಿದಿರೆ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಪಶುಭಾಗ್ಯ ಮತ್ತು ರಾಷ್ಟ್ರೀಯ ಕುಟುಂಬ ಸಹಾಯಧನ ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ವಿತರಿಸಿ ಮಾತನಾಡಿದರು.
45 ಪಶು ಭಾಗ್ಯ ಫಲಾನುಭವಿಗಳಿಗೆ ಸುಮಾರು 19 ಲಕ್ಷಮೊತ್ತದ ಚೆಕ್ ಹಾಗೂ ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯಡಿಯಲ್ಲಿ 47 ಫಲಾನುಭವಿಗಳಿಗೆ 13 ಲಕ್ಷ ಮೊತ್ತದ ಸಹಾಯಧನ ವಿತರಿಸಿದರು.
ತಹಶಿಲ್ದಾರ್ ಮುಹಮ್ಮದ್ ಇಸಾಕ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರಾದ ಡಾ.ರಾಜಣ್ಣ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಪಶು ಭಾಗ್ಯ ಸಮಿತಿ ಸದಸ್ಯರಾದ ಪ್ರಶಾಂತ್ ಅಮೀನ್, ರಾಘು ಪೂಜಾರಿ, ರೇವತಿ ಶೆಟ್ಟಿ, ರೊನಾಲ್ಡ್ ಪೆರ್ನಂಡೀಸ್ ಉಪಸ್ಥಿತರಿದ್ದರು. ಉಪತಹಶಿಲ್ದಾರ್ ಅಬ್ದುಲ್ ರೆಹ್ಮಾನ್ ಸ್ವಾಗತಿಸಿದರು.
