ಉಳ್ಳಾಲ: ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್‍ನ ಬಯೋಟೆಕ್ನಾಲಜಿ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗವು ಜಂಟಿಯಾಗಿ ಡೇಟಾಲೋರ್ ಲ್ಯಾಬ್ಸ್‍ನ ಸಹಯೋಗದೊಂದಿಗೆ “ಇಂಡಸ್ಟ್ರಿಯಲ್ ಪೊಟೆನ್ಸಿಯಲ್ಸ್ ಆಫ್ ಡಾಟಾ ಸೈನ್ಸ್”ದ ಬಗ್ಗೆ ವಿದ್ಯಾರ್ಥಿಗಳಿಗೆ ಸಂವಹನ ಕಾರ್ಯಕ್ರಮವನ್ನು ಎಪ್ರಿಲ್ 13, 2017ರಂದು ಆಯೋಜಿಸಲಾಗಿತ್ತು.
ಬೆಂಗಳೂರಿನ ‘ಮೊನ್ಸಾಂಟೋ’ದ ಡೇಟಾ ವಿಜ್ಞಾನಿಯಾದ ಶ್ರೀ.ಸುಧೀಂದ್ರ ರಾವ್.ಕೆ ಹಾಗೂ ಬೆಂಗಳೂರಿನ ಡೇಟಾಲೋರ್ ಲ್ಯಾಬ್ಸ್‍ನ ಸಲಹೆಗಾರರಾದ ರಾಧೇಶ್ ಶಿರ್ವ ಮತ್ತು ಹರ್ಷಿತ್‍ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.

ಸುಧೀಂದ್ರ ರಾವ್.ಕೆ ರವರು ಡಾಟಾ ವಿಜ್ಞಾನದ ಬಗ್ಗೆ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಡಾಟಾ ಸಂಶೋದನೆ, ಮಾಹಿತಿ ದೃಶೀಕರಣ, ಭವಿಷ್ಯದ ವಿಶ್ಲೇಷಕಗಳು ಮತ್ತು ವಿವರಣಾತ್ಮಕ ತಂತ್ರಗಳ ಬಗ್ಗೆ ಪರಿಣತಿ ಹೊಂದುವ ಅವಕಾಶಗಳಿವೆ. ಡಾಟಾ ವಿಜ್ಞಾನಿಗಳಿಗೆ ಆರೋಗ್ಯ, ಚಿಲ್ಲರೆ, ವಿಮೆ, ಹಣಕಾಸು, ವಿಮಾನಯಾನ, ಸಂಗೀತ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ ಎಂದು ಸುಧೀಂದ್ರ ರಾವ್.ಕೆ ರವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಪ್ರಾಂಶುಪಾಲರಾದ ಡಾ|| ಅಬ್ದುಲ್ ಷರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಡಾ|| ಎನ್.ಕೃಷ್ಣ ಪ್ರಸಾದ್ ಸ್ವಾಗತಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಮುಖ್ಯಸ್ಥರಾದ ಡಾ|| ಅಬ್ದುಲ್ಲಾ ಗುಬ್ಬಿ ವಂದಿಸಿದರು.
