ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾ ತಂಡ ಪ್ರತೀ ವರ್ಷ ಯಕ್ಷಗಾನ ಕಲಾವಿದರಿಗೆ ಸಹಕಾರದ ದೃಷ್ಟಿಯಿಂದ ನೀಡುವ ‘ನಂದಗೋಕುಲ ಯಕ್ಷ ಸಂಮಾನ’ವನ್ನು ಈ ಬಾರಿ ಶಿರೂರು ಅಣ್ಣಪ್ಪರ ಕುಲಾಲ್ ಅವರಿಗೆ ನೀಡಲಾಗುತ್ತಿದ್ದು, ಇದೇ ರಂದು ಹೆಬ್ರಿ ಸಮೀಪದ ಬಲ್ಲೆಬೈಲುವಿನಲ್ಲಿ ನಡೆಯಲಿರುವ ‘ಅರೆಹೊಳೆ ದಿಬ್ಬಣ’ದ ವೇಳೆ ಹರಿಕೃಷ್ಣ ಪುನರೂರು ಅವರ ಉಪಸ್ಥಿತಿಯಲ್ಲಿ ಈ ಸಂಮಾನ ಕಾರ್ಯಕ್ರಮ ನಡೆಯಲಿದೆ.Shiroor Annnappa

ಎಂದು ಅರೆಹೊಳೆ ಸದಾಶಿವ ರಾವ್ ತಿಳಿಸಿದ್ದಾರೆ. ಮಂದಾರ್ತಿ ಮೇಳದಲ್ಲಿ ಕಳೆದ 25 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಅಣ್ಣಪ್ಪ ಕುಲಾಲ್ ಅವರ ಸುದೀರ್ಘ ನಲವತ್ತು ವರ್ಷಗಳ ಕಲಾ ಬದುಕನ್ನು ಗುರುತಿಸಿ ಈ ಸಂಮಾನ ನಡೆಯಲಿದ್ದು, ಸಂಮಾನದೊಂದಿಗೆ ನಂದಗೋಕುಲ ಕಲಾ ತಂಡ ನೀಡುವ ಆರ್ಥಿಕ ನೆರವನ್ನು ಈ ಸಂದರ್ಭದಲ್ಲಿ ನೀಡಲಾಗುವುದು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

By Suddi9

Leave a Reply

Your email address will not be published. Required fields are marked *