ಮಂಗಳೂರು:ಸಾವಿನ ದವಡೆಯಿಂದ ಪಾರಾಗಿ ಬಂದ ಯೋಧ ನ ಮನೆಗೆ ತೆರಳಿ ಯೋಗ ಕ್ಷೇಮ ವಿಚಾರಿಸಿದ ಮಂಗಳೂರಿನ ದೇಶಭಕ್ತ ವಿವಿಧ ಸಂಘಟನಾ ನಾಯಕರುಗಳು *
ಎದೆಗೆ ಕಾಲಿಗೆ ಹಲವಾರು ಗುಂಡುಗಳ ಏಟು ಬಿದ್ದರೂ ಸಹ ಯೋಧರು ಕಣ್ಣೆದುರೇ ಸತ್ತರೂ ಕೂಡ ಛಲಬಿಡದೆ ಉಗ್ರಗಾಮಿ ಗಳನ್ನ ಹೆಚ್ಚುವರಿ ಸೈನಿಕ ಪಡೆ ಬರುವವರೆಗೆ ತಡೆ ಹಿಡಿದು ಅವರನ್ನ ಸಂಪೂರ್ಣ ವಾಗಿ ಮುಗಿಸುವ ವರೆಗೆ ಹೋರಾಡಿ ಸತ್ತು ಬದುಕಿ ಬಂದ ಸಂತೋಷ್ ಕುಲಾಲ್ ಹಾಗು ದೇಶ ಸೇವೆಗೆ ಹೋದ ಮಗ ನ ಈ ಅವಘಡದ ಸುಳಿವು 5 ತಿಂಗಳವರೆಗೆ ಅರಿಯದೆ ಬದುಕಿದ ಮುಗ್ದ ಕುಟುಂಬ ವನ್ನ ಮಂಗಳೂರಿನ ಹಲವು ಸಮಾಜ ಮುಖೀ ದೇಶ ಪ್ರೇಮಿ ಸಂಘಟನೆ ಗಳ ನಾಯಕರುಗಳು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ದೇಶಕ್ಕೆ ಅಮೂಲ್ಯ ಸೇವೆ ಸಲ್ಲಿಸಿ ಮಾದರಿಯಾದ ಅವರು ಹಾಗು ಅವರ ಕುಟುಂಬ ವನ್ನ ಶಾಲು ಹೊದಿಸಿ ಫಲಪುಷ್ಪ ಕೋಟ್ಟು ಸನ್ಮಾನಿಸಿ ನಮ್ಮ ಸುಖ ಕ್ಕಾಗಿ ಗಡಿಯಲ್ಲಿ ವೈರಿಗಳ ಗುಂಡಿಗೆ ಎದೆಯೊಡ್ಡಿ ಸಾವಿನ ದವಡೆಯಲ್ಲಿ ದುಡಿಯುವ ಸೈನಿಕರಿಗೆ ಶಹಭಾಸ್ ಹೇಳಿ ಅವರ ಸೇವೆ ಯನ್ನ ಅಲ್ಲಿಯ ಕಷ್ಟ ಸುಖಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡು ಧೈರ್ಯ ತುಂಬಿದರು ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಂತೈಸಿ ದರು
ಭೇಟಿ ಕೊಟ್ಟ ತಂಡದಲ್ಲಿ ಕುಲಾಲ್ ಕುಂಬಾರ ಸಮುದಾಯದ ಹಿರಿಯ ಮುಖಂಡ ಹಾಗು ಬಿಜೆಪಿ ಅರೋಗ್ಯ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ,ವಿಶ್ವ ಹಿಂದೂ ಪರಿಷತ್ ನ ನಾಯಕರುಗಳಾದ ಗೋಪಾಲ್ ಕುತ್ತರಃ ,ವಿಕಾಸ್ ಮುಡಿಪು ,ದಕ ಜಿಲ್ಲಾ ಮೂಲ್ಯರ ಯಾನೆ ಕುಲಾಲ್ ಮತೃ ಸಂಘದ ಸಂಘಟನಾ ಕಾರ್ಯದರ್ಶಿ ನಾರಾಯಣ ಬಂಗೇರ ,ಮಂಗಳೂರು ನಗರ (ಉಳ್ಳಾಲ ವಿಧಾನಸಭಾ )ಘಟಕದ ಕುಲಾಲ್ ಯುವ ವೇಧಿಕೆಯ ನಾಯಕರುಗಳಾದ ಜಯ ಕುಲಾಲ್, ಹರೀಶ್ ಮಜಲ ,ನವೀನ್ ಕುಲಾಲ್ ,ವಿಶ್ವನಾಥ್ ಕುಲಾಲ್ ಬೆಂಗಳೂರು ಮುಂತಾದವರು ಇದ್ದರು



