ಬಂಟ್ವಾಳ: ನನ್ನ ಕ್ಷೇತ್ರದ ಎಲ್ಲರ ಮನೆಬಾಗಿಲಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬುದು ನನ್ನ ಬಹುವರ್ಷದ ಕನಸು. ಇದಕ್ಕಾಗಿ ಕರೋಪಾಡಿ, ಸರಪಾಡಿ, ಸಂಗಬೆಟ್ಟು, ನರಿಕೊಂಬು, ಮಾಣಿ ಹಾಗೂ ಸಜಿಪಮುನ್ನೂರು ಬಹುಗ್ರಾಮ ಯೋಜನೆಯ ಕಡೆಗೆ ಹೆಚ್ಚು ಗಮನ ಇರಿಸಿದ್ದೆ, ಇದೀಗ ಎರಡು ಯೋಜನೆಗಳು ಕಾರ್ಯಾರಂಭಕ್ಕೆ ಸಿದ್ದವಾಗಿದ್ದು, ಮಾಣಿ ಯೋಜನೆಗೆ ಚಾಲನೆ ದೊರೆತಿದೆ, ಸರಪಾಡಿ ಹಾಗೂ ನರಿಕೊಂಬು ಬಹುಗ್ರಾಮ ಕು.ನೀರು ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ದೊರೆತಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸ ಚಿವ ಬಿ.ರಮನಾಥ ರೈ ಹೇಳಿದರು.
ಅವರು ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ ಮತ್ತು ಬರಿಮಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ 16.46 ಕೋಟಿ ರೂ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.IMG-20170415-WA0018

IMG-20170415-WA0019 (1)

ಇದು ಶುದ್ದ ನೀರು, ನೀರನ್ನು ಪೋಲು ಮಾಡಬೇಡಿ, ನಿಮಗೂ ಜವಬ್ದಾರಿ ಇದೆ, ನದಿಯಿಂದ ಶುದ್ಧೀಕರಿಸಿದ ನೀರು ಇದನ್ನು ಸಮರ್ಪಕವಾಗಿ ಬಳಸಿ ಎಂದು ಕಿವಿ ಮಾತು ಹೇಳಿದ ಸಚಿವ ರೈ ಕುಡಿಯುವ ನೀರಿನ ಯೋಜನೆಯನ್ನು ಬಂಟ್ವಾಳದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ, ಹೀಗಾಗಿ ಬಂಟ್ವಾಳದಲ್ಲಿ ಕುಡಿಯುವ ನೀರಿಗೆ ಬರ ಬರುವುದಿಲ್ಲ, ನೀರಿಗಾಗಿ ಯುದ್ದ ನಡೆಯುವುದಿಲ್ಲ ಎಂದರು.
ಜಿ ಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ. ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ ಶೆಟ್ಟಿ, ಮಮತಾ ಗಟ್ಟಿ, ಪದ್ಮಶೇಖರ್ ಜೈನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ಜಿಲ್ಲಾ ಕೆಡಿಪಿ ಸದಸ್ಯೆ ಜಯಂತಿ ಪೂಜಾರಿ, ತಾ.ಪಂ.ಸದಸ್ಯರಾದ ಆದಂ ಕುಂಞÂ, ಮಂಜುಳಾ ಕುಶಲ ಎಂ, ಗೀತಾ ಚಂದ್ರಶೇಖರ್, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ವಿವಿಧ ಗ್ರಾಮಪಂಚಾಯತ್ ಅಧ್ಯಕ್ಷರುಗಳಾದ ಮಮತಾ ಎಸ್.ಶೆಟ್ಟಿ, ಪುಷ್ಪಾ ಪೆರಾಜೆ, ವಿಜಯ, ಶ್ಯಾಮಲ ಶೆಟ್ಟಿ, ವಸಂತ, ಗ್ರಾಮೀಣಾಭಿವೃದ್ದಿ ಮತ್ತು ನೈರ್ಮಲ್ಯ ಇಲಾಖೆಯ ಅಧೀಕ್ಷಕ ಅಭಿಯಂತರರಾದ ರಂಗನಾಥ್ ನಾಯಕ್, ಅಧಿಕಾರಿ ಡಿ.ಆರ್ ನಾಯಕ್, ಗುತ್ತಿಗೆದಾರ ಅನಿಲ್ ಕುಮಾರ್ ಶೆಟ್ಟಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ,
ಜಿಲ್ಲಾಪಂಚಾಯತ್ ಸದಸ್ಯೆ ಮಂಜುಳಾ ಮಾವೆ ಸ್ವಾಗತಿಸಿ, ಪ್ರಸಾವನೆ ಗೈದರು, ಗ್ರಾಮೀನ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಶ್ ಕೆ.ಪಿ ಯೋಜನಾ ವರದಿ ಮಂಡಿಸಿದರು.

By Suddi9

Leave a Reply

Your email address will not be published. Required fields are marked *