ಜಿದ್ದಾ, ಸೌದಿ ಅರೇಬಿಯಾ:ಕೆಸಿಎಫ್ ಜಿದ್ದಾ ಝೋನಲ್ ಅಧ್ಯಕ್ಷರಾಗಿ ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಙಳ್, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಸ್ಸಲಾಂ ಈಶ್ವರಮಂಗಳ ಪುನರಾಯ್ಕೆಗೊಂಡಿದ್ದಾರೆ. ಕೆಸಿಎಫ್ ಜಿದ್ದಾ ಝೋನಲ್ ಮಹಾಸಭೆಯು  ಜಿದ್ದಾ ಕೆಸಿಎಫ್ ಸೆಂಟರ್ ನಲ್ಲಿ ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮವನ್ನು ಕೆಸಿಎಫ್ ಶರಫಿಯ್ಯ ಸೆಕ್ಟರ್ ಅದ್ಯಕ್ಷರಾದ ಉಮ್ಮರ್ ಫಾರೂಕ್ ಸಅದಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಈಶ್ವರಮಂಗಳ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಸಯ್ಯದ್ ಖಾಲೀದ್ ತಂಙಳ್ ಅವರು ಲೆಕ್ಕ ಪತ್ರ ಮಂಡಿಸಿದರು.IMG-20170415-WA0025
ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗ ಚೆಯರ್ ಮ್ಯಾನ್ ಸಲೀಂ ಕನ್ಯಾಡಿ ಮಹಾಸಭೆ ನಿಯಂತ್ರಿಸಿ ನೂತನ ಕಾರ್ಯಕಾರೀ ಸಮಿತಿ ರಚಿಸಿದರು. ನೂತನ ಕಾರ್ಯಕಾರೀ ಸಮಿತಿ ಈ ಕೆಳಗಿನಂತಿದೆ:
ಅಧ್ಯಕ್ಷರು: ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಙಳ್ ಕೋಲ್ಪೆ
ಪ್ರಧಾನ ಕಾರ್ಯದರ್ಶಿ: ಅಬ್ದುಸ್ಸಲಾಂ ಈಶ್ವರಮಂಗಳ
ಕೋಶಾಧಿಕಾರಿ: ಸಯ್ಯಿದ್ ಖಾಲಿದ್ ತಂಙಳ್
ಆರ್ಗನೈಝಿಂಗ್ ಪ್ರೆಸಿಡೆಂಟ್: ಮುಹಮ್ಮದ್ ಹನೀಫ್ ಸಖಾಫಿ ಸಾಲೆತ್ತೂರು
ಆರ್ಗನೈಝಿಂಗ್ ಸೆಕ್ರಟರಿ: ಇಕ್ಬಾಲ್ ಕಕ್ಕಿಂಜೆ
ಎಜುಕೇಶನಲ್ ಪ್ರೆಸಿಡಂಟ್: ಅಬ್ದುಲ್ ಮಜೀದ್ ಮುಸ್ಲಿಯಾರ್ ಸಂಪ್ಯ
ಎಜುಕೇಶನಲ್ ಸೆಕ್ರಟರಿ: ಯಹ್ಯಾ ಬಿಳಿಯೂರು
ರಿಲೀಫ್ ಪ್ರೆಸಿಡಂಟ್: ಅಬೂಬಕ್ಕರ್ ಸಿದ್ದೀಕ್ ಬಾಳೆಹೊನ್ನೂರು
ರಿಲೀಫ್ ಸೆಕ್ರಟರಿ: ಮುಹಮ್ಮದ್ ಕಲ್ಲರ್ಬೆ
ಪಬ್ಲಿಕೇಶನ್ ಪ್ರೆಸಿಡೆಂಟ್: ಇಬ್ರಾಹೀಮ್ ಕಿನ್ಯಾ
ಪಬ್ಲಿಕೇಶನ್ ಸೆಕ್ರಟರಿ: ಇಕ್ಬಾಲ್ ಮದನಿ ತ್ವಾಯಿಫ್
ಅಡ್ಮಿನ್ ಪ್ರೆಸಿಡಂಟ್: ನಝೀರ್ ಕೆಮ್ಮಾರ
ಅಡ್ಮಿನ್ ಸೆಕ್ರಟರಿ: ಶಂಸುದ್ದೀನ್ ಕುಂತೂರು
ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಸದಸ್ಯರಾದ ತಾಜುದ್ದೀನ್ ಸುಳ್ಯ, ಯಹ್ಯಾ ಬಿಳಿಯೂರು, ಮದೀನಾ ಝೋನ್ ಸದಸ್ಯರಾದ ಇಬ್ರಾಹೀಂ ಮದನಿ, ಮಕ್ಕತುಲ್ ಮುಕರ್ರಮಾ, ಕಮೀಶ್ ಮುಶಾಯತ್, ಬೇಶ್ ಜಿಝಾನ್, ತ್ವಾಯೀಫ್, ರಹೇಲಿ, ಶರಫಿಯ್ಯಾ ಸೆಕ್ಟರುಗಳಿಂದ ಆಯ್ಕೆಗೊಂಡಿದ್ದ ಝೋನಲ್ ಕೌನ್ಸಿಲರ್ ಗಳು ಭಾಗವಹಿಸಿದ್ದರು. ಹನೀಫ್ ಸಖಾಫಿ ಸಾಲೆತ್ತೂರು ಸ್ವಾಗತಿಸಿ, ಅಬ್ದುಸ್ಸಲಾಮ್ ಈಶ್ವರಮಂಗಳ ಧನ್ಯವಾದ ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *