ಬಂಟ್ವಾಳ : ಮಂಜನಗುಡ್ಡೆ ಕುರ್ಮಾನ್ ಶ್ರೀ ಅಣ್ಣಪ್ಪ. ಪಂಜುರ್ಲಿ ದೈವದ ವಾರ್ಷಿಕ ನೇಮೋತ್ಸವವು ಎರಡು ದಿನಗಳ ಕಾಲ ಜರಗಿತು ಈ ಸಂದರ್ಭ. ಕ್ಷೇತ್ರದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯು ಜರಗಿತು. ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ||ಪ್ರಭಾಕರ ಭಟ್ ಕಲ್ಲಡ್ಕ ಮತ್ತು ಬಂಟ್ವಾಳ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ಅಗಮಿಸಿದ್ದರು. ಈ ವೇಳೆ ನಡೆದ ದಾರ್ಮಿಕ ಸಭೆಯಲ್ಲಿ ಕೋಟಿಚೆನ್ನಯ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತಿಲು ಜೀರ್ಣೊದ್ದಾರ ಸಮಿತಿಯ ಪ್ರದಾನ ಕಾರ್ಯದರ್ಶಿಯಾದ ರವಿಪೂಜಾರಿಯವರು ಸಂಧರ್ಬೊಚಿತವಾಗಿ ಮಾತನಾಡಿದರು .
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಕೋಟ್ಯಾನ್ ಮುಖ್ಯ ಬಾಷಣ ಕಾರರಾಗಿ ಮಾತನಾಡುತ್ತಾ ಅಣ್ಣಪ್ಪ ಪಂಜುರ್ಲಿಯು ಕುರ್ಮಾನ್ ಮೂಲಸ್ಥಾನದಲ್ಲಿ ಬಂದು ನೆಲೆಸಿದ ಇತಿಹಾಸವನ್ನು ನೆನೆಪಿಸಿದರುˌಆ ಸಮಯದಲ್ಲಿ ದೈವದ ಆರಾದನೆ ಮಾಡಿದ ಹಿರಿಯರನ್ನು ,ಸ್ಥಳ ದಾನಮಾಡಿದವರನ್ನು ಮತ್ತು ದೈವಸ್ಥಾನ ಜೀರ್ಣೊದ್ದಾರ ಮಾಡಿದ ಎಲ್ಲರನ್ನೂ ನೆನೆಪಿಸಿದರು ಉತ್ಸ ವ ಸಮಿತಿಯ ಅದ್ಯಕ್ಷ ಕ್ರಷ್ಣಪ್ಪರವರು ಪ್ರಸ್ತಾವಿಕ ಭಾಷಣ ,ಸ್ವಾಗತಿಸಿದರುˌವೇದಿಕೆಯಲ್ಲಿ ಉದ್ಯಮಿ ಶರತ್ ಆಳ್ಟ ಅಮ್ಟಾರುˌಉತ್ಸವ ಸಮಿತಿಯ ಪ್ರದಾನಕಾರ್ಯದರ್ಶಿ ನವೀನ್ ಕುರ್ಮಾನ್ ಭಂಡಾರದ ಮನೆ ಉಪಸ್ಥಿತರಿದ್ದರುˌ ಬಿ ಕೆ ಅಣ್ಣು ಪೂಜಾರಿ ವಂದಿಸಿದರು. ದಿನೇಶ್ ಅಮ್ಟಾರು ಕಾರ್ಯಕ್ರಮ ನಿರೂಪಿಸಿದರು.
