ಸುದ್ದಿ9ಗುರುಪುರ: ಗುರುಪುರ ಗುರುನಗರ, ಬಿಲ್ಲವ ಸಮಾಜದ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಜು.20ರಂದು ವಿತರಿಸಲಾಯಿತು.
ಬಿಲ್ಲವ ಸಮಾಜದ 29 ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಗುರುನಗರ ಬಿಲ್ಲವ ಸಂಘದ ವತಿಯಿಂದ ವಿತರಿಸಲಾಯಿತು. ಗುರುಪುರಬಿಲ್ಲವ ಸಂಘದ ಅಧ್ಯಕ್ಷ ಸುಧಾಕರ ಅಮೀನ್, ಉಪಾಧ್ಯಕ್ಷ ರಾಜೇಶ್ ಪೂಜಾರಿ, ಕಾರ್ಯದರ್ಶಿ ಎಸ್.ಮಾಧವ ಸುವರ್ಣ, ಜೊತೆ ಕಾರ್ಯದರ್ಶಿ ದೀಪಕ್ ಬಂಗೇರ, ಸಂಘಟನಾ ಕಾರ್ಯದರ್ಶಿ ದೊಂಬಯ್ಯ ಪೊನ್ನೆಲ, ಕೋಶಾಧಿಕಾರಿ ಶೀನ ಕೋಟ್ಯಾನ್ ಸಲಹೆಗಾರರಾದ ಚಂದ್ರಶೇಖರ ಬಳ್ಳಿ, ದೇವದಾಸ್ ಅಂಚನ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.















