ವಾಮಂಜೂರು: ಸಂತ ರೇಮಂಡರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ವಾಮಂಜೂರು ಇಲ್ಲಿ ಕಬ್, ಬುಲ್ ಬುಲ್, ಸ್ಕೌಟ್ಸ್ ಹಾಗೂ ಗೈಡ್ಸ್ ಮಕ್ಕಳಿಗೆ ಒಂದು ದಿನದ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಥನಿ ಶಿಕ್ಷಣ ಸಂಸ್ಥೆಯ ಶಿಕ್ಷಣ ಸಂಯೋಜಕರು ಹಾಗೂ ಮಂಗಳೂರು ಪ್ರಾಂತ್ಯಾಧಿಕಾರಿಯ ಸಲಹೆದಾರರು ಆಗಿರುವ ವಂದನೀಯ ಭಗಿನಿ ಮಾರಿಯೋಲರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ರೇಷ್ಮಾ ಪಾಯ್ಸ್ ರವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಪೌಲ್ ಫೆರ್ನಾಂಡೀಸ್ ರವರು ಹಾಗೂ ಶಾಲೆಯ ಮುಖ್ಯ ಶಿಕ್ಷಕಿಯವರಾದ ಭಗಿನಿ ರೀಟಾ ಶರಲ್, ಕಬ್ ಮಾಸ್ಟರ್ ರೀಮ ಮಿನೇಜಸ್, ಸ್ಕೌಟ್ ಮಾಸ್ಟರ್ ಮಂಜುಳ ರವರು ಉಪಸ್ಥಿತರಿದ್ದರು. ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಭಗಿನಿ ಲೋಲಿಟಾ, ಶ್ರೀಮಾನ್ ಪ್ರಸಾದ್ ಮತ್ತು ಶ್ರೀಮಾನ್ ವಿರೇಶ್ ರವರು ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಮಂಜುಳ ಸ್ವಾಗತಿಸಿ ಕುಮಾರಿ ದೀಕ್ಷಿತ ಧನ್ಯವಾದ ಸಮರ್ಪಿಸಿದರು. ಪ್ರಮೀಳ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.
