ಮಂಗಳೂರು ತಾಲಿಬಾನ್ ಆಗುತ್ತಿದೆ. ಸರ್ಕಾರ ಮರುಚುನಾವಣೆಯ ಗೆಲುವಿಗಾಗಿ ಜನಸಾಮಾನ್ಯರನ್ನು ಬಲಿ ಕೊಡುತಿದೆ. ಉಸ್ತುವಾರಿ ಸಚಿವರು ಉಭಯಸಂಕಟದಲ್ಲಿ ಕಾಣೆಯಾಗಿದ್ದಾರೆ. ಅವಳಿ ಜಿಲ್ಲೆಗಳಲ್ಲಿ ಹಿಂದೆಂದು ಕಾಣದಂತ ಹಲ್ಲೆಗಳು ಸರಕಾರಿ ಉನ್ನತ ಅಧಿಕಾರಿಗಳ ಮೇಲೆ ಆಗುತ್ತಿದ್ದರೂ ಪೋಲಿಸರಿಗೆ, ಅಧಿಕಾರಿಗಳಿಗೆ ಸ್ಥೆರ್ಯ ತುಂಬುವಂತ ಕೆಲಸವನ್ನು ಸರಕಾರ ಮಾಡುತ್ತಿಲ್ಲ. ಮಾನವ ಹಕ್ಕು ಹೋರಾಟಗಾರರು ಪೋಲಿಸರು, ಜಿಲ್ಲಾಧಿಕಾರಿಗಳು ಮಾನವರಲ್ಲ ಎಂದು ತೀರ್ಮಾನಿಸಿದ ಹಾಗಿದೆ. ಕೋಮು ಸೌಹಾರ್ದ ವೇದಿಕೆಯ ಸದಸ್ಯರು ದುರ್ಬಿನು ಹಾಕಿ ಪೋಲಿಸರ ತಪ್ಪುಗಳನ್ನು ಹುಡುಕುತ್ತಿದ್ದಾರೆ. ಇವರ ನಿಜಬಣ್ಣ ಜನರಿಗೆ ಮನವರಿಕೆಯಾಗಿದೆ. ಇವರ ಸಂಘಟನೆಯ ಹೆಸರನ್ನು ಬದಲಾಯಿಸಿಕೊಳ್ಳಲು ಇದು ಸೂಕ್ತ ಸಮಯ. ಎಲ್ಲಿಯೊ ದೂರದ ಕಾಶ್ಮೀರ, ಬಿಹಾರಗಳಲ್ಲಿ ನಡೆಯುತ್ತಿದ ಘಟನೆಗಳು ನಮ್ಮ ಮನೆಬಾಗಿಲಲ್ಲಿ ನಡೆಯುತ್ತಿದ್ದರು ತಡೆಯುವಂತ ಕೆಲಸವನ್ನು ಮಾಡದೆ ಪೋಲಿಸರ ತಪ್ಪುಗಳನ್ನು ಪಟ್ಟಿ ಮಾಡುತ್ತಿರುವ ಕಾಂಗ್ರೇಸ್ ನ ಲಜ್ಜಗೆಟ್ಟ ರಾಜಕಾರಣವನ್ನು ಜಿಲ್ಲೆಯ ಪ್ರಜ್ಞಾವಂತ ಜನತೆ ಕ್ಷಮಿಸುವುದಿಲ್ಲ. ಕರ್ತವ್ಯದಲ್ಲಿರುವ ಜಿಲ್ಲಾಧಿಕಾರಿ, ಪೋಲಿಸ್ ಅಧಿಕಾರಿಗಳ ಮೇಲೆ ರಾಜರೋಷವಾಗಿ ಹಲ್ಲೆಯಾಗುತ್ತಿದ್ದರೆ ಜನಸಾಮಾನ್ಯರ ಪಾಡೇನು? ಜಿಲ್ಲೆಯಲ್ಲಿ ಭಯಭೀತ ವಾತವರಣ ಸೃಷ್ಠಿಗೆ ಯಾರು ಕಾರಣ? ಈ ಸರಕಾರದಿಂದ ಜನಸಾಮಾನ್ಯರು ರಕ್ಷಣೆ ಬಯಸಲು ಸಾದ್ಯವೆ? ಆಡಳಿತ ಪಕ್ಷದ ಸದಸ್ಯರು ಬಂದರಿನಲ್ಲಿ ಸಭೆ ಸೇರಿ ಹಲ್ಲೆಕೋರರ ಪರ ಗಡುವು ನೀಡುತ್ತಾರೆ ಎಂದಾದರೆ ಈ ಗಲಭೆಗಳ ಹಿಂದೆ ಯಾರಿದ್ದಾರೆ ಎಂಬುದು ಜಿಲ್ಲೆಯ ಬುದ್ದಿವಂತ ನಾಗರಿಕರಿಗೆ ತಿಳಿಯುವಂತಾಯಿತು. ಚುನಾವಣೆ ಹತ್ತಿರ ಬರುವಾಗ ಕೋಮು ವೈಷಮ್ಯವನ್ನು ಬಿತ್ತಿ ಅಲ್ಪಸಂಖ್ಯಾತರನ್ನು ನಿಮ್ಮ ವೋಟು ಬ್ಯಾಂಕ್ ಮಾಡುತ್ತಿರುವ ರಮಾನಾಥ ರೈಗಳ ನೀಚ ರಾಜಕೀಯ ಆಟಕ್ಕೆ ಪೋಲಿಸರನ್ನು ಬಲಿಪಶುಗಳಾಗಿ ಮಾಡುತ್ತಿರುವುದು ಖಂಡನೀಯ. ಜೋಕಟ್ಟೆ ಪ್ರಕಾಶ ಪೂಜಾರಿಯವರ ಹತ್ಯ ಯತ್ನದ ಆರೋಪಿಗಳ ಪರ ಬಹಿರಂಗ ಸಭೆ ನಡೆಸಿ ಜಿಲ್ಲೆಯ ಪೋಲಿಸರ ನೈತಿಕ ಸ್ಥೆರ್ಯವನ್ನು ಕುಂದಿಸಿ ಅಪರಾಧಿಗಳನ್ನು ಬೆಂಬಲಿಸುತ್ತಿರುವ ಕಾಂಗ್ರೇಸ್ ನ ಮಾಜಿ ಮೇಯರ್ ಅಶ್ರಫ್ ರನ್ನು ಕೂಡಲೆ ಬಂದಿಸಿ ಹಿಂದುಗಳ ಮೇಲಿನ ಹಲ್ಲೆಯ ನೈಜ ವಿಚಾರಣೆ ನಡೆಸಬೇಕು. ಜಿಲ್ಲೆಯ ಉಸ್ತುವಾರಿ ಸಚಿವರ ಓಲೈಕೆ ರಾಜಕಾರಣದಿಂದ ಕರ್ತವ್ಯ ನಿರತ ಪೋಲಿಸ್ ಅಧಿಕಾರಿಯ ಮೇಲೆ ಹಲ್ಲೆಯಂತ ಗಂಭೀರ ಪ್ರಕರಣ ನಡೆದರು ಕೊನೆಯ ಪಕ್ಷ ಅಧಿಕಾರಿಗಳಿಗೆ ಸಾಂತ್ವಾನ ಕೂಡ ಹೇಳದಿರುವಂತ ಜನವಿರೋದಿ, ಧರ್ಮವಿರೋದಿ ನಡವಳಿಕೆಯನ್ನು ಬಿಜೆಪಿ ಯುವಮೋರ್ಚಾ ಬಂಟ್ವಾಳ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಮೊನ್ನೆ ನಡೆದ ಗಲಭೆಯ ಬಗ್ಗೆ ಸಿಒಡಿ ಅಥವ ನ್ಯಾಯಾಂಗ ತನಿಖೆ ಮಾಡಬೇಕೆಂದು ಸರಕಾರವನ್ನು ಒತ್ತಾಯಿಸುತ್ತೇನೆ.
