ಮೂಡುಬಿದಿರೆ: ಜಾಗತೀಕರಣದ ಪರಿಣಾಮದಿಂದಾಗಿ ಮನುಷ್ಯ ಮನುಷ್ಯರೊಳಗಿನ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸ್ವಸಹಾಯ ಸಂಘಗಳು ಪರಸ್ಪರ ಮಾನವೀಯ ಸಂಬಂಧಗಳನ್ನು ಸಂವರ್ಧನೆಗೊಳಿಸುವಲ್ಲಿ ಶ್ರಮಿಸುತ್ತಿವೆ ಎಂದು ವಂದೇಮಾತರಂ ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರೊ.ಕೆ.ವಾಸುದೇವ ಭಟ್ ಹೇಳಿದರು.
ಕಲ್ಲಬೆಟ್ಟು ಗೋವುಗುಡ್ಡೆಯಲ್ಲಿ ನಡೆದ ಸತ್ಯನಾರಾಯಣ ಸ್ವಸಹಾಯ ಸಂಘದ ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

mbd_april12_7
ಮಾತೃಶ್ರೀ ಸ್ವಸಹಾಯ ಸಂಘದ ಸಂಯೋಜಕಿ ಸುನೀತಾ ಕಾರ್ಯಕ್ರಮ ಉದ್ಘಾಟಿಸಿದರು. ಸ್ವರ್ಣಗೌರಿ ಮಾತೃಮಂಡಳಿಯ ಅಧ್ಯಕ್ಷೆ ವೀಣಾ ಪೈ ಮತ್ತು ಸದಸ್ಯೆ ಭಾರತಿ ಮುಖ್ಯ ಅತಿಥಿಗಳಾಗಿದ್ದರು.
ಕೃಷಿ ಕೂಲಿ ಕಾರ್ಮಿಕರಾದ ಅಪ್ಪಿ ಅವರನ್ನು ಸನ್ಮಾನಿಸಲಾಯಿತು.
ಬಳಿಕ ತಂಡದ ಸದಸ್ಯರಿಂದ ಮತ್ತು ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಸ್ವಸಹಾಯ ಸಂಘಗಳ ಮೇಲ್ವೀಚಾರಕ ಅಶೋಕ್ ಉಪಸ್ಥಿತರಿದ್ದರು. ಸದಸ್ಯೆ ಗಿರಿಜಾ ಎಂ. ಕಾರ್ಯಕ್ರಮ ನಿರ್ವಹಿಸಿದರು. ಸುಶೀಲಾ ಸ್ವಾಗತಿಸಿದರು. ಸದಸ್ಯೆಯರಾದ ಸುಮಿತ್ರಾ ವರದಿ ವಾಚಿಸಿ, ಶಶಿಕಲಾ ವಂದಿಸಿದರು.

By Suddi9

Leave a Reply

Your email address will not be published. Required fields are marked *