ಮೂಡಬಿದಿರೆ: ನಿರ್ದಿಷ್ಟ ಗುರಿ ಹಾಗೂ ಗುರಿಯೆಡೆಗಿನ ನಿರಂತರ ಪ್ರಯತ್ನ ನಮ್ಮ ಸಾಧನೆಯ ಹಾದಿಯನ್ನು ಸಾಂಗವಾಗಿ ಸಾಗಲು ಸಹಾಯ ಮಾಡುತ್ತದೆ ಎಂದು ಆಳ್ವಾಸ್ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಜೀವನರಾಮ್ ತಿಳಿಸಿದರು.
ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ಆಳ್ವಾಸ್ ಪದವಿ ಕಾಲೇಜಿನ ದ್ವಿತೀಯ ವಾಣಿಜ್ಯ ತರಗತಿಯ ವಿದ್ಯಾರ್ಥಿಗಳು ಆಯೋಜಿಸಿದ್ದ `ಸಂಚಲನ್, ಮಾರ್ಚ್ ಟುವಡ್ಸ್ ಸಕ್ಸಸ್’ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ವಿದ್ಯೆ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿಸಿದೆಯೇ ಹೊರತು, ಹೊರ ಜಗತ್ತಿನ ಸೂಕ್ಷ್ಮತೆಗಳಿಗೆ , ಸಂವೇಂದನೆಗಳಿಗೆ ಸ್ಪಂದಿಸದ, ಸಾಮಾನ್ಯ ಜ್ಞಾನರಹಿತ ಅಭಿಮಾನ ಶೂನ್ಯ ವಿದ್ಯಾರ್ಥಿಗಳನ್ನಾಗಿಸಿದುದು ಖೇದಕರ ಎಂದು ತಿಳಿಸಿದರು.mbd_april12_6 (2)

mbd_april12_6 (1)



ಆಳ್ವಾಸ್ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಪ್ರೊ.ಶ್ರೀನಿವಾಸ ಪೆಜತ್ತಾಯ ಮಾತನಾಡಿ, ಸಾಧನೆಯ ಹಾದಿ ಕಠಿಣವಾದರೂ, ತಲುಪಿದ ನಂತರದ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಪ್ರಮುಖ ಜವಾಬ್ದಾರಿಯಾಗಿರುತ್ತದೆ ಎಂದರು. ಇಂದಿನ ಸ್ಪರ್ಧಾತ್ಮಕಯುಗದಲ್ಲಿ ನಮ್ಮನ್ನು ನಾವು ಪ್ರತಿ ಕ್ಷಣದ ಸ್ಪರ್ಧೆಗೆ ಮಾನಸಿಕ ಸಿದ್ದತೆಯನ್ನು ಮಾಡುವುದರೊಂದಿಗೆ, ಸದಾ ಜ್ಞಾನ ಸಂಪಾದನೆಯಲ್ಲಿ ತೊಡಗುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ತರಗತಿಯಲ್ಲಿ 13 ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಪೇಪರ್ ಪ್ರಸೆಂಟೇಶನ್‍ನ ಪುಸ್ತಕ `ಕೋಮ್ ಡಾಟ್ ಬೀಟ್’ ಹಾಗೂ ಗುಂಪು ಚರ್ಚೆಗೆ ಸಂಬಂದಿಸಿದ ವಿಡಿಯೋವನ್ನು ಬಿಡುಗಡೆಗೊಳಿಸಲಾಯಿತು.
ಸಂಚಲನ್ ಹಿನ್ನಲೆಯಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಾದ ರಸಪ್ರಶ್ನೆ, ಕೊಲಾಜ್, ಪೇಪರ್ ಪ್ರಸೆಂಟೇಶನ್, ಡಿಬೇಟ್, ಆ್ಯಡ್ ಮ್ಯೆಕಿಂಗ್, ಬ್ರೈನ್ ಸ್ಟರ್ಮಿಂಗ್, ಮೈ ಪ್ಲಾನ್ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ದ್ವಿತೀಯ ವಾಣಿಜ್ಯ ತರಗತಿಯ ದಿಶ್ಮಾ ಶೆಟ್ಟಿ ಸಮಗ್ರ ಪ್ರಶಸ್ತಿಯನ್ನು ಪಡೆದರೆ, ಶೈನಿಂಗ್ ಸ್ಟಾರ್ ಪ್ರಶಸ್ತಿ -ಭೂಮಿಕಾ ಎಂಆರ್, ರೈಸಿಂಗ್ ಸ್ಟಾರ್ ಪ್ರಶಸ್ತಿ- ಸುನೀತಾ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಡೀನ್ ಉಮೇಶ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಅಶೋಕ್ ಕೆ.ಜಿ ಉಪಸ್ಥಿತರಿದ್ದರು.
ಭೂಮಿಕಾ ಎಂಆರ್ ಕಾರ್ಯಕ್ರಮ ನಿರ್ವಹಿಸಿ, ದಿಶ್ಮಾ ಶೆಟ್ಟಿ ಸ್ವಾಗತಿಸಿದರು. ನಾಝಿಯಾ ಭಾನು ವಂದಿಸಿದರು.
—

By Suddi9

Leave a Reply

Your email address will not be published. Required fields are marked *