ಉಡುಪಿ:- ಜೇಸಿಐ ವಲಯ 15 ಇದರ ಜೇಸಿಐ ಘಟಕಗಳಾದ ಪರ್ಕಳ,ಉಡುಪಿ ಸಿಟಿ,ಉಡುಪಿ ಇಂದ್ರಾಳಿ,ಮಣಿಪಾಲ ಹಿಲ್ ಸಿಟಿ,ಕಲ್ಯಾಣಪುರ ಕೋಸ್ಮೋ ಸಿಟಿ ಇದರ ವತಿಯಿಂದ ಟೆಕ್ ಆಫ್ -2017 ತರಬೇತಿ ಕಾರ್ಯಾಗಾರ ಪರ್ಕಳ ಶಿವಂ ಹೋಟೆಲ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ವಲಯ ಉಪಾದ್ಯಕ್ಷ ಮರಿಯಪ್ಪ ಉದ್ಘಾಟಿಸಿದರು.ವೇದಿಕೆಯಲ್ಲಿ ತರಬೇತುದಾರ ರಾಜೇಶ್ ಶೆಣ್ಯೆ,ವಲಯಾಧಿಕಾರಿಗಳಾದ ಮನೋಜ್ ಕಡಬ,ರಾಘವೇಂದ್ರ ಪ್ರಭು ವಿವಿಧ ಘಟಕಗಳ ಅದ್ಯಕ್ಷರಾದ ಆಶಾ ಬಿ,ಶೆರ್ಲಿ ಮನೋಜ್,ರಿತೇಶ್,ಕರುಣಾಕರ ಬಂಗೇರ,Uಜಗದೀಶ್ ಆಚಾರ್ಯ ಮುಂತಾದವರು ಭಾಗವಹಿಸಿದ್ದರು.
