ಬಂಟ್ವಾಳ:ಕುಖ್ಯಾತ ದ್ವಚಕ್ರ ಚೋರನೊಬ್ಬನನ್ನು ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಬಳಿ ಡಿಸಿಐಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದು ,ಮೂರು ಬೈಕ್ಗಳನ್ನು ವಶ ಪಡಿಸಿದ್ದಾರೆ.ಬಂಧಿತನನ್ನು ಕಾಟಿಪಳ್ಳ ನಿವಾಸಿ ಹಂಝ@ ಬ್ರೋ ಹಂಝ ಎಂದು ಹೆಸರಿಸಲಾಗಿದೆ.

IMG-20170407-WA0031ಕಾರ್ಯಾಚರಣೆಯ ವೇಳೆ ಇನ್ನೊರ್ವ ಆರೋಪಿ ಸಿದ್ದಿಕ್@ಮಚ್ಚ ಎಂಬಾತ ಪರಾರಿಯಾಗಿದ್ದಾನೆ. ಆರೋಪಿಗಳು ಕಳವುಗೈದ ಬೈಕನ್ನು ಮಾರಟಕ್ಕೆ ಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯನ್ವಯ ಡಿಸಿಐಬಿ ಇನ್ಸ್ಪೆಕ್ಟರ್ ಅಮಾನುಲ್ಲಾ ಖಾನ್ ಮತ್ತವರ ಸಿಬ್ಬಂದಿಗಳು ಧಾಳಿ ಕಾರ್ಯಾಚರಣೆ ನಡೆಸಿದ್ದಾರೆ.ಕಳ್ಳತನಕ್ಕೆ ಸಂಬಂಧಿಸಿ ಆರೋಪಿಯಿಂದ ಮೂರು ಬೈಕನ್ನು ವಶಪಡಿಸಿ ಕೊಂಡಿದ್ದು,ಪ್ರಕರಣದ ಮುಂದಿನ ತನಿಖೆಗಾಗಿ ಆರೋಪಿ ಮತ್ತು ಬೈಕ್ ನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.ಬಂಧಿತ ಆರೋಪಿಯ ವಿರುದ್ದ ಮಂಗಳೂರು ಉತ್ತರ,ಪುತ್ತೂರು ನಗರ,ಬಂಟ್ವಾಳ ನಗರ,ಬದಿಯಡ್ಕ ಠಾಣೆಯಲ್ಲೂ ಕಳ್ಳತನ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *