ಬಂಟ್ವಾಳ: ಯಕ್ಷಗಾನ ಗ್ರಂಥಕರ್ತ, ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ಕನ್ನಡದ ಕಲ್ಹಣ ಪ್ರಶಸ್ತಿ ಪ್ರದಾನ ಸಮಾರಂಭವು ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಎ.12 ರಂದು ಅಪರಾಹ್ನ 3 ಗಂಟೆಗೆ ನಡೆಯಲಿದ್ದು ಆಮಂತ್ರಣ ಪತ್ರಿಕೆಯನ್ನು ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಕಾರ್ಯನಿರ್ವಹನಾಧಿಕಾರಿ ಸಿಪ್ರಿಯಾನ್ ಮಿರಾಂದ, ತಾಲೂಕು ಕ.ಸಾ.ಪ. ಅಧ್ಯಕ್ಷ ಕೆ. ಮೋಹನ್ ರಾವ್ , ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಟ್ರಸ್ಟ್ ಅಧ್ಯಕ್ಷ ಬಿ.ತಮ್ಮಯ್ಯ, ಕೋಶಾಧಿಕಾರಿ ಗಂಗಾಧರ ಭಟ್ ಕೊಳಕೆ, ಪ್ರಮುಖರಾದ ವಿ.ಸುಬ್ರಮಣ್ಯ ಭಟ್, ರಾಮ್ ಗಣೇಶ್, ಕೃಷ್ಣ ಶರ್ಮ ಉಪಸ್ಥಿತರಿದ್ದರು. ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟರ ಜನ್ಮದಿನದ ಸಂಸ್ಮರಣೆ ನೀರ್ಪಾಜೆ ಭೀಮ ಭಟ್ಟರ ಟ್ರಸ್ಟ್ ಮತ್ತು ಅಭಿಮಾನಿ ಬಳಗ ಇದರ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ದೀಪ ಪ್ರಜ್ವಲನೆ ನೆರವೇರಿಸಲಿದ್ದು ಪೊಳಲಿ ಶ್ರೀ ವಿವೇಕ ಚೈತನ್ಯಾನಂದ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ಭೀಮ ಭಟ್ಟರ ಸಂಸ್ಮರಣೆ ನೆರೆವೇರಿಸುವರು. ಹಿರಣ್ಯ ವೆಂಕಟೇಶ್ವರ ಭಟ್ ಅಭಿವಂದನಾ ಭಾಷಣ ಮಾಡಲಿದ್ದು ನಿವೃತ್ತ ಉಪನ್ಯಾಸಕ ಪುಂಡಿಕಾೈ ಗಣಪಯ್ಯ ಭಟ್ ಉಪಸ್ಥಿತರಿರುವರು.
