ಈ ಶತಮಾನದಜಗತ್ತಿನ ದೊಡ್ಡಣ್ಣವೆಂದೇ ಪ್ರಸಿದ್ಧಿ ಪಡೆದ ಅಮೇರಿಕಾವು ಇಂದು ಇಡೀ ಪ್ರಪಂಚಕ್ಕೇಚಾಲಕನಸ್ಥಾನದಲ್ಲಿ ನಿಂತಿರುವುದೇನೋನಿಜ. ಜಗತ್ತಿನಎಲ್ಲಾಆಗು ಹೋಗುಗಳಲ್ಲಿ ದೊಡ್ಡಣ್ಣಅಮೆರಿಕಾದಛಾಯೆಒಂದಲ್ಲಒಂದುರೀತಿಯಲ್ಲಿಇದ್ದೇಇದೆಯೆಂದರೆಅತಿಶಯೋಕ್ತಿಯಾಗಲಾರದು.ಏಕೆಂದರೆಎಲ್ಲಾ ವಿಚಾರದಲ್ಲೂಅಷ್ಟೊಂದು ಮುಂದುವರಿದಿದೆಅಮೇರಿಕಾ!!!ಆದರೆ ಸುಮಾರು 1930ರದಶಕದಲ್ಲಿಅಮೇರಿಕಾವು ನಿರಂತರವಾಗಿಕುಖ್ಯಾತದರೋಡೆಕೋರರಹಾವಳಿಯಿಂದಾಗಿ ತತ್ತರಿಸಿ ಹೋಗಿತ್ತೆಂದರೆ ನಂಬುತ್ತೀರಾ? ಹೌದುನಂಬಲೇ ಬೇಕು,ಅಮೇರಿಕಾ ಸರ್ಕಾರವೇಇಂತಹದರೋಡೆಕೋರರನ್ನುನಿಯಂತ್ರಿಸಲಾರದೇಚಿಂತಾಕ್ರಾಂತವಾಗಿದ್ದ ಕಾಲವಾಗಿತ್ತದು. ಹೇಗಾದರೂದರೋಡೆಕೋರರನ್ನುಮಟ್ಟ ಹಾಕಲೇಬೇಕೆಂದುಚಿಂತಿಸುತ್ತಿದ್ದಅಮೇರಿಕಾ ಸರ್ಕಾರ, ಅಂದುಕಠಿಣವಾದಜೈಲೊಂದನ್ನು ನಿರ್ಮಿಸಿ ದರೋಡೆಕೋರರನ್ನುಅದರಲ್ಲಿಕೂಡಿಹಾಕಿಅವರನ್ನು ನಿಯಂತ್ರಿಸುವ ನಿರ್ಧಾರವನ್ನುಕೈಗೊಂಡಿತ್ತು.ಅದಕ್ಕಾಗಿಅಮೇರಿಕಾಆಯ್ಕೆ ಮಾಡಿಕೊಂಡಿದ್ದುಪ್ರಪಂಚದಲ್ಲೇಅತ್ಯಂತ ವಿಶಿಷ್ಟವಾದ ಅಲ್ಕಾಟ್ರಾಝ್ ನಡುಗಡ್ಡೆ(ದ್ವೀಪ) ಪ್ರದೇಶವನ್ನು.ಇದುಇರುವುದುಅಮೆರಿಕಾದಸ್ಯಾನ್‍ಫ್ರಾನ್ಸಿಸ್ಕೋದ ಸಮುದ್ರದಮಧ್ಯದಲ್ಲಿ.ಇಲ್ಲಿಖೈದಿಗಳ ಪಾಲಿಗೆ ಭಯಾನಕವಾದ ಹಾಗೂ ಮರಣವನ್ನೇಕೊಡುಗೆಯಾಗಿ ನೀಡುವಂತಹಜೈಲೊಂದನ್ನು ನಿರ್ಮಾಣ ಮಾಡಲಾಗುತ್ತದೆ. ಹಾಗೂ ಈ ಜೈಲಿಗೆಅಲ್ಕಾಟ್ರಾಝ್ ದ್ವೀಪದ ಹೆಸರನ್ನೇಇಟ್ಟುಅಲ್ಕಾಟ್ರಾಝ್‍ಜೈಲೆಂದುಮರುನಾಮಕರಣ ಮಾಡಲಾಗುತ್ತದೆ.
ಏನಿದುಅಲ್ಕಾಟ್ರಾಝ್? 
ಅಮೇರಿಕಾದಪ್ರಮುಖ ನಗರಸ್ಯಾನ್‍ಫ್ರಾನ್ಸಿಸ್ಕೋದಿಂದಅಂದಾಜುಐದು ಕಿ.ಮೀ ದೂರದ ಸಮುದ್ರ ಮಧ್ಯದಸುಮಾರು 22 ಎಕರೆ ಭೂಪ್ರದೇಶವನ್ನುಹೊಂದಿದ ದ್ವೀಪವೇಇಂದುಜಗತ್ತೇ ಗುರುತಿಸಿರುವ ಅಲ್ಕಾಟ್ರಾಝ್. ಇತಿಹಾಸದ ಪುಟಗಳು ಹೇಳುವ ಪ್ರಕಾರ ಈ ದ್ವೀಪದ ಮೂಲ ಒಡೆಯ‘ಜ್ಯೂಲಿಯನ್ ವೋಕ್ರ್ಸ್‍ಮ್ಯಾನ್’ಆಗಿದ್ದು, ಇದನ್ನು1846ರಲ್ಲಿ ಮೆಕ್ಸಿಕೋದ ಅಂದಿನ ಗವರ್ನರ್‘ಪಿಯೋ ಫಿಕೋ’ರಿಗೆ ನೀಡಿದನೆಂದು ಹೇಳಲಾಗಿದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ದ್ವೀಪದಲ್ಲಿ ಮೊದಲಾಗಿ ದೀಪಸ್ತಂಭದ ನಿರ್ಮಾಣದೊಂದಿಗೆಅಭಿವೃದ್ಧಿಗೆ ಮುನ್ನುಡಿ ಹಾಡಲಾಯಿತು.ನಂತರದಲ್ಲಿಇಲ್ಲಿನಸರಕಾರದ ಅಡಳಿತಾವಧಿಯಲ್ಲಿ ಈ ದ್ವೀಪವನ್ನುಅಮೆರಿಕಾದ ಮಿಲಿಟರಿಕೋಟೆಯಾಗಿ ಪ್ರಾರಂಭಿಸಿ, ನಂತರ1868ರಲ್ಲಿ ಮಿಲಿಟರಿಜೈಲಾಗಿ ಪರಿವರ್ತಿಸಿ ನಂತರದಲ್ಲಿ 1933 ರಿಂದ 1963 ರವರೆಗೆ ಸಂಯುಕ್ತಅಮೇರಿಕಾರಾಜ್ಯಗಳ ಜೈಲಾಗಿಬಳಸಿಕೊಳ್ಳಲಾಗಿತ್ತು.ಏತನ್ಮಧ್ಯೆಇಲ್ಲಿನ ಮೂಲವಾಸಿಗಳು ಅತಿಕ್ರಮಣಗೈದುಈ ದ್ವೀಪವನ್ನು ಸುಮಾರುಒಂಭತ್ತು ತಿಂಗಳುಗಳ ಕಾಲ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದು, 1986ರಲ್ಲಿ ಈ ದ್ವೀಪವನ್ನುಆದಿವಾಸಿಗಳಿಂದ ಅಮೆರಿಕಾ ಸರಕಾರವುವಿಮೋಚನೆಗೊಳಿಸಿ ‘ರಾಷ್ಟ್ರೀಯಐತಿಹಾಸಿಕ ಭೂಪ್ರದೇಶ’ವೆಂದು ಘೋಷಿಸಲಾಗುತ್ತದೆ. ತದನಂತರದಲ್ಲಿ ಈ ಪ್ರದೇಶದಲ್ಲಿಅದಾಗಲೇ ಅಸ್ತಿತ್ವದಲ್ಲಿದ್ದ ಜೈಲನ್ನುಇನ್ನಷ್ಟು ಆಧುನಿಕೀಕರಣಗೊಳಿಸಿ ಕ್ರೂರಮನಸ್ಥಿತಿಯ ಹಾಗೂ ನಿಯಂತ್ರಿಸಲಾರದದರೋಡೆಕೋರರನ್ನು ಹಾಗೂ ಖೈದಿಗಳನ್ನು ಬಂಧಿಸಿಡುವ ವಿಶೇಷ ಜೈಲನ್ನಾಗಿ ಪರಿವರ್ತಿಸಲಾಯಿತು.ಆದ್ದರಿಂದಅಲ್ಕಾಟ್ರಾಝ್‍ಎಂದಕೂಡಲೇ ನೆನಪಿಗೆ ಬರುವುದು‘ಕಾರುಣ್ಯರಹಿತಉಕ್ಕಿನ ಕಂಬಿಗಳ ಜೈಲು’ಎಂದೇ ಹೇಳಬಹುದು.
ಅಲ್ಕಾಟ್ರಾಝ್‍ಜೈಲಿನ ಸ್ವರೂಪ:
ಎಂತಹಜೈಲನ್ನೇ ಭೇದಿಸಿ ಪರಾರಿಯಾಗುವಕುಖ್ಯಾತ ಪಾತಕಿಗಳ ಪಾಲಿಗೆ ಈ ಜೈಲು ಏಳುಸುತ್ತಿನ ಕೋಟೆ, ಪರಮ ಪಾತಕಿಗಳಿಗೆ ಉಕ್ಕಿನ ಭದ್ರಕೋಟೆಯೆಂದೇ ಪ್ರಸಿದ್ಧಿ. ಇಂತಹಜೈಲಿಗೆ ಖೈದಿಗಳಾಗಿ ಕಳುಹಿಸಲ್ಪಡುವವರೆಲ್ಲರೂ ಭಯಾನಕಹಾಗೂ ಕ್ರೂರಅಪರಾಧಿಗಳೇ ಆಗಿರುತ್ತಾರೆಎಂದುಹೇಳಬಹುದು.ಆದರೆ ಮನುಷ್ಯನ ಯೋಚನೆಗಳಿಗೇನೂ ಕೊರತೆಯಿಲ್ಲಎಂಬಂತೆಈ ಜೈಲನ್ನೂ ಹಲವಾರು ಮಂದಿ ಬೇಧಿಸಿ ಪಲಾಯನಗೈಯುವ ಪ್ರಯತ್ನವನ್ನೂ ಮಾಡಿದ್ದಾರೆ.ಆದರೆಯಾವೊಬ್ಬನೂಇದರಲ್ಲಿಯಶಸ್ಸುಕಾಣಲೇಇಲ್ಲವೆಂದು ಹೇಳಬಹುದು.ಇಲ್ಲಿನಜೈಲಿನ ಕೊಠಡಿಗಳ ಕಂಬಿಗಳನ್ನು ಕಬ್ಬಿಣದ ಬದಲಾಗಿ ಉಕ್ಕಿನ ಸರಳುಗಳಿಂದ ಮಾಡಲಾಗಿದ್ದುಕತ್ತರಿಸುವುದು ಅಷ್ಟು ಸುಲಭದ ಮಾತÀಲ್ಲ.ಜೈಲನ್ನೇನೋಕಷ್ಟಪಟ್ಟು ಮುರಿಯಬಹುದು, ಕಾವಲಿಗೆ ನಿಯೋಜಿಸಲಾಗಿರುವ ಸೈನಿಕರಕಣ್ತಪ್ಪಿಸಬಹುದುಆದರೆಅಲ್ಕಾಟ್ರಾಝ್‍ನ ಸಮುದ್ರವನ್ನುಈಜಿಹೊರಬರುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆಇಲ್ಲಿನ ಸಮುದ್ರದ ನೀರಿನಉಷ್ಣತೆ-540ಸೆಲ್ಸಿಯಸ್‍ವರೆಗೂ ಇಳಿಯುವುದರಿಂದ ಇಲ್ಲಿನ ಸಮುದ್ರವನ್ನುದಾಟಲು ಸಾಧ್ಯವೇಇಲ್ಲ, ದಾಟುವ ಪ್ರಯತ್ನ ಮಾಡಿದರಂತೂ ಉಳಿಯುವುದೇ ಇಲ್ಲಎನ್ನಬಹುದು. ಮತ್ತು ಈ ದ್ವೀಪದಒಂದುದಡದಿಂದಇನ್ನೊಂದುದಡಕ್ಕೆ ಸುಮಾರುಎರಡು ಕಿ.ಮೀಗಳಷ್ಟು ಅಗಾಧದೂರವಿರುವುದೂಇದಕ್ಕೆ ಪ್ರಮುಖಕಾರಣವಾಗಿದೆ.
ಡಿ-ಬ್ಲಾಕ್‍ನವಿಶೇಷತೆಗಳು:

ಈ ಜೈಲಿನಡಿ-ಬ್ಲಾಕ್‍ನ ತಳಮಹಡಿಯ ಕೊಠಡಿ ಸಂಖ್ಯೆ 9 ರಿಂದ 14 ರ ವರೆಗಿನ ಕೋಣೆಗಳನ್ನು ಅತ್ಯಂತ ಶೋಚನೀಯ ಸ್ಥಿತಿಯ ಕೋಣೆಗಳೆಂದು ಕರೆಯಲಾಗುತ್ತದೆ.ಏಕೆಂದರೆ ಈ ಕೋಣೆಗಳು ಸೂರ್ಯನ ಸೂಕ್ಷ್ಮಕಿರಣವೂ ಪ್ರವೇಶಿಸಲಾರದಷ್ಟು ಕಗ್ಗತ್ತಲಿನಿಂದಕೂಡಿದ್ದುಅತ್ಯಂತಕಡಿಮೆಉಷ್ಣತೆಯಿಂದಕೂಡಿದೆ.ಇಲ್ಲಿಕ್ರೂರ ಖೈದಿಗಳನ್ನು ಒಬ್ಬಂಟಿಯಾಗಿ, ಅರೆಬೆತ್ತಲೆಯಾಗಿಯಾ ಬೆತ್ತಲೆಯಾಗಿ ನೆಲದಲ್ಲಿ ಮೂರರಿಂದ ಹತ್ತೊಂಬತ್ತು ದಿನಗಳವರೆಗೆ ಕೂಡಿ ಹಾಕಲಾಗುತ್ತದೆ.ಖೈದಿಗಳಿಗೆ ಆಹಾರವನ್ನು (ಅತ್ಯಲ್ಪ ಪ್ರಮಾಣದ ಬ್ರೆಡ್ ಹಾಗೂ ನೀರು ಹಾಗೂ ಮೂರು ದಿನಕ್ಕೆ ಒಂದು ಊಟ) ಕೋಣೆಯ ಒಳಗೇ ನೀಡಲಾಗುತ್ತದೆ.ಖೈದಿಗಳು ಇದರಲ್ಲಿ ಬಂಧಿಯಾಗಿದ್ದಅವಧಿಯಲ್ಲಿಯಾವುದೇ ಕೆಲಸವನ್ನು ಮಾಡಲು ಅವಕಾಶವಿಲ್ಲವಾಗಿದ್ದು, ವಾರಕ್ಕೆರಡು ಬಾರಿಯಷ್ಟೇಟೂತ್‍ಬ್ರಶ್ ಮತ್ತು ಸೋಪ್‍ರಹಿತ ಸ್ನಾನಕ್ಕೆಅವಕಾಶವನ್ನು ನೀಡಲಾಗುತ್ತದೆ.ಇಲ್ಲಿಖೈದಿಗಳಿಗೆ ಚಿತ್ರ ಹಿಂಸೆಯನ್ನು ನೀಡುವ ಮೂಲಕ ಹಸಿವಿನಿಂದಲೇ ಕೂಡಿಹಾಕಲಾಗುತ್ತದೆ.ಈ ಐದು ಕೊಠಡಿಗಳನ್ನು ಜೈಲಿನ ಅಧಿಕಾರಿಗಳಭಾಷೆಯಲ್ಲಿ‘ಬೆತ್ತಲೆ ಕೊಠಡಿ’ಗಳೆಂದೇ ಕರೆಯಲಾಗುತ್ತದೆ.
ಇಲ್ಲಿನಕಾರಾಗ್ರಹದ ಆಡಳಿತಾಧಿಕಾರಿಯಾಗಿರುವ ಅಲ್ವಿನ್‍ಜೆ.ಇಸೌ ಹೇಳುವಂತೆ ಡಿ-ಬ್ಲಾಕ್ ಕೋಣೆಗಳಿಗೆ ಆಗಮಿಸುವ ಖೈದಿಗಳನ್ನು ಬಟ್ಟೆ ಬಿಚ್ಚಿಗಬ್ಬುನಾತ ಬೀರುವಕಡುಕಪ್ಪು ಬಣ್ಣ ಬಳಿದ ಕೋಣೆಗಳೊಳಗೆ ತಳ್ಳಲಾಗುತ್ತದೆ ಮತ್ತುರಾತ್ರಿಯ ಹೊತ್ತುಎರಡು ಕೈಗಳನ್ನು ಎತ್ತಿಗೋಡೆಗೆಚೈನ್‍ನಿಂದಕಟ್ಟಿದಸ್ಥಿತಿಯಲ್ಲಿ ನಿಲ್ಲಿಸಿಯೇ ಇರಿಸಲಾಗುತ್ತದೆ.ಪ್ರತೀ ದಿನದಲ್ಲಿಒಂಬತ್ತು ಗಂಟೆಗಳ ಕಾಲ ಕೈಗಳನ್ನು ಕಟ್ಟಿ ಮೊಣಕಾಲೂರಿದ ಸ್ಥಿತಿಯಲ್ಲಿರಿಸಲಾಗುತ್ತದೆ.ಇಲ್ಲಿ 19 ದಿನಗಳ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಖೈದಿಗಳನ್ನು ಕೆಂಪು ಟ್ಯಾಗ್ ಅಳವಡಿಸಿ ಪ್ರತ್ಯೇಕವಾದಎರಡನೇಯದರ್ಜೆಯಕೋಣೆಯಲ್ಲಿ ಮೂವತ್ತು ದಿನಗಳ ಕಾಲ ಇಡಲಾಗುತ್ತದೆ.ಇದಾದ ನಂತರವೂ ಆ ಖೈದಿಯು ಮತ್ತದೇಕ್ರೌರ್ಯವನ್ನು ತೋರ್ಪಡಿಸಿದಲ್ಲಿ ಅಂತವರನ್ನು ಡಿ-ಬ್ಲಾಕ್‍ನಲ್ಲೇ ಶಾಶ್ವತವಾಗಿಇರಿಸಲಾಗುತ್ತದೆಎನ್ನುತ್ತಾರೆ.
ಈ ಕೊಠಡಿಗಳು 5 ಅಡಿ ಅಗಲ 9 ಅಡಿ ಉದ್ದ ಮತ್ತು 7 ಅಡಿ ಎತ್ತರದಿಂದಕೂಡಿದ್ದು, ಇಲ್ಲಿನ ಚಳಿಯ ತೀವ್ರತೆಗೆರಕ್ತವೇ ನಿಧಾನವಾಗಿ ಹೆಪ್ಪುಗಟ್ಟಲಾರಂಭಿಸುತ್ತದೆ.ಈ ಕೋಣೆಯೊಳಗೆ ಬಂಧಿಯಾದ ಖೈದಿಗಳಿಗೆ ಹೊರಗಿನ ಪ್ರಪಂಚಅಥವಾಯಾವುದೇ ವ್ಯಕ್ತಿಗಳೊಂದಿಗೆ ಸಂಪರ್ಕವೇ ಸಾಧ್ಯವಾಗುತ್ತಿರಲಿಲ್ಲ. ನಿಧಾನವಾಗಿ ಖೈದಿಗಳು ಮತಿವಿಕಲರಾಗಿಇಲ್ಲೇ ಸಾಯಬೇಕುಇದು ಡಿ-ಬ್ಲಾಕ್‍ನ ವಿಶೇಷತೆ.ಇದೇರೀತಿಯಾಗಿ ಈ ಕೋಣೆಯಲ್ಲಿರಾಬರ್ಟ್ ಸ್ಟ್ರಾಂಗ್ ಎಂಬ ಖೈದಿಯನ್ನೂ ಬಂಧಿಸಿಡಲಾಗಿತ್ತು.ಈತ ಸುಮಾರು 17 ವರ್ಷಗಳ ದೀರ್ಘಕಾಲ ಇಲ್ಲಿ ಬಂಧಿಯಾಗಿದ್ದು, ಈತತನ್ನಕೂದಲನ್ನುತಾನೇಕಿತ್ತುಕಿತ್ತು ಹುಚ್ಚನಾಗಿದ್ದನೆಂದುಜೈಲಿನ ವೈದ್ಯಕೀಯ ದಾಖಲೆಗಳು ತಿಳಿಸುತ್ತದೆ.ಆದ್ದರಿಂದಅಲ್ಕಾಟ್ರಾಸ್ಕ್‍ಜೈಲುಇಲ್ಲಿಯವರೆಗೂಯಾರಿಗೂ ಒಲಿದಿಲ್ಲ ಹಾಗೂ ಈ ಜೈಲಿನಿಂದಪರಾರಿಯಾಗಿಯಾವೊಬ್ಬಖೈದಿಯೂ ವಾಪಸ್‍ಜೀವಂತವಾಗಿ ಬಂದ ಉದಾಹರಣೆಗಳೇ ಇಲ್ಲವೆನ್ನಬಹುದು.
ಜೈಲನ್ನು ಭೇದಿಸುವ ವಿಫಲ ಯತ್ನಗಳು:

ಈ ಅಬೇಧ್ಯವಾದಜೈಲನ್ನು ಭೇದಿಸುವಪ್ರಥಮ ಪ್ರಯತ್ನ 1939ರಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಈ ಜೈಲುಪಾಲಾದಜಾರ್ಜ್‍ಬಾರ್ಕರ್‍ಎಂಬಾತನಿಂದ ನಡೆÉಯುತ್ತದೆ.ಈತಕುಖ್ಯಾತಮಾರಕ ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆದಾರ ಮತ್ತುದರೋಡೆಕೋರನಾಗಿದ್ದುಈತನನ್ನುಅಲ್ಕಾಟ್ರಾಸ್ಕ್‍ಜೈಲಿನ ಡಿ-ಬ್ಲಾಕ್‍ನಲ್ಲಿಬಂಧಿಸಿಡಲಾಗಿರುತ್ತದೆ.ಉಕ್ಕಿನಕಂಬಿಗಳನ್ನು ಭೇದಿಸಿ ಹೇಗಾದರೂ ಪರಾರಿಯಾಗಲೇಬೇಕೆಂದು ಸಂಕಲ್ಪ ಮಾಡಿದ್ದಬಾರ್ಕರ್‍ಹೇಗೋ ಉಕ್ಕಿನ ಸರಳುಗಳನ್ನು ನಿಧಾನವಾಗಿಕತ್ತರಿಸುತ್ತಾಜೈಲಿನಎರಡು ಸರಳುಗಳನ್ನು ಕತ್ತರಿಸಿ ಮೂರನೇ ಸರಳನ್ನು ಕತ್ತರಿಸುವುದೇಆತನಿಗೆ ಸವಾಲಾಗುತ್ತದೆ.ಕೊನೆಗೂ ಇತರಇಬ್ಬರು ಖೈದಿಗಳ ಸಹಕಾರದೊಂದಿಗೆ ಕತ್ತರಿಸಿ 1939 ರಲ್ಲಿಒಟ್ಟು 5 ಮಂದಿ ಖೈದಿಗಳು ಜೈಲಿನ ಗೋಡೆಯನ್ನುದಾಟಿ ಹೊರಬರುತ್ತಾರೆ.ಆದರೆ ಈ ಹಂತದಲ್ಲಿ ನಾಲ್ಕು ಮಂದಿ ಮತ್ತೆ ಸೆರೆಯಾಗಿಜೈಲು ಪಾಲಾಗುತ್ತಾರೆ.ಆದರೆ ಬಾರ್ಕರ್‍ಇಲ್ಲಿನಸೈನಿಕರಗುಂಡಿಗೆ ಬಲಿಯಾಗುವ ಮೂಲಕ ಪ್ರಥಮ ಪ್ರಯತ್ನವಿಫಲವಾಗುತ್ತದೆ.ನಂತರಸುಮಾರು 24 ವರ್ಷಗಳು ಕಳೆದ ನಂತರಅಂತಹುದೇಒಂದು ಪ್ರಕರಣಬೆಳಕಿಗೆ ಬರುತ್ತದೆ.ಇಲ್ಲಿಜಾನ್‍ಎಂಬಾತಜೈಲಿನಲ್ಲಿ ಸಭ್ಯಖೈದಿಯಂತೆ ನಟಿಸಿಕೊಂಡು ಜೈಲಿನ ಅಡುಗೆ ಮನೆಯಲ್ಲಿಜವಾಬ್ದಾರಿ ನಿರ್ವಹಿಸುವ ಅವಕಶ ಪಡೆಯುತ್ತಾನೆ.ಅಡುಗೆ ಮನೆಯಲ್ಲಿದೊರೆಯುವ ಸಾಮಾಗ್ರಿಗಳನ್ನು ಬಳಸಿ ಸುಮಾರುಐದು ವರ್ಷಗಳ ಕಾಲ ಉಕ್ಕಿನ ಸರಳುಗಳನ್ನು ಕತ್ತರಿಸುತ್ತಾ1962ರಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹಲವಾರು ಕೈಗವಸುಗಳನ್ನು ಜೋಡಿಸಿ ಅವುಗಳನ್ನು ಲೈಫ್‍ಜಾಕೆಟ್‍ನ್ನಾಗಿ ಮಾಡಿಕೊಂಡು ಸಮುದ್ರದ ಮೂಲಕ ಪಲಾಯನಗೈಯುವ ಪ್ರಯತ್ನವನ್ನು ಮಾಡಿಅದರಲ್ಲಿ ವಿಫಲನಾಗಿ ಮತ್ತೆಜೈಲುಪಾಲಾಗುತ್ತಾನೆ.
ಜಾನ್‍ಗಾಯಲ್ ಎಂಬ ಖೈದಿ ಭಿನ್ನವಾದ ಪಲಾಯನಪ್ರಯತ್ನವನ್ನು ಮಾಡುತ್ತಾನೆ. ಈತಜೈಲಿನಲ್ಲಿ ನಿಷ್ಠಾವಂತಖೈದಿಯಂತೆ ನಾಟಕವಾಡಿ ಮಿಲಿಟರಿ ಅಧಿಕಾರಿಗಳಿಗೆಂದೇ ಇರುವಲ್ಯಾಂಡ್ರಿಯಲ್ಲಿ ಕೆಲಸ ನಿರ್ವಹಿಸುತ್ತಾ ಮಿಲಿಟರಿಅಧಿಕಾರಿಯ ಸಮವಸ್ತ್ರವೊಂದನ್ನುಕದಿಯುತ್ತಾನೆ. ಈ ರಿತಿಯಾಗಿ ಮಿಲಿಟರಿಅಧಿಕಾರಿಯ ಸಮವಸ್ತ್ರವನ್ನು ಧರಿಸಿಕೊಂಡು ಇಲ್ಲಿಗೆ ಸಾಮಾಗ್ರಿಗಳನ್ನು ಹೊತ್ತುತರುವ ಬೋಟ್ ಮೂಲಕ ಅಲ್ಕಾಟ್ರಾಝ್‍ಜೈಲಿನಿಂದಹೊರಬೀಳುತ್ತಾನೆ. ಆದರೆಪಾಪಿ ಹೋದಲ್ಲಿ ಮೊಣಕಾಲುದ್ದ ನೀರೆಂಬಂತೆಈ ಬೋಟ್‍ನೇರವಾಗಿಮತ್ತೊಂದುಜೈಲಿಗೆಹೋಗಿ ಅಲ್ಲಿ ಮತ್ತೆಆತಬಂಧಿಸಲ್ಪಟ್ಟುಜೈಲು ಪಾಲಾಗುತ್ತಾನೆ. ಅದೇರೀತಿಜಾನ್ ಮೋರಿಸ್ ಮತ್ತು ಮೂರು ಮಂದಿ ಸಹಚರರುಕುತೂಹಲಕಾರಿರೀತಿಯಲ್ಲಿಇಲ್ಲಿಂದ ಪರಾರಿಯಾಗುವ ಪ್ರಯತ್ನವನ್ನು ಮಾಡುತ್ತಾರೆ. ತಮ್ಮನ್ನುಕೂಡಿ ಹಾಕಿದ್ದಕೊಠಡಿಯಕೋಡೆಯನ್ನೇಕನ್ನಕೊರೆದುಡಿ-ಬ್ಲಾಕ್‍ನ ಸಣ್ಣದ್ವಾರದ ಮೂಲಕ ಹಲವಾರು ಜಾಕೆಟ್‍ಗಳನ್ನು ಜೋಡಿಸಿ ಲೈಫ್‍ಬೋಟ್‍ನ್ನು ತಯಾರಿಸಿ ಸಮುದ್ರದ ಮೂಲಕ ಪರಾರಿಯಾಗುವಯೋಜನೆಯನ್ನುರೂಪಿಸುತ್ತಾನೆ. ಆದರೆಆತನಿಗೆ ಸಮುದ್ರದಉಷ್ಣತೆಯಅರಿವಿಲ್ಲದೆಅಲ್ಲಿಂದ ಹೊರ ಬೀಳುತ್ತಾನೆ. ಅಂದು ಸಮುದ್ರದಉಷ್ಣತೆ -550ಸೆಲ್ಸಿಯಸ್‍ಗೆ ಇಳಿದಿದ್ದು, ಲೈಫ್‍ಬೋಟ್‍ಈತನಿಗೆಕೈಕೊಟ್ಟುಸಮುದ್ರವನ್ನುಈತಈಜಲಾರದೇಸಮುದ್ರದಲ್ಲೇಜಲಸಮಾಧಿಯಾದನೆಂದುಜೈಲಿನ ದಾಖಲೆಗಳು ತಿಳಿಸುತ್ತವೆ.
ನಂತರದಲ್ಲಿಅಲ್ದಿಮಾಸ್ಟರ್ ಎಂಬ ಕುಖ್ಯಾತ ಪಾತಕಿಯಕ್ರೌರ್ಯದಮನೋಭಾವವನ್ನುಅರಿತುಅಲ್ಕಾಟ್ರಾಝ್‍ನ ವಿಶೇಷ ಹಾಗೂ ಅತ್ಯಂತ ಭಯಾನಕವಾದ ಡಿ-ಬ್ಲಾಕ್‍ನಕತ್ತಲ ಕೋಣೆಯಲ್ಲಿಆತನನ್ನುಕೂಡಿ ಹಾಕಲಾಗುತ್ತದೆ.ಇಲ್ಲಿನ ಕೋಣೆಗಳ ಭಯಾನಕತೆಯನ್ನು ನೋಡಿಯೇಈತಅಕ್ಷರಶಃ ಕುಗ್ಗಿ ಹೋಗಿದ್ದ.ಸುಮಾರು ನಾಲ್ಕು ವರ್ಷಗಳ ಕಳೆಯುವ ವೇಳೆಗೆ ಆತಅಲ್ಲೇ ಮಾನಸಿಕ ರೋಗಿಯಾಗಿದ್ದ, ಅಲ್ಲೇಆತನಿಗೆಚಿಕಿತ್ಸೆಯನ್ನು ನೀಡಲಾಯಿತಾದರೂಅದೇಜೈಲಲ್ಲಿ ಆತ ಕೊನೆಯುಸಿರೆಳೆಯುತ್ತಾನೆ. ಕರುಣೆಯೇಇಲ್ಲದಉಕ್ಕಿನ ಸರಳುಗಳ ಮಧ್ಯೆ ಅನೇಕ ಕುಖ್ಯಾತಖೈದಿಗಳು ಬಂಧಿಯಾಗಿದ್ದರು.
ಪ್ರವಾಸೀ ತಾಣವಾಗಿಯೂಅಲ್ಕಾಟ್ರಾಝ್:

1980 ರಕಾಲಾನಂತರದಲ್ಲಿಅಲ್ಕಾಟ್ರಾಝ್‍ನ್ನು ಕೇವಲ ಮಿಲಿಟರಿ ಮತ್ತು ಕೈದಿಗಳ ಜೈಲಾಗಿ ಮಾತ್ರಗುರುತಿಸದೇಇದನ್ನುಐತಿಹಾಸಿಕ ಸ್ಥಳ ಹಾಗೂ ರಾಷ್ಟ್ರೀಯಉದ್ಯಾನವನವನ್ನಾಗಿಯೂ ವಿಶೆಷವಾಗಿ ಅಲ್ಲಿನ ಸರಕಾರಗುರುತಿಸಿ ಪ್ರವಾಸೋದ್ಯಮಕ್ಕೂ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದೆ. ಈ ಮೂಲಕ ಕೇವಲ ಖೈದಿಗಳ ಬಂಧೀಖಾನೆಯಾಗಿ ಗುರುತಿಸಿಕೊಂಡಿದ್ದ ಅಲ್ಕಾಟ್ರಾಝ್ ನಿಧಾನವಾಗಿ ಪ್ರವಾಸೊದ್ಯಮದೆಡೆಗೂತೆರೆದುಕೊಂಡುಪ್ರವಾಸಿಗರಿಗೆ ಇಲ್ಲಿನರಮಣೀಯ ದೃಶ್ಯಗಳು, ಪಕ್ಷಿಗಳ ಜೀವನ ಶೈಲಿ, ಸಮುದ್ರ ತೀರಗಳು ಮತ್ತುಕಾಡು ಪ್ರಾಣಿಗಳನ್ನು ವೀಕ್ಷಿಸುವಅವಕಾಶವನ್ನು ನೀಡಿದೆ.ಇಲ್ಲಿ ವಿಶಿಷ್ಟವಾದ ಕಲ್ಲಿನಉದ್ಯಾನವನ, (ರಾಕ್‍ಗಾರ್ಡನ್) ಉಬ್ಬರವಿಳಿತದ ಕೊಳ, (ಟೈಡ್ ಪೂಲ್) ಪಕ್ಷಿಧಾಮ ಹಾಗೂ ವೀಕ್ಷಣಾ ಸ್ಥಳಗಳನ್ನು ಹೊಂದಿದ್ದುಇದೊಂದು ಪ್ರಸಿದ್ಧ ಪ್ರವಾಸಿ ತಾಣವಾಗಿಯೂಗೋಚರಿಸುತ್ತದೆ.ಇಲ್ಲಿನ ಪಕ್ಷಿಧಾಮದಲ್ಲಿ ವಿಶೇಷವಾಗಿ ನೈಟ್ ಹೆರೋನ್ ಶ್ರಬ್, ಪಿಜನ್‍ಗುಲೆಮೋಟ್, ವೆಸ್ಟರ್ನ್‍ಗುಲ್ಸ್,ಸ್ನೋವೀಎಗ್ರೆಟ್, ಬ್ರಾಂಡ್ಸ್‍ಕೊರ್ಮೋರಂಟ್ ಇವೇ ಮುಂತಾದ ಪಕ್ಷಿಗಳು ಆಶ್ರಯವನ್ನು ಪಡೆದಿದ್ದು ಅವುಗಳ ಜೀವನಚಕ್ರವನ್ನೂ ಸಮಗ್ರವಾಗಿಅಧ್ಯಯನ ಮಾಡಬಹುದಾಗಿದೆ.
ಇಲ್ಲಿಗೆ ಪ್ರವಾಸವನ್ನು ಮಾಡಿದಲ್ಲಿಬೇಕರ್‍ಬೀಚ್, ಬೋಟ್‍ಡಕ್, ಸಿಟಾಡೆಲ್, ಮಿಲಿಟರಿಕ್ವಾಟ್ರಸ್, ಹೆಲಿಪ್ಯಾಡ್, ಲೈಬ್ರರಿ, ಲೈಟ್‍ಹೌಸ್, ಮೋರ್‍ಗ್ಯೂ, ಆಫೀಸರ್ಸ್‍ಕ್ಲಬ್, ಪೆರೇಡ್‍ಗ್ರೌಂಡ್, ಪವರ್ ಹೌಸ್, ರೀಕ್ರಿಯೇಶನ್‍ಯಾರ್ಡ್, ವಾರ್ಡನ್ ಹೌಸ್, ವಾಟರ್‍ಟವರ್ ಇವೇ ಮೊದಲಾದ ಪ್ರಮುಖ ಸ್ಥಳಗಳನ್ನು ವೀಕ್ಷಿಸುತ್ತಾ ವಿವಿಧ ಕೋನಗಳಲ್ಲಿ ಸಬಹುದಾಗಿದೆ.
ರೂಟ್ ಮ್ಯಾಪ್:
ಅಮೇರಿಕಾದ ಪ್ರಸಿದ್ದ ನಗರ ಸ್ಯಾನ್‍ಫ್ರಾನ್ಸಿಸ್ಕೋಗೆದೇಶದಎಲ್ಲಾ ಮಹಾನಗರಗಳಿಂದ ವಿಮಾನಯಾನ ಸೌಲಭ್ಯವಿದ್ದು, ಇಲ್ಲಿಂದಮೂರು ಕಿ.ಮೀ ದೂರದ ಪೀರ್ ಪಟ್ಟಣಕ್ಕೆ ಸ್ವಂತ ವಾಹನ ಅಥವಾಟ್ಯಾಕ್ಸಿಅಥವಾ ಸಿಟಿ ರೈಲುಗಳ ಸೌಲಭ್ಯವಿದೆ. ಪೀರ್‍ನಿಂದಅಲ್ಕಾಟ್ರಾಝ್‍ಗೆಹಡಗುಅಥವಾ ಸ್ಪೀಡ್ ಬೋಟ್‍ಮೂಲಕವೂಪ್ರಯಾಣಿಸಬಹುದಾಗಿದೆ.
ಹೋಟೆಲ್‍ಗಳು:
ಅಲ್ಕಾಟ್ರಾಝ್‍ಹಾಗೂ ಆಸುಪಾಸಿನಲ್ಲಿ ಸಾಕಷ್ಟು ಮಧ್ಯಮ ವರ್ಗದ ಮತ್ತುಐಶಾರಾಮಿ ಹೋಟೇಲ್‍ಗಳು ಲಭ್ಯವಿದ್ದು ಇವುಗಳನ್ನು ಆನ್‍ಲೈನ್ ಮೂಲಕವೇ ಬುಕ್ ಮಾಡಿಕೊಳ್ಳಬಹುದಾಗಿದೆ.ಅದೇರೀತಿಅಲ್ಕಾಟ್ರಾಝ್ ಪ್ರವೇಶಿಸಿದ ನಂತರಅಲ್ಲಲ್ಲಿ ಸಸ್ಯಾಹಾರಿಮತ್ತು ಮಾಂಸಾಹಾರಿ ರೆಸ್ಟೋರೆಂಟ್‍ಗಳೂ ಇವೆ.
ಸಂತೋಷ್‍ರಾವ್ ಪೆರ್ಮುಡ
ದೂ:9742884160
ಚಿತ್ರಗಳು: ಅಂತರ್ಜಾಲ
