ಬಂಟ್ವಾಳ: ಕಲ್ಲಡ್ಕದಲ್ಲಿ ದನವೊಂದನ್ನು ಆಟೋದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ನಾಲ್ವರನ್ನು  ಪೊಲೀಸರು ಬಂಧಿಸಿದ್ದಾರೆ. ಅಡ್ಯಾರು ಕಣ್ಣೂರಿನ ಜಕಾರಿಯಾ (40), ಬದ್ರುದ್ದೀನ್ (55), ಕಬೀರ್ (47) ಹಾಗೂ ಇರ್ಫಾನ್ (21) ಬಂಧಿತರು. ಗುರುವಾರ ರಾತ್ರಿ ಆರೋಪಿಗಳು ಆಟೋವೊಂದರಲ್ಲಿ ಪ್ರಯಾಣಿಕರು ಕಾಲಿಡುವ ಜಾಗದಲ್ಲಿ ದನವನ್ನು ಕೂಡಿಹಾಕಿ ಕೊಂಡೊಯ್ಯುತ್ತಿರುವುದನ್ನು ಪೆÇಲೀಸರಾದ ಶಾಂತಪ್ಪ ಮತ್ತು ಸುಬ್ರಹ್ಮಣ್ಯ ಪತ್ತೆ ಹಚ್ಚಿ, ಎಸ್.ಐ.ರಕ್ಷಿತ್ ನೇತೃತ್ವದಲ್ಲಿ ಆರೋಪಿಗಳನ್ನು ಸೆರೆಹಿಡಿದರು. ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *