ಬಂಟ್ವಾಳ: ತುಳುನಾಡ ಕೃಷಿಕ್ರಾಂತಿ ಸಹಯೋಗದಲ್ಲಿ ಸಜೀಪಮುನ್ನೂರು ಗ್ರಾಮದ ಮಂಜಲ್ಪಾದೆಯಲ್ಲಿ ಇತ್ತೀಚೆಗೆ 6 ಎಕರೆ ಹೊಲದಲ್ಲಿ ಬೆಳೆದ ಭತ್ತದ ಕಟಾವು ಕಾರ್ಯವು ಶುಕ್ರವಾರ ನಡೆಯಿತು.
ತುಳುನಾಡು ಕೃಷಿ ಕ್ರಾಂತಿ ಹರಿಕಾರ, ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರು ಭತ್ತದ ಕಟಾವು ಕಾರ್ಯಕ್ಕೆ ಚಾಲನೆ ನೀಡಿದರು. IMG-20170331-WA0006

IMG-20170331-WA0008
ಅನ್ನಪ್ಪಾಡಿ ಮಹಾಗಣಪತಿ ದೇವಸ್ಥಾನದಲ್ಲಿ ಧಾನ್ಯಲಕ್ಷ್ಮಿ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಟಾವುಗೈದ ಭತ್ತದ ಸುಮಾರು 1 ಕ್ವಿಂಟಲ್ ಅಕ್ಕಿಯನ್ನು ಉಳ್ಳಾಲಕ್ಕೆ ಸಮೀಪದ ಕುಂಪಲದಲ್ಲಿರುವ ಅನಾಥಾಶ್ರಮಕ್ಕೆ ದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಮನೋಹರ ಶೆಟ್ಟಿ, ಸಂಚಾಲಕ ಶೇಕ್ ಅಬ್ದುಲ್ಲಾ, ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್,ಕಾರ್ಯದರ್ಶಿ ಎನ್. ಕೆ.ಇದಿನಬ್ಬ,ತಾಲೂಕು ರೈತ ಸಂಘದ ಅಧ್ಯಕ್ಷ ಶರತ್ ಕುಮಾರ್,ಕಾರ್ಯದರ್ಶಿ ಸುದೇಶ ಮಯ್ಯ,ರೈತ ಮುಖಂಡರಾದ ರವಿ ಮಂಜಲ್ಪಾದೆ,ಪುರಂದರ ಮಂಜಲ್ಪಾದೆ,ಯಶೋಧರ ಕೊಟ್ಟಾರಿ ಆಲಾಡಿ,ಕುಶೇಷ ಅನ್ನಪ್ಪಾಡಿ,ರಾಮ,ರುಕ್ಮಯ್ಯ ಪೂಜಾರಿ,ಕಸ್ತೂರಿ, ಗ್ರಾ.ಪಂ.ಸದಸ್ಯ ಸೀತಾರಾಮ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *