ಬಂಟ್ವಾಳ: ಎಟಿಎಂ ಒಂದರಲ್ಲಿ ಸ್ಟಿಕ್ಕರ್ ಅಂಟಿಸಿದ 2 ಸಾವಿರ ರೂ ನೋಟು ಸಿಕ್ಕಿದೆ. ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ ಅವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಟಿಎಂನಲ್ಲಿ ಎರಡು ಸಾವಿರ ರೂ ಡ್ರಾ ಮಾಡಿದಾಗ ಸ್ಟಿಕ್ಕರ್ ಅಂಟಿಸಿದ ನೋಟು ಪಡೆದರು.ಕೂಡಲೇ ಅದನ್ನು ಬ್ಯಾಂಕಿಗೆ ಒಪ್ಪಿಸಿ ಬೇರೆ ನೋಟು ಪಡೆದರು. ಬ್ಯಾಂಕುಗಳ ನೋಟು ಪಡೆಯುವ ಯಂತ್ರಗಳು ಇಂಥ ನೋಟುಗಳನ್ನು ಸ್ವೀಕರಿಸುತ್ತವೆ ಹಾಗೂ ಎಟಿಎಂಗಳಲ್ಲಿ ಇಂಥ ನೋಟುಗಳು ದೊರಕುತ್ತವೆ ಎನ್ನುವುದೇ ಗ್ರಾಹಕನಿಗೆ ತಲೆನೋವಾದ ಸಂಗತಿ. ಎಟಿಎಂಗಳಲ್ಲೇ ಬರುವ ನೋಟುಗಳು ಸ್ಟಿಕ್ಕರ್ ಅಂಟಿಸಿಯೋ ಅಥವಾ ಪೆನ್, ಪೆನ್ಸಿಲ್ ನಲ್ಲಿ ಗೀಚಿದ ಅಕ್ಷರಗಳಿರುವ ನೋಟುಗಳು ಇರಬಾರದು, ಇವುಗಳು ಬಾರದಂತೆ ಹಾಗೂ ಗ್ರಾಹಕರು ಪರದಾಟ ನಡೆಸದಂತೆ ಬ್ಯಾಂಕುಗಳ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಶಿಕ್ ಕುಕ್ಕಾಜೆ ಒತ್ತಾಯಿಸಿದ್ದಾರೆ.

28bhnote

 

By Suddi9

Leave a Reply

Your email address will not be published. Required fields are marked *