ಪೊಳಲಿ :ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡು ದೇವಿ ಭಕ್ತರು ಲೋಕಕಲ್ಯಾಣಾರ್ಥವಾಗಿ ಬಿಸಿರೋಡು ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಿಂದ  ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಪಾದಯಾತ್ರೆಗೆ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ , ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಚಾಲನೆ ನೀಡಿದರು.   ಬಿಸಿರೋಡು ಕೈಕಂಬದ ವಿವೇಕಾನಂದ ರಸ್ಥೆಯ ಮಾರ್ಗವಾಗಿ ಆಗಮಿಸಿದ ಭಕ್ತರು ಸುಮಾರು ಐದು ಸಾವಿರದವರೆಗೆ ಭಕ್ತಾತಾಧಿಗಳು ಪಾದಯಾತ್ರೆಯಲ್ಲಿ   ಕಂಡುಬಂದರು.IMG-20170326-WA0004 (1)

ಪಚಿನಡ್ಕ, ಕಲ್ಪನೆ, ತೆಂಕಬೆಳ್ಳೂರು, ಕಲ್ಲಗುಡ್ಡೆ ಬಡಕಬೈಲು ಮಂಗಾಜೆ, ಪುಂಚಮೆ, ಪೊಳಲಿಗೆ ಭಜನೆ ಯೊಂದಿಗೆ ಪಾದಯಾತ್ರೆ ಮೂಲಕ ಪೊಳಲಿ ದೇವಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ದೇವಿಯನ್ನು ಸಂತೃಪ್ತಿಗೊಳಿಸಲು ದೇವಿ ಸನ್ನಿಧಾನಕ್ಕೆ ಬಂದು ಪ್ರಸಾದ ಸ್ವೀಕರಿಸಲಿದ್ದಾರೆ. ಪಾದ ಯಾತ್ರೆಯುದ್ದಕ್ಕು ಅಲ್ಲಲ್ಲಿ ಪಾನಕ, ಸಿಹಿತಿಂಡಿಗಳನ್ನು ಹಂಚಿ ಭಕ್ತಾಧಿಗಳನ್ನು ಸೌಗತಿಸುವ ದೃಶ್ಯ ಕಂಡು ಬಂತು.

By suddi9

Leave a Reply

Your email address will not be published. Required fields are marked *