ಬಂಟ್ವಾಳ: ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ವತಿಯಿಂದ ಡಿವಿಶನ್ ಬಂಟ್ವಾಳ ಸೆಕ್ಟರ್ ಹಾಗೂ ಪಾಣೆಮಂಗಳೂರು ಸೆಕ್ಟರ್ ವ್ಯಾಪ್ತಿಯ ಪ್ರತಿನಿಧಿಗಳಿಗೆ ಬಿ.ಸಿ.ರೋಡ್ ಎಸ್ಸೆಸ್ಸೆಫ್ ಜಿಲ್ಲಾ ಸಭಾಂಗಣದಲ್ಲಿ “ಪ್ರೊಲಾಝ್” ಕ್ಯಾಂಪ್ ನಡೆಯಿತು.
ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ಅಧ್ಯಕ್ಷ ವಿ.ಅಬ್ದುಲ್ ರಶೀದ್ ವಗ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಎಸ್‍ವೈಎಸ್ ನಾಯಕ ಅಲ್ತಾಫ್ ಕುಂಪಲ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರೊಲಾಝ್ ಬಗ್ಗೆ ವಿಷಯ ಮಂಡಿಸಿದರು. ದ.ಕ. ಜಿಲ್ಲಾ ಸದಸ್ಯರೂ ಬಂಟ್ವಾಳ ಡಿವಿಶನ್ ಉಸ್ತುವಾರಿ ಎಂ.ಕೆ.ಎಂ.ಸಖಾಫಿ ಕೊಡುಂಗಾಯಿ ಹಾಗೂ ಡಿವಿಶನ್ ಉಪಾಧ್ಯಕ್ಷ ಅಕ್ಬರ್ ಅಲಿ ಮದನಿ ಆಲಂಪಾಡಿ ಶುಭ ಹಾರೈಸಿದರು.
ಸಭೆಯಲ್ಲಿ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ ಹಾಗೂ ಎಸ್‍ವೈಎಸ್ ಪಾಣೆಮಂಗಳೂರು ಸೆಂಟರ್ ಪ್ರ.ಕಾರ್ಯದರ್ಶಿ ಕೆ.ಪಿ.ಅಬ್ದುಲ್ಲಾ ಕೊಳಕೆ ಉಪಸ್ಥಿತಿತರಿದ್ದರು. ಪ್ರಾರಂಭದಲ್ಲಿ ಡಿವಿಶನ್ ಪ್ರ.ಕಾರ್ಯದರ್ಶಿ ಝೈನುಲ್ ಆಬಿದ್ ನಹೀಮಿ ಸ್ವಾಗತಿಸಿ ವಂದಿಸಿದರು. ಇರ್ಷಾದ್ ಗೂಡಿನಬಳಿ ಸಹಕರಿಸಿದರು.
