ಬಂಟ್ವಾಳ: ಸಮಾಜ ಸೇವಾ ಸಂಸ್ಥೆಗಳು ಅಸಹಾಯಕರ ಹಾಗೂ ಹಾಗೂ ಅಶಕ್ತರ ಕಣ್ಣೀರು ಒರೆಸುವ ಕಾರ್ಯ ಮಾಡುವ ಮೂಲಕ ಸಮಾಜದ ಅಭಿವೃದ್ದಿಗೆ ಸಹಕಾರಿಯಾಗಬೇಕು ಎಂದು ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಹೇಳಿದರು.
ಅವರು ಸೇವಾಂಜಲಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಭಾರತೀಯ ಜೀವ ವಿಮಾ ನಿಗಮದ ಆಮ್ ಆದ್ಮಿ ಯೋಜನೆಯ ಸದಸ್ಯ ಅಮ್ಮುಂಜೆ ಗ್ರಾಮದ ಬೆಂಜನಪದವು ನಿವಾಸಿ ಜನಾರ್ದನ ಬೆಳ್ಚಡರವರು ಮೃತಪಟ್ಟ ಹಿನ್ನಲೆಯಲ್ಲಿ ಪರಿಹಾರ ಮೊತ್ತ 31 ಸಾವಿರವನ್ನು ಮೃತರ ಸ್ವಗ್ರಹದಲ್ಲಿ ಅವರ ಪತ್ನಿ ಜಯಂತಿಯವರಿಗೆ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸೇವಾಂಜಲಿಯ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಹಾಗೂ ಸೇವಾಂಜಲಿಯ ಸುರೇಶ್ ರೈ ಪೆಲಪಾಡಿ, ಭಾಸ್ಕರ ಚೌಟ ಕುಮ್ಡೇಲು, ಬಿ.ನಾರಾಯಣ ಬೆಳ್ಚಾಡ, ಪದ್ಮನಾಭ ಕಿದೆಬೆಟ್ಟು, ಮೋಹನ ಬೆಂಜನಪದವು, ಪ್ರಶಾಂತ್ ಕುಮಾರ್ ತುಂಬೆ, ವಿಕ್ರಂ ಬರ್ಕೆ ಮತ್ತಿತರರು ಹಾಜರಿದ್ದರು.
