ಬಂಟ್ವಾಳ: ತುರ್ತು ಸಂದರ್ಭಗಳಲ್ಲಿ ಆರೋಗ್ಯ ರಕ್ಷಣೆ ನೀಡುವ ಜೇಸಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಭಾರತೀಯ ಜೇಸಿಯ ಉಪಾಧ್ಯಕ್ಷ ಆರ್. ಎಸ್. ಪ್ರಭು ಶುಕ್ರವಾರ ಬಿ.ಸಿ.ರೋಡಿನಲ್ಲಿ ಉದ್ಘಾಟಿಸಿದರು.
ಅವರು ಮಾತನಾಡಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಸಬೇಕು ಎನ್ನುವ ಜೇಸಿ ವಲಯಾಧ್ಯಕ್ಷರ ಆಶಯದಂತೆ ಬಂಟ್ವಾಳ ಜೇಸಿ ಉತ್ತಮ ಕಾರ್ಯ ಮಾಡುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಬಂಟ್ವಾಳ ಜೇಸಿಐಯ ವತಿಯಿಂದ ಬಿ.ಸಿ. ರೋಡಿನ ಬಸ್ಸು ನಿಲ್ದಾಣದಲ್ಲಿ ಸಾರ್ವಜನಿಕರ ಉಪಯೋಗದ ದೃಷ್ಟಿಯಿಂದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಅಳವಡಿಸಲಾಗಿದ್ದು ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ ರೋಗಿಯ ಪ್ರಾಣ ರಕ್ಷಿಸಲು ಬೇಕಾದ ಪ್ರಥಮ ಚಿಕಿತ್ಸಾ ಪರಕರಗಳನ್ನು ಪೆಟ್ಟಿಗೆಯಲ್ಲಿ ಇರಿಸಲಾಗಿದೆ.
ಈ ಸಂದರ್ಭ ವಲಯಾಧ್ಯಕ್ಷ ಸಂತೋಷ್ ಜಿ., ವಲಯ ಉಪಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಧೀರಜ್, ವಲಯ ನಿರ್ದೇಶಕ ಮನೋಜ್ ಕಡಬ, ಜೇಸಿಐ ಬಂಟ್ವಾಳದ ಅಧ್ಯಕ್ಷ ಡಾ. ಬಾಲಕೃಷ್ಣ ಅಗ್ರಬೈಲು, ಕಾರ್ಯದರ್ಶಿ ಸದಾನಂದ ಬಂಗೇರಾ, ಕೋಶಾಧಿಕಾರಿ ಚೇತನ್ ಮುಂಡಾಜೆ, ನಿಕಟಪೂರ್ವಾಧ್ಯಕ್ಷ ಸಂತೋಷ್ ಜೈನ್ ಮತ್ತು ಸದಸ್ಯರು ಹಾಜರಿದ್ದರು.
