ವಿಟ್ಲ: ವ್ಯವಸಾಯ ಸೇವಾ ಸಹಕಾರ ಸಂಘ ವಿಟ್ಲ ಇದ ವತಿಯಿಂದ ವಿಟ್ಲದ ಆಲಂಗಾರು ಕೊರಗರ ಕಾಲೊನಿಯ ತನಿಯ ಕೊರಗ ಇವರ ಕುಟುಂಬಕ್ಕೆ ಶೌಚಾಲಯ ನಿರ್ಮಿಸುವುದಕ್ಕೆ 7000 ರೂಪಾಯಿ ಸಹಾಯಧನ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂ ಕೆ ಪುರುಷೋತ್ತಮ ಭಟ್ ಬದನಾಜೆ, ನಿರ್ದೇಶಕರುಗಳಾದ ಲೋಕನಾಥ ಶೆಟ್ಟಿ, ನರ್ಸಪ್ಪ ಪೂಜಾರಿ, ಶಿವಪ್ಪ ನಾಯ್ಕ, ಉದಯ ಕುಮಾರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಕೆ ಪಿ ಉಪಸ್ಥಿತರಿದ್ದರು.
