ಬಂಟ್ವಾಳ :ಸರಿ ಸುಮಾರು ಎಂಟು ತಿಂಗಳಿನಿಂದ ಖಾಲಿಯಾಗಿದ್ದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರಕ್ಕೆ ಕೊನೆಗೂ ನಿರೀಕ್ಷೆಯಂತೆ ಪುರಸಭಾ ಸದಸ್ಯ ಸದಾಶಿವ ಬಂಗೇರ ಅವರನ್ನು ಸಾರಥಿಯನ್ನಾಗಿ ನೇಮಕಗೊಳಿಸಿ ಸರಕಾರ ಬುಧವಾರ ಸಂಜೆ ಆದೇಶ ಹೊರಡಿಸಿದೆ. ನಿಕಟಪೂವ೯ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಅವರ ಅವಧಿ ಮುಗಿದ ಬಳಿಕ ನೂತನ ಅಧ್ಯಕ್ಷರ ಆಯ್ಕೆ ನೆನೆಗುದಿಗೆ ಬಿದ್ದಿತ್ತು.
ದ.ಕ.ಮತ್ತು ಉಡುಪಿ ಜಿಲ್ಲೆಯ ವಿವಿಧ ತಾಲೂಕಿನ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ನೇಮಕಾತಿಯಾಗಿದ್ದರೂ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ನೇಮಕಾತಿಯಾಗಿರಲಿಲ್ಲ .ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ತವರು ಕ್ಷೇತ್ರದ ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷರ ಆಯ್ಕೆ ಯಾಗದಿರುವುದು ಕಾಂಗ್ರೇಸ್ ಪಡಸಾಲೆಯಲ್ಲಿಯೇ ಚಚೆ೯ಗೂ ಕಾರಣವಾಗಿತ್ತು. ನಿಕಟಪೂವ೯ ಅಧ್ಯಕ್ಷ ಪಿಯೂಸ್ ಅವರು ಮತ್ತೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲು ಬಯಸಿದ್ದರು.ಈ ನಡುವೆ ಸದಾಶಿವ ಬಂಗೇರ ಅವರು ಆರಂಭಿಕ ಹಂತದಿಂದಲೂ ಅಧ್ಯಕ್ಷ ಹುದ್ದೆಗೆ ಪ್ರಯತ್ನಿಸಿದ್ದರು.ಅದರೆ ಇವರಿಗೆ ಆ ಭಾಗ್ಯ ಒಲಿದಿರಲಿಲ್ಲ. ಕೊನೆಗಳಿಗೆಯಲ್ಲಾದ ನಾಟಕೀಯ ಬೆಳವಣಿಗೆಯೊಂದರಲ್ಲಿ ಸದಾಶಿವ ಬಂಗೇರ ಅವರಿಗೆಎರಡನೇ ಅವಧಿಗೆ ಪುರಸಭಾ ಅಧ್ಯಕ್ಷ ಹುದ್ದೆಯಿಂದಲೂ ವಂಚಿತರಾಗಿದ್ದರು.
ಯುವ ರಾಜಕಾರಣಿ ಬಂಗೇರ ಅವರು ಸಚಿವರು ಸಹಿತ ಪಕ್ಷದ ಮುಖಂಡರೊಂದಿಗೆ ಮುನಿಸಿಕೊಂಡಿದ್ದರು.ಪಕ್ಷದ ಚಟುವಟಿಕೆಯಿಂದಲೂ ದೂರ ಉಳಿಯುತ್ತಿದ್ದರು.ಪರಸಭಾ ಸಾಮಾನ್ಯ ಸಭೆಯಲ್ಲೂ ಸದಾ ಚಚೆ೯ಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುತ್ತಿದ್ದ ಅವರು ಬಳಿಕ ನೆಪ ಮಾತ್ರಕ್ಕೆ ಭಾಗವಹಿಸಿ ,ಗೌರವಧನವನ್ನು ಪಡೆಯದೆ,ಉಪಹಾರವನ್ನು ಸ್ವೀಕರಿಸದೆ ತೆರಳುತ್ತಿದ್ದರು. ಭವಿಷ್ಯದಲ್ಲಿ ಪಕ್ಷದ ನಿಷ್ಠಾವಂತ ,ಸಕ್ರೀಯ ಕಾಯ೯ಕತ೯ನೊಬ್ಬ’ ಕೈ’ ತಪ್ಪುವ ಸೂಚನೆ ದೊರೆತ ಪಕ್ಷದ ಸ್ಥಳೀಯ ಮುಖಂಡರು ಬಂಗೇರರನ್ನು ಪಕ್ಷದಲ್ಲೆ ಉಳಿಸುವ ನಿಟ್ಟಿನಲ್ಲಿ ಸಚಿವರಿಗೆ ಒತ್ತಡ ಹೇರುವ ಮೂಲಕ ಕೊನೆಗೂ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಸದಾಶಿವ ಬಂಗೇರ ದಕ್ಕಿದೆ.
ಪ್ರಾಧಿಕಾರಕ್ಕೆ ಹಾಲಿ ಮೂವರು ನಿದೇ೯ಶಕರೇ ಮುಂದುವರಿದಿದ್ದಾರೆ.ಅಧ್ಯಕ್ಷ ಹುದ್ದೆಗೆ ಶಿಫಾರಸು ಮಾಡಿದ ಸಚಿವ ರಮಾನಾಥರೈ,ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ ಜೈನ್,ಬ್ಲಾಕ್ ಅಧ್ಕಕ್ಷ ಮಾಯಿಲಪ್ಪಸಾಲ್ಯಾನ್ ಮೊದಲಾದವರಿಗೆ ಸದಾಶಿವ ಬಂಗೇರ ಕ್ರತಜ್ಙತೆ ಸಲ್ಲಿಸಿದ್ದಾರೆ.ಪ್ರಾಧಿಕಾರದ ನಿಕಟಪೂವ೯ ಅಧ್ಯಕ್ಷ ಪಿಯೂಸ್ ರೊಡ್ರಿಗಸ್ ಅವರಿಗೆ ರಾಜ್ಯ ಮಟ್ಟದ ಹುದ್ದೆಯೊಂದು ನಿರೀಕ್ಷ ಇದೆ.
