ಬಂಟ್ವಾಳ: ತಾಲೂಕಿ ನ ಪುದು ಗ್ರಾಮದ ಮಾರಿಪಲ್ಲ ಎಂಬಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಿ ಮಾಂಸವನ್ನು ಮಾರುತ್ತಿದ್ದಾರೆಂದು ಬಂದ ಖಚಿತ ವರ್ತಮಾನದಂತೆ ಬಂಟ್ವಾಳ ವೃತ್ತ ನಿರೀಕ್ಷಕ ಶ್ರೀ ಬಿ.ಕೆ ಮಂಜಯ್ಯ ರವರ ನೇತ್ರತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂಧಿಗಳು ಧಾಳಿ ನಡೆಸಿದಾಗ ಆರೋಪಿ ಪರಾರಿಯಾಗಿದ್ದು ಈ ಸಂಭಂಧ 5 ದನ ಕರುಗಳು, ಮಾಂಸ ಕಡಿಯುವ ಆಯುಧಗಳು, ತೂಕದ ತಕ್ಕಡಿ ಮತ್ತು ಸುಮಾರು 80 ಕೆಜಿ ದನದ ಮಾಂಸ ಒಟ್ಟು 21,900 ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಅಕ್ರ 65/2017ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
