ಮೂಡುಬಿದಿರೆ: ರೋಟರಿ ಎಜ್ಯುಕೇಶನ್ ಸೊಸೈಟಿ (1980)ಯ ಸ್ಥಾಪಕ ಸದಸ್ಯ, ಪ್ರಸ್ತುತ ಆಡಳಿತ ಮಂಡಳಿ ಸದಸ್ಯರಾಗಿದ್ದ ಹಿರಿಯ ರೋಟರಿ ಸದಸ್ಯ ಗಾಂಧಿನಗರ ನಿವಾಸಿ ಮೇಘನಾಥ್ ಎಂ. ಮಾ.16ರಂದು ನಿಧನಹೊಂದಿದರು. ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅವರು ಅಗಲಿದ್ದಾರೆ.

mbd_march16_5
ಮೂಡುಬಿದಿರೆಯಲ್ಲಿ ಓದಿ, ಮುಂಬಯಲ್ಲಿ ವೈಂಡಿಂಗ್ ಕಲಿತು, ಮೂಡಬಿದಿರೆಯಲ್ಲಿ ಮೊದಲ ಮೋಟಾರ್ ವೈಂಡಿಂಗ್ ಉದ್ಯಮವಾಗಿ ಅವರು `ಆದರ್ಶ ವೈಂಡಿಂಗ್ ವಕ್ರ್ಸ್’ನ್ನು ಸ್ಥಾಪಿಸಿದ್ದರು. ಅವರ ಮೂಲಕ ಅದೆಷ್ಟೋ ಮಂದಿ ವೈಂಡಿಂಗ್ ಕಲಿತು ತಮ್ಮ ಜೀವನೋಪಾಯ ನೋಡಿಕೊಳ್ಳುವಂತಾಗಿದೆ. ಕಳೆದ 4 ದಶಕಗಳಿಂದ ರೋಟರಿ ಕ್ಲಬ್‍ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು ಮೂಡಬಿದಿರೆ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ, ಗಾಂಧಿನಗರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿದ್ದರು.

By Suddi9

Leave a Reply

Your email address will not be published. Required fields are marked *