ಮೂಡುಬಿದಿರೆ: ಮಂಗಳೂರು ವಿ.ವಿ ಅಂತರ್ ಕಾಲೇಜು ಸಾಂಸ್ಕøತಿಕ ಯುವಜನೋತ್ಸವದ ಎಲ್ಲ ಐದು ವಿಭಾಗಗಳಲ್ಲಿ ಗರಿಷ್ಠ ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಸಮೂಹ ವಿಭಾಗದ ಜಾನಪದ ವಾದ್ಯಗೋಷ್ಠಿ, ಭಾರತೀಯ ಗೀತೆ, ಪಾಶ್ಚತ್ಯ ಸಂಗೀತ, ಏಕಾಂಕ ನಾಟಕ, ಪ್ರಹಸನ ಜಾನಪದ ನೃತ್ಯದಲ್ಲಿ ಆಳ್ವಾಸ್ ಪ್ರಥಮ ಸ್ಥಾನಿಯಾಗಿದೆ. ಆಳ್ವಾಸ್‍ನ ಮನಸ್ವಿ (ಮಿಮಿಕ್ರಿ), ವಿಘ್ನೇಶ್ ಪ್ರಭು(ತಬಲ ವಾದ್ಯ), ಚಾಲ್ರ್ಸ್(ಪಾಶ್ಚತ್ಯ ಸಂಗೀತ), ವರ್ಷಾ ಆಚಾರ್ಯ(ಲಘು ಸಂಗೀತ), ಆಯನಾ(ಇಂಗ್ಲೀಷ್ ಬಾಷಣ), ಕಾರ್ತಿಕ್ ಪ್ರಭು(ಛಾಯಾಚಿತ್ರ), ಅಕ್ಷಯ್(ಕ್ಲೇ ಮಾಡಲಿಂಗ್), ಕಿರಣ್(ಪೋಸ್ಟರ್ ಮೇಕಿಂಗ್), ನವೀನ್(ಕಾರ್ಟೂನಿಂಗ್), ಕಾರ್ತಿಕ್ ಆಚಾರ್ಯ(ಒನ್ ದಿ ಸ್ಪಾಟ್ ಪೈಟಿಂಗ್) ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. ನಿತೇಶ್ ಹಾಗೂ ಪ್ರೇಮ್ ಸಾಗರ್ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.ನಿಧಿ(ಇಂಗ್ಲೀಷ್ ಚರ್ಚಾ ಸ್ಪರ್ಧೆ), ಆದರ್ಶ್ ಹಾಗೂ ಕಾರ್ತಿಕ್(ರಸಪ್ರಶ್ನೆ), ಮಾನಸ(ವೈಯಕ್ತಿಕ ಶಾಸ್ತ್ರೀಯ ಸಂಗೀತ) ಮಯೂರ್(ಹಾರ್ಮೋನಿಯಂ) ದ್ವಿತೀಯ ಸ್ಥಾನಿಯಾದರೆ, ರಕ್ಷಾ(ರಂಗೋಲಿ), ಮಧುರ ಕಾರಂತ್ (ವೈಯಕ್ತಿಕ ಶಾಸ್ತ್ರೀಯ ನೃತ್ಯ) ತೃತೀಯ ಸ್ಥಾನ ಗಳಿಸಿದ್ದಾರೆ. ಗುಂಪು ವಿಭಾಗದಲ್ಲಿ ಮೂಕಾಭಿನಯ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದ್ದಾರೆ.
