ಉಡುಪಿ:- ಸುನಾಗ್ ಅರ್ಥೋಕೇರ್ ಕುಂಜಿಬೆಟ್ಟು ನಮ್ಮ ಮನೆ ನಮ್ಮ ಮರ ತಂಡ ಇದರ ವತಿಯಿಂದ ಬೃಹತ್ ಸ್ವಚ್ಚತಾ ಅಭಿಯಾನ ನಗರದ ಎಂಜಿಎಂ ಕಾಲೇಜಿನ ಎದುರಿನ ವಠಾರದಲ್ಲಿ ಮಾ.12 ರಂದು ನಡೆಯಿತು.ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸ್ಚ್ಚತೆಯನ್ನು ಮಾಡಿ ಇದರ ಬಗ್ಗೆ ಮಾಹಿತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಡಾ|| ನರೇಂದ್ರ ಕುಮಾರ್,ಗಾಂಧಿ ಆಸ್ಪತ್ರೆಯ ಡಾ|| ಹರಿಶ್ಚಂದ್ರ,ಡಾ|| ವ್ಯಸರಾಯ ತಂತ್ರಿ,ಡಾ|| ವಿರೂಪಾಕ್ಷ ದೇವರಮನೆ,ನಗರಸಭೆಯ ಸ್ವಚ್ಚತಾ ರಾಯಭಾರಿ ಅವಿನಾಶ್ ಕಾಮತ್,ರವಿರಾಜ ಹೆಚ್.ಪಿ,ಪ್ರವೀಣ್,ರಾಜೇಶ್ ಪಣಿಯಾಡಿ,ಗೀತಂ ಗೀರಿಶ್,ಪ್ರಕಾಶ್ ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರು ಭಾಗವಹಿಸಿದ್ದರು.

