ಡಬ್ಲ್ಯೂಟಿಎ ಪ್ಯಾರಿಸ್ ಓಪನ್: ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಶರಪೋವಾ
ಪ್ಯಾರಿಸ್: ಕಳೆದ ಕೆಲವು ಸಮಯದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ರಷ್ಯಾದ ಅಗ್ರ ಟೆನಿಸ್ ಆಟಗಾತರ್ಿ ಮರಿಯಾ ಶರಪೋವಾ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಡಬ್ಲ್ಯೂಟಿಎ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸ್ಲೊವಾಕಿಯಾದ ಡೇನಿಯಲ್ ಹಂತುಚೊವಾ ಅವರನ್ನು 6-0, 6-1 ಅಂತರದಿಂದ ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.
ಈ ಪಂದ್ಯಾವಳಿಯಲ್ಲಿ ಶರಪೋವಾ ತನ್ನೆಲ್ಲಾ ಸಾಮಥ್ರ್ಯವನ್ನು ಬಳಸಿ ಉತ್ತಮ ಪ್ರದರ್ಶನ ನೀಡಿದರೆ, ಹಂತುಚೊವಾ ಆರಂಭವೇ ಕಳಪೆಯಾಗಿತ್ತು. ನಿರಂತರ ತಪ್ಪುಗಳನ್ನು ಮಾಡುತ್ತಲೇ ಸಾಗಿದ ಆಕೆ ಸುಲಭವಾಗಿ ಶರಪೋವಾಗೆ ಗೆಲುವನ್ನು ಬಿಟ್ಟುಕೊಟ್ಟರು.
ಇದೇ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆದ ಮೆಲ್ಬಾನರ್್ ಓಪನ್ ಪಂದ್ಯಾವಳಿಯ ನಾಲ್ಕನೇ ಸುತ್ತಿನಲ್ಲೇ ಶರಪೋವಾ ಸೋಲನುಭವಿಸಿ ನಿರ್ಗಮಿಸಿದ್ದರು. ಈ ಪಂದ್ಯಾವಳಿಯು ಆಕೆ ಭುಜದ ಸಮಸ್ಯೆಯಿಂದ ಗುಣಮುಖ ಹೊಂದಿ ಆಡಿದ ಎರಡನೇ ಪಂದ್ಯಾವಳಿಯಾಗಿತ್ತು. ಆದರೆ ಈ ಸೋಲಿನ ಕಾರಣ ಪಂದ್ಯಾವಳಿಯಿಂದ ಬಹುಬೇಗನೇ ನಿರ್ಗಮಿಸಿದ್ದೇ ಪ್ಯಾರಿಸ್ ಓಪನ್ ಪಂದ್ಯಾವಳಿಯಲ್ಲಿ ಉತ್ತಮ ನಿರ್ವಹಣೆ ತೋರಲು ಕಾರಣವಾಯಿತು ಎಂಬುದು ಶರಪೋವಾ ಅನಿಸಿಕೆ.

