ಐಪಿಎಲ್ ಏಳನೇ ಆವೃತ್ತಿ: ಯುವಿ, ಸೆಹ್ವಾಗ್ ಮೂಲ ಮೌಲ್ಯ 2 ಕೋಟಿ
ದೆಹಲಿ: ಸದ್ಯ ಏಕದಿನ ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ಮ್ಯಾನ್ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ಅವರ ಅದೃಷ್ಠ ಖುಲಾಯಿಸಿದೆ. ಏಪ್ರಿಲ್ ತಿಂಗಳಲ್ಲಿ ಆರಂಭವಾಗಲಿರುವ ಐಪಿಎಲ್ನ ಏಳನೇ ಆವೃತ್ತಿಯಲ್ಲಿ ಈ ಇಬ್ಬರು ದಾಂಡಿಗರ ಮೂಲಮೌಲ್ಯವು 2 ಕೋಟಿಯೆಂದು ನಿರ್ಧರಿಸಲಾಗಿದ್ದು, ಇದು ಈ ಆವೃತ್ತಿಯ ಅತೀ ಹೆಚ್ಚಿನ ಮೌಲ್ಯ ಎಂದು ಹೇಳಲಾಗಿದೆ. ಈ ಹರಾಜಿನಲ್ಲಿ ಟೀಂ ಇಂಡಿಯಾದ 46 ಆಟಗಾರರ ಹೆಸರಿದ್ದು ಒಟ್ಟಾರೆಯಾಗಿ 208 ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ಸೇರಿಸಲಾಗಿದೆ.
ಈ ಆಟಗಾರರ ಮೂಲಮೌಲ್ಯ ರೂ, 50 ಲಕ್ಷ, ಒಂದು ಕೋಟಿ, ಒಂದೂವರೆ ಕೋಟಿ ಹಾಗೂ ಎರಡು ಕೋಟಿ ಎಂದು ನಿರ್ಧರಿಸಲಾಗಿದೆ. ನ್ಯೂಜಿಲ್ಯಾಂಡ್ ಆಟಗಾರ ಕೊರೆ ಆ್ಯಂಡರ್ಸನ್ ಮೂಲಮೌಲ್ಯವು ಒಂದು ಕೋಟಿ ಎಂದು ನಿಗದಿಪಪಡಿಸಲಾಗಿದ್ದು, ಭಾರತದ ವಿರುದ್ಧ ಆತನ ಆಟ ಕಂಡ ನಂತರ ಈ ಮೌಲ್ಯವು ಕೆಲವು ಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
2 ಕೋಟಿ ಮೂಲಮೌಲ್ಯ ಹೊಂದಿರುವ ಇತರ ಭಾರತೀಯ ಆಟಗಾರರು: ಯುಸೂಫ್ ಪಠಾಣ್, ದಿನೇಶ್ ಕಾತರ್ಿಕ್, ಪ್ರವೀಣ್ ಕುಮಾರ್, ಆಶೀಶ್ ನೆಹ್ರಾ, ಪ್ರಗ್ಯಾನ್ ಓಜಾ, ರಾಬಿನ್ ಉತ್ತಪ್ಪ, ಅಮಿತ್ ಮಿಶ್ರ, ಮುರಳಿ ವಿಜಯ್, ಮನೋಜ್ ತಿವಾರಿ.


