New Zealand v India

ಆಕ್ಲೆಂಡ್: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡದ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಟೈ  ಸಾಧಿಸಿತು. ಅಮೋಘ 315 ರನ್ಗಳನ್ನು ಬೆನ್ನೆತ್ತಿ ಹೋದ ಭಾರತ ನಿಗದಿತ ಐವತ್ತು ಓವರ್ಗಳಲ್ಲಿ 314 ರನ್ಗಳನ್ನು ಗಳಿಸಿ ಟೈ ಸಾಧಿಸಿತು

ಟೀಮ್ ಇಂಡಿಯಾ79 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಆಗ ಧೋನಿ ಮತ್ತು ಸುರೇಶ್ ರೈನಾ ಇಬ್ಬರೂ 5ನೇ ವಿಕೆಟ್’ಗೆ 67 ರನ್ ನೀಡಿದರು. ರೈನಾ 31 ರನ್ ಗಳಿಸಿ ಬಳಿಕ ಧೋನಿ ಸ್ವಲ್ಪ ಹೊತ್ತು ಹೋರಾಟ ಮುಂದುವರಿಸಿದರು. ಅಶ್ವಿನ್ ಕೇವಲ 46 ಎಸೆತಗಳಲ್ಲಿ 65 ರನ್ ಗಳಿಸಿದ್ಧರು. ಜಡೇಜಾ ಮತ್ತು ಅಶ್ವಿನ್ 7ನೇ ವಿಕೆಟ್’ಗೆ 85 ರನ್ ಗಳಿಸಿದ್ಧರು
ಕೊನೆಯ ಓವರಲ್ಲಿ ಬೇಕಾಗಿದ್ದು 18 ರನ್… ಈ ಕೊನೆಯ ಓವರಲ್ಲಿ ಜಡೇಜಾ ಒಂದು ಸಿಕ್ಸರ್, ಎರಡು ಬೌಂಡರಿ ಚಚ್ಚಿದರು. ಕೊನೆಯ ಎಸೆತದಲ್ಲಿ ಬೇಕಾಗಿದ್ದು 2 ರನ್. ಆದರೆ, ಜಡೇಜಾಗೆ ಒಂದು ರನ್ನಷ್ಟೇ ಸಾಧ್ಯವಾಗಿದ್ದು… ಹೀಗಾಗಿ ಪಂದ್ಯ ಟೈ ಆಯಿತು… 66 ರನ್ ಮತ್ತು 2 ವಿಕೆಟ್ ಪಡೆದು ಆಲ್ರೌಂಡ್ ಪ್ರದರ್ಶನ ನೀಡಿದ ಜಡೇಜಾಗೆ ಪಂದ್ಯಶ್ರೇಷ್ಠ ಗೌರವ ಪ್ರಾಪ್ತವಾಯಿತು… ಐದು ಏಕದಿನ ಪಂದ್ಯಗಳ ಈ ಕ್ರಿಕೆಟ್ ಸರಣಿ ಜೀವಂತವಾಗೇ ಇದ್ದಂತಾಗಿದೆ.

ನ್ಯೂಜಿಲೆಂಡ್ 50 ಓವರ್ 314/10
ಭಾರತ 50 ಓವರ್ 314/9

By suddi9

Leave a Reply

Your email address will not be published. Required fields are marked *