
ಇಂಗ್ಲೆಂಡ್: ಇಲ್ಲಿನ ಲಾಡ್ಸರ್್ ಮೈದಾನಕ್ಕೆ ಇನ್ನೂರರ ಸಂಭ್ರಮ. ಈ ದಿನವನ್ನು ಸ್ಮರಣೀಯವಾಗಿಸಲು ಅಧಿಕಾರಿಗಳು ಕ್ರಿಕೆಟ್ ಪಂದ್ಯವೊಂದನ್ನು ಆಯೋಜಿಸಲು ಚಿಂತನೆ ನಡೆಸಿದ್ದಾರೆ. ವಿಶೇಷವೆಂದರೆ ಈ ಪಂದ್ಯಾಟದಲ್ಲಿ ಸೆಣಸಲಿರುವ ತಂಡಗಳ ಕಪ್ತಾನರಾಗಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾನರ್್ ಆಯ್ಕೆಯಾಗಿದ್ದಾರೆ. ಸಚಿನ್ ಎಂಸಿಸಿ ತಂಡವನ್ನು ಮುನ್ನಡೆಸಿದರೆ ಶೇನ್ ವಾನರ್್ ಶೇಷ ಜಗತ್ತಿನ ನೇತೃತ್ವವಹಿಸಲಿದ್ದಾರೆ. ಭಾರತದ ಮೊತ್ತೊರ್ವ ಹಿರಿಯ ಆಟಗಾರ ರಾಹುಲ್ ದ್ರಾವಿಡ್ ಕೂಡಾ ಈ ಪಂದ್ಯಾಟದಲ್ಲಿ ಆಡುತ್ತಿದ್ದು ಸಚಿನ್ನ ಎಂಸಿಸಿ ತಂಡದಲ್ಲಿ ಆಡಲಿದ್ದಾರೆ. ಲಾಡ್ಸರ್್ ಮೈದಾನದಲ್ಲಿ 1996ರಲ್ಲಿ ದ್ರಾವಿಡ್ ತನ್ನ ಟೆಸ್ಟ್ ಪಾದಾರ್ಪಣೆಯಲ್ಲಿ 95 ರನ್ ಬಾರಿಸಿದ್ದರು. ಈ ಪಂದ್ಯಾಟವು ಬರುವ ಜುಲೈ ಐದರಂದು ನಡೆಯಲಿದೆ. ಈ ಪಂದ್ಯಾಟವು ವಿಶ್ವ ಕ್ರಿಕೆಟ್ನ ಗಣ್ಯಾತಿಗಣ್ಯರನ್ನು ಒಂದೇ ವೇದಿಕೆಯಲ್ಲಿ ತರಲಿದ್ದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹಬ್ಬವಾಗಲಿದೆ
