ಉಡುಪಿ:- ರೋಟರಿ ಕ್ಲಬ್ ಉಡುಪಿ,ನಮ್ಮ ಮನೆ ನಮ್ಮ ಮರ ತಂಡ,ಗಾಂಧಿ ಆಸ್ಪತ್ರೆ ಇದರ ಆಶ್ರಯದಲ್ಲಿ ಮಾ.5 ಆದಿತ್ಯವಾರ ನಗರದ ಮಣಿಪಾಲ ಮುಖ್ಯ ರಸ್ತೆಯಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ ಮತ್ತು ರಸ್ತೆಯ ಪಕ್ಕ ರಚಿಸಲಾದ ಗೋಡೆ ಚಿತ್ರ ಬರಹ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಆಯುಕ್ತ ಮಂಜುನಾಥಯ್ಯ ಈ ಕಾರ್ಯಕ್ರಮ ಉಡುಪಿಯಲ್ಲಿ ಮಾದರಿಯಾಗಿದೆ ಮುಂದಿನ ದಿನಗಳಲ್ಲಿ ಈ ಬಗ್ಗೆ ನಗರಸಭೆಯು ಸಹಕಾರ ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆಯೋಜಕರಾದ ಡಾ|| ಸುರೇಶ್ ಶೆಣೈ,ಡಾ|| ರಾಜಗೋಪಾಲ ಶೆಣೈ,ಡಾ|| ಹರಿಶ್ಚಂದ್ರ,ಡಾ|| ವ್ಯಸರಾಯ ತಂತ್ರಿ,ಡಾ|| ಸುದರ್ಶನ್ ಭಟ್,ಕಲಾವಿದ ಜನಾರ್ಧನ ಹಾವಂಜೆ,ರವಿರಾಜ ಹೆಚ್.ಪಿ,ಗುರುರಾಜ ಸನಿಲ್,ಆವಿನಾಶ್ ಕಾಮತ್ ಮುಂತಾದವರು ಭಾಗವಹಿಸಿದ್ದರು.
