ಫರಂಗಿಪೇಟೆ : ಪುದು ಗ್ರಾಮದ ಶ್ರೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ನಡೆಯುವ ಅಖಂಡ ಏಕಾಹ ಭಜನೆ ಕಾರ್ಯಕ್ರಮವು ಶ್ರೀ ವಿಶ್ವನಾಥ ಉಪಾಧ್ಯಕ್ಷರು ಶ್ರೀ ಭಗವತಿ ಕ್ಷೇತ್ರ ಕುದ್ರೋಳಿ , ಆಡಳಿತ ನಿರ್ದೇಶಕರು ಶ್ರೀ ಭಗವತಿ ಕಾರ್ಪೊರೇಟಿವ್ ಬ್ಯಾಂಕ್ ಇವರು ದೀಪ ಪ್ರಜ್ವಲನೆ ಗೊಳಿಸುವ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ , ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ರವೀಂದ್ರ ಕಂಬಳಿ , ಗಿರೀಶ್ ಪದೆಂಜಾರು , ಉಮೇಶ್ ಆಳ್ವ ದೆಕ್ಕೆದು , ರಾಮಚಂದ್ರ ಆಳ್ವ ದೆಕ್ಕೆದು , ಕ್ಷೇತ್ರದ ಅರ್ಚಕರಾದ ಶ್ರೀ ಲೋಕನಾಥ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

