ಮೂಡುಬಿದಿರೆ: ಮಹಿಳೆಯರ ಪ್ರತಿಭೆಗಳನ್ನು ಬೆಳಕಿಗೆ ತಂದು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ಸ್ವಸಹಾಯ ಸಂಘಗಳ ಉದ್ಧೇಶವಾಗಿದೆ ಎಂದು ಕಟೀಲು ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ, ವಂದೇ ಮಾತರಂ ಸೌಹಾರ್ದ ಸಹಕಾರಿಯ ನಿರ್ದೇಶಕ ಡಾ.ಕೇಶವ ಹೆಗ್ಡೆ ಹೇಳಿದರು.
ಒಂಟಿಕಟ್ಟೆ ಮೋನಪ್ಪ ಪೂಜಾರಿಯವರ ನಿವಾಸದಲ್ಲಿ ನಡೆದ ವಂದೇ ಮಾತರಂ ಸೌಹಾರ್ದ ಸಂಘದಿಂದ ಪ್ರಾಯೋಜಿಸಲ್ಪಟ್ಟ ಒಂಟಿಕಟ್ಟೆ ನಂದಿನಿ ಸ್ವಸಹಾಯ ಸಂಘದ 3 ನೇ ವರ್ಷದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಒಂಟಿಕಟ್ಟೆ ಸ.ಹಿ.ಪ್ರಾ.ಶಾಲಾ ಶಿಕ್ಷಕ ಕರುಣಾಕರ ಸಮಾರಂಭ ಉದ್ಘಾಟಿಸಿದರು. ಮೂಡುಬಿದಿರೆಯ ಜೈನ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಲಕ್ಷ್ಮೀಯವರನ್ನು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಒಂಟಿಕಟ್ಟೆ ಶ್ರೀ ದುರ್ಗಾ ಸ್ವಸಹಾಯ ಸಂಘದ ವಿಶ್ವನಾಥ ಒಂಟಿಕಟ್ಟೆ ಮುಖ್ಯ ಅತಿಥಿಯಾಗಿದ್ದರು. ಸ್ವಸಹಾಯ ಸಂಘಗಳ ಮೇಲ್ವೀಚಾರಕ ಅಶೋಕ್ ಪ್ರಾಸ್ತಾವಿಕ ಮಾತನಾಡಿದರು. ಆಶಾ ಸ್ವಾಗತಿಸಿದರು. ಮಮತಾ ವರದಿ ವಾಚಿಸಿದರು. ಗಾಯತ್ರೀ ಕಾರ್ಯಕ್ರಮ ನಿರ್ವಹಿಸಿದರು. ಅಶ್ವಿನಿ ವಂದಿಸಿದರು.
