ಸುದ್ದಿ9 ಕೈಕಂಬ : ಅಡ್ಡೂರು ಅಗ್ರಹಾರ ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಜು. 14ರಂದು ಸೋಮವಾರ ಸಾಯಂಕಾಲ 5.30 ಕ್ಕೆ ಪ್ರಾರ್ಥನೆ ,ಸ್ಥಳಶುದ್ಧಿ , ವಾಸ್ತು ಪೂಜೆ, ರಕ್ಷೊಘ್ನ ಹೋಮ,ಪ್ರಾಸಾದ ಬಲಿ, ಬಿಂಭಾಧಿವಾಸ ಇತ್ಯಾದಿ ಪೂಜೆಗಳನ್ನು ನೆರವೇರಿಸಿ ಜು.15ರಂದು ಮಂಗಳವಾರ ಬೆಳಗ್ಗೆ ಬೆಳಗ್ಗೆ 5 ಕ್ಕೆ ಪ್ರತಿಷ್ಠಾಹೋಮ, 5.55ಕ್ಕೆ ತಂತ್ರಿಗಳಾದ ಪೊಳಲಿ ವೇದಮೂರ್ತಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಅವರು ನೂತನ ಆರೊಢದಲ್ಲಿ ಶ್ರೀ ನಾಗಶಿಲಾ ಪ್ರತಿಷ್ಠಾಪನೆಯನ್ನು ನೆರವೇರಿಸಿದರು.


ಮಿಥುನ ಲಗ್ನದಲ್ಲಿ ಬೆಳಗ್ಗೆ 5.55 ನಾಗಶಿಲಾ ರಕ್ತೇಶ್ವರೀ ಪ್ರತಿಷ್ಠೆ, ಗಣಹೋಮ, ಪ್ರಾಯಶ್ಚಿತ ಪವಮಾನ ಹೋಮ, ಕಲಾಶಾಧಿವಾಸ, ಅಧಿವಾಸ ಹೋಮ ಆಶ್ಲೇಷಾ ಬಲಿ. ಬೆಳಗ್ಗೆ 11 ಕ್ಕೆ ಕಲಾಶಾಭಿಷೇಕ ಮಧ್ಯಾಹ್ನ 12 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ. ಮಧ್ಯಾಹ್ನ 1 ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಿತು. ಉದ್ಯಮಿ ಪ್ರಸಾದ್ ಶೆಟ್ಟಿ ಅವರು ಮುಖ್ಯಪ್ರಾಣ ವ್ಯವಸ್ಥಾಪನಾ ಸಮಿತಿಗೆ “ಶ್ರೀ ನಾಗಶಿಲೆ”ಯನ್ನು ನೀಡಿದ ದಾನಿ. ಪ್ರತಿಷ್ಠಾಪನೆಯ ಪೂಜಾಕಾರ್ಯಕ್ರಮದಲ್ಲಿ ಅನಂತಭಟ್ ಪೊಳಲಿ, ಸುಬ್ರಹ್ಮಣ್ಯ ನಾವಡ ಪೊಳಲಿ, ಕೃಷ್ಣ ಉಪಧ್ಯಾಯ ಕೋಡಿಮಜಲು, ಬಾಲಕೃಷ್ಣ ಕೋಡಿಮಜಲು ಅರ್ಬಿ ,ನಡುಮನೆ ಚಂದ್ರಶೇಖರ ಭಟ್, ರಾಜಶೇಕರ ರಾವ್ ನೂಯಿ , ಸುರೇಶ್ ಭಟ್ ಕೈಕಂಬ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉಧ್ಯಮಿಗಳಾದ ಪ್ರಸಾದ್ ಶೆಟ್ಟಿ, ವಿಜೇಶ್ ಸುವರ್ಣ,ಅನಿಲ್ ದಾಸ್ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೂಯಿ ಬಾಲಕೃಷ್ಣ ರಾವ್ ,ಪ್ರಧಾನ ಅರ್ಚಕರಾದ ನಡುಮನೆ ನಾರಾಯಣಭಟ್, ಸದಸ್ಯರಾದ ತೇಜ್ ರಾಜ್ ಪೊಳಲಿ, ಸತೀಶ್ ಕೋಡಿಬೆಟ್ಟು, ಅಶೋಕ ಬೆಲ್ಚಾಡ ನಂದ್ಯ, ಅಮಿತಾ ಯಶೋದರ, ಪಾರ್ವತಿ,ಬಾಲಕೃಷ್ಣ ಭಟ್ ಕೋಡಿಬೆಟ್ಟು,ವಿಷ್ಣುಮೂರ್ತಿ ಭಟ್ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು.




















