ಮಂಗಳೂರು:ಯೆನೆಪೊಯ ವಿಶ್ವವಿದ್ಯಾನಿಲಯವು ಕ್ಯಾನ್ಸರ್ ಕುರಿತು ವ್ಯಾಪಕ ಜನ ಜಾಗೃತಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಭಾಗವಾಗಿ ಮಂಗಳೂರು ತಾಲೂಕಿನಲ್ಲಿ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಸಲ್ಲಿಸುತ್ತಿರುವ ಕ್ರಿಸ್ತ ಭಗಿನಿಯರಿಗೆ ಕ್ಯಾನ್ಸರ್ ಜಾಗೃತಿ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ದೇರಳಕಟ್ಟೆಯಲ್ಲಿನ ಯೆನೆಪೋಯ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ಸಭಾಂಗಣದಲ್ಲಿ 24.02.2017 ರಂದು ಹಮ್ಮಿಕೊಳ್ಳಲಾಯಿತು.ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಯೆನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿUಳಾದ ಡಾ| ಎಮ್. ವಿಜಯಕುಮಾರ್‍ರವರು ತಮ್ಮ ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿರುವ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಪ್ರಸ್ತುತತೆ, ಕ್ಯಾನ್ಸರ್ ಪತ್ತೆಗಾಗಿ ಮುಂಚಿತವಾಗಿ ಹಮ್ಮಿಕೊಳ್ಳಲಾಗುವ ಶಿಬಿರಗಳು ಮತ್ತು ಇವುಗಳ ಪ್ರಯೋಜನದ ಕುರಿತು ವಿವರಿಸಿದರು. ಈಗಾಗಲೇ ಬೇರೆ ಬೇರೆ ಉದ್ದೇಶಿತ ಗುಂಪುಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ.ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ 13500 ಎನ್ ಎಸ್ ಎಸ್ ಸ್ವಯಂಸೇವಕರುಗಳಿಗೆ, 135 ಎನ್ ಎಸ್ ಎಸ್ ಅಧಿಕಾರಿಗಳಿಗೆ,1800 ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರುಗಳಿಗೆ, 2500 ನರ್ಸಿಂಗ್ ವಿದ್ಯಾರ್ಥಿಗಳಿಗೆ ಮತ್ತು 500 ಶಾಲಾ ಶಿಕ್ಷಕರುಗಳಿಗೆ ತರಬೇತಿ ನೀಡಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ಬೆಥನಿ ಸಿಸ್ಟರ್ಸ್ ಪ್ರೊವೆನ್ಸಿಯಲ್ ಸುಪೀರಿಯರ್ ರೆವೆರೆಂಡ್ ಸಿಸ್ಟರ್ ಎಂ.ಸಿಸಿಲಿಯಾ ಮೆಂಡೋನ್ಸ ಕ್ಯಾನ್ಸರ್ ಕಾಯಿಲೆಯ ನಿಯಂತ್ರಣಕ್ಕಾಗಿ ಜಾಗ್ರತಿ ಮೂಡಿಸಲು ಧಾರ್ಮಿಕ ಭಗಿನಿಯರಿಗೆ ತರಬೇತಿ ನೀಡುತ್ತಿರುವುದು ಶ್ಲಾಘನಾರ್ಹ ವಿಚಾರ. ಈ ಭಗಿನಿಯರ ಮುಖೇನ ಇಡೀ ಸಮುದಾಯಕ್ಕೆ ಇದರಿಂದ ಪ್ರಯೋಜನಕಾರಿ ಆಗುತ್ತದೆ ಎಂದು ಯೆನೆಪೋಯ ವಿಶ್ವವಿದ್ಯಾನಿಲಯದ ಈ ವಿಶಿಷ್ಠ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಗೌರಾವಾನ್ವಿತ ಅತಿಥಿಯಾಗಿ ಉಪಸ್ಥಿತರಿದ್ದ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಮಹಮ್ಮದ್ ಅಮೀನ್ ವಾಣಿ ಸಮಯೋಚಿತವಾಗಿ ಮಾತಾಡಿದರು. ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ| ಶ್ರೀಕುಮಾರ್ ಮೆನನ್ ವೇದಿಕೆಯಲ್ಲಿ ಯೆನೆಪೋಯ ಕ್ಯಾನ್ಸರ್ ಕೇರ್ ಸೆಂಟರ್‍ನ ಕ್ಯಾನ್ಸರ್ ಪ್ರತಿಬಂಧಕÀ ವಿಭಾಗದ ಡಾ| ಇಬ್ರಾಹಿಂ ನಾಗನೂರ್, ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಶುಂಪಾಲರಾದ ಡಾ| ಆಶಾ ಪಿ. ಶೆಟ್ಟಿ, ಸಮುದಾಯ ವೈದ್ಯಕೀಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಆರ್ ಪಿ ಪೈ ಹಾಗೂ ವಿಶ್ವವಿದ್ಯಾನಿಲಯದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಸಂಯೋಜಕಿÀ ಡಾ| ಅಶ್ವಿನಿ ಡಿ ಶೆಟ್ಟಿ ರವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ| ಮಹಮ್ಮದ್ ಗುತ್ತಿಗಾರ್ ಸ್ವಾಗತಿಸಿದ್ದು, ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮುಖ್ಯ ನರ್ಸಿಂಗ್ ಅಧಿಕಾರಿ ಸಿಸ್ಟರ್ ಐಲಿನ್ ಮಥಾಯಿಸ್ ವಂದಿಸಿದರು. ಡಾ.ಲಕ್ಷ್ಮಿ ನಾರಾಯಣ ಎಸ್ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ತಾಲೂಕಿನ 150 ಭಗಿನಿಯರು ಈ ತರಬೇತಿಯಲ್ಲಿ ಭಾಗವಹಿಸಿದ್ದರು. ತರಬೇತಿಯಲ್ಲಿ ಕ್ಯಾನ್ಸರ್ ಕಾಯಿಲೆ ಎಂದರೇನು? ಕಾರಣಗಳು, ಗುಣ ಲಕ್ಷಣಗಳು, ಕ್ಯಾನ್ಸರ್‍ನ ವಿವಿಧ ವರ್ಗಗಳು, ಪ್ರಾರಂಭದಲ್ಲಿ ಪತ್ತೆಹಚ್ಚುವ ವಿಧಾನ, ಚಿಕಿತ್ಸೆ ಹಾಗೂ ನಿಯಂತ್ರಣ ಕುರಿತು ಅನುಭವಿ ಸಂಪನ್ಮೂಲ ವ್ಯಕ್ತಿಗಳು ತರಬೇತಿಯನ್ನು ನಡೆಸಿಕೊಟ್ಟರು. ಡಾ. ಗುರುಪ್ರಸಾದ್, ಡಾ. ಪೂನಂ ನಾಯಕ್, ಡಾ| ಅಶ್ವಿನಿ ಡಿ ಶೆಟ್ಟಿ, ಡಾ.ಇಮ್ರಾನ್ ಪಾಶಾ ಹಾಗೂ ಡಾ| ಇಬ್ರಾಹಿಂ ನಾಗನೂರ್ ಸಂಪನ್ಮೂಲ ವ್ಯಕ್ತಿÀ್ತಗಳಾಗಿ ಸಹಕರಿಸಿದ್ದರು. ಈ ಕಾರ್ಯಕ್ರಮದ ಭಾಗವಾಗಿ ಭಗಿನಿಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು.


