ಬಂಟ್ವಾಳ:ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಬಿ.ಸಿ.ರೋಡ್ ಶಾಖೆಯ ಬ್ಯಾಂಕಿನ ಎಟಿಎಂ ನಿಂದ’ಶಿಕ್ಷಕಿಯೊಬ್ಬರು ಡ್ರಾ’ಮಾಡಿದ ನಗದಿನಲ್ಲಿ ಎರಡು ಸಾವಿರ ರೂ.ವಿನ ಎರಡು ನೋಟು ನಕಲಿ ಎಂದು ಶಂಕೆ ವ್ಯಕ್ತಪಡಿಸಿದ ಬ್ಯಾಂಕಿನ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ಗೊಂದಲಕ್ಕೆ ಕಾರಣವಾದ ವಿದ್ಯಮಾನ ಸೋಮವಾರ ನಡೆಯಿತು.ಎಟಿಎಂನಿಂದ ಮೂವತ್ತು ಸಾವಿರ ರೂ.ನಗದನ್ನು ಡ್ರಾ ಮಾಡಿದ ಶಕ್ಷಕಿ ಚಿಲ್ಲರೆಗಾಗಿ ಕ್ಯಾಶ್ ಕೌಂಟರ್ ಗೆ ಬಂದು ಎರಡು ಸಾವಿರದ ಎರಡು ನೋಟ್ ನ್ನು ನೀಡಿದಾಗ ಸಿಬ್ಬಂದಿ ಅದೆರಡು ನಕಲಿನೋಟುಗಳೆಂದು ಹೇಳಿ ಚಿಲ್ಲರೆ ನೀಡಲು ನಿರಾಕರಿಸಿದಲ್ಲದೆ ಬ್ಯಾಂಕಿನಲ್ಲಿದ್ದ ಗ್ರಾಹಕರ ಸಮ್ಮುಖದಲ್ಲಿ ಶಿಕ್ಷಕಿಯನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದರು.
ಈ ಸಂದಭ೯ದಲ್ಲಿ ಶಾಖಾ ವ್ಯವಸ್ಥಾಪಕರು ಹಾಗೂ ಇತರೆ ಸಿಬ್ಬಂದಿಗಳು ಕೂಡ ಶಿಕ್ಷಕಿಯದ್ದೆ ತಪ್ಪು ಎಂಬಂತೆ ವತಿ೯ಸಿದರು.ಇದರಿಂದ ಅಸಮಾಧಾನಗೊಂಡ ಶಕ್ಷಕಿ ನೇರ ತರಾಟೆಗೆ ತೆಗೆದುಕೊಂಡರು.ಆಗ ಗ್ರಾಹಕರು ಕೂಡ ಶಿಕ್ಷಕಿಯ ಪರ ವಾದಿಸಿದರು.ಪರಿಣಾಮ ಬ್ಯಾಂಕಿನಲ್ಲಿಗೊಂದಲದ ವಾತಾವರಣ ಉಂಟಾಯಿತು.ಮಾಡದ ತಪ್ಪಿ ಸಿಬ್ಬಂದಿಗಳ ಎಡವಟ್ಟಿನಿಂದ ಅವಮಾನವಾಗಿದ್ದು,ಕ್ಷಮೆ ಕೋರುವಂತೆ ಪಟ್ಟು ಹಿಡಿದ ಶಿಕ್ಷಕಿ ಈಹಿಂದೆ ಕೂಡ ಬ್ಯಾಂಕ್ ಸಿಬ್ಬಂದಿಗಳು ಇದೇ ರೀತಿ ವತಿ೯ಸಿರುವುದನ್ನು ನೆನಪಿಸಿದರು.ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.ಕೊನೆಗೆ ಶಿಕ್ಷಕಿಗೆ ಅದೇ ಎರಡು ಸಾವಿರದ ನೋಟಿಗೆ ನೂರರ ನೋಟಿನ ಚಿಲ್ಲರೆ ನೀಡಿದ್ದು ,ಗೊಂದಲಕ್ಕೆ ತೆರೆ ಬಿತ್ತು.
*ಖಾತೆ ಹಿಂತೆಗೆತ;
ಈ ಬ್ಯಾಂಕಿನ ಕೆಲ ಸಿಬ್ಬಂದಿಗಳ ವತ೯ನೆಗೆ ಬೇಸತ್ತು ಈಗಾಗಲೇ ಹಲವಾರು ಶಿಕ್ಷಕ,ಶಿಕ್ಷಕಿಯರು ತಮ್ಮ ಖಾತೆಯನ್ನೆ ಹಿಂತೆಗೆದು ಕೊಂಡಿದ್ದಾರೆ ಎಂದು ನೊಂದ ಶಿಕ್ಷಕಿ ತಿಳಿಸಿದ್ದಾರೆ.
*ಕನ್ನಡಿಗರನ್ನು ನಿಯುಕ್ತಿಗೊಳಿಸಿ:
ಎಸ್. ಬಿ .ಐ.ನ ಬಿ.ಸಿ.ರೋಡು ಶಾಖೆಯಲ್ಲಿ ಒಂದಿಬ್ಬರ ಹೊರತುಪಡಿಸಿ ಶಾಖಾಧಿಕಾರಿ ಸಹಿತ ಬಹುತೇಕ ಮಂದಿ ಹಿಂದಿ,ಇಂಗ್ಲೀಷ್ ಬಲ್ಲವರಾಗಿದ್ದಾರೆ. ಹಾಗಾಗಿ ಇಲ್ಲಿನ ಗ್ರಾಹಕರು ಕೂಡ ವ್ಯವಹಾರದ ವೇಳೆ ಚಡಪಡಿಸುವಂತಾಗಿದೆ ಎಂದು ದೂರಲಾಗಿದೆ.ಗ್ರಾಮೀಣ ಭಾಗದ ಜನಸಾಮಾನ್ಯರು ವ್ಯವಹಾರದ ಸಂದಭ೯ ಭಾಷೆಯ ತಿಳುವಳಿಕೆಯಿಲ್ಲದೆ ಗೊಂದಲಕ್ಕೊಳಗಾಗುವುದು ಇದೆ ಎಂದು ಆರೋಪಿಸಲಾಗಿದೆ.ಈಹಿನ್ನಲೆಯಲ್ಲಿ ಕನ್ನಡ ಬಲ್ಲ ಸಿಬ್ಬಂದಿಗಳನ್ನು ನೇಮಿಸುವಂತೆ ಗ್ರಾಹಕರು ಈಸಂದಭ೯ದಲ್ಲಿ ಒತ್ತಾಯಿಸಿದ್ದಾರೆ.
