ಅರ್ಕುಳ ಶ್ರೀ ಉಳ್ಳಾಕ್ಳು ಮಗೃಂತಾಯಿ ಧರ್ಮದೇವತೆಗಳ ದೈವಸ್ಥಾನದಲ್ಲಿ ನೂತನ ಧ್ವಜ ಪ್ರತಿಷ್ಠೆ ,ಬ್ರಹ್ಮಕಲಶಾಭಿಷೇಕ ಹಾಗೂ ವರ್ಷಾವಧಿ ಸಾಣದ ಜಾತ್ರೆಯು ಫೆಬ್ರವರಿ 26 ರಿಂದ ಮಾರ್ಚ್ 4 ರ ವರೆಗೆ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಅರ್ಕುಳದ ಧರ್ಮಧರ್ಶಿ ಅರ್ಕುಳ ಬೀಡು ವಜ್ರನಾಥ ಶೆಟ್ಟಿ ಅವರು ತಿಳಿಸಿದ್ದಾರೆ.ಶ್ರೀ ವಜ್ರನಾಭ ಶೆಟ್ಟಿ ಅವರು ಇತ್ತೀಚೆಗೆ ಅರ್ಕುಳ ಬೀಡಿನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.ಫೆಬ್ರವರಿ 26 ರವಿವಾರದಂದು ಪೂರ್ವಹ್ನ ಮಕರ ತೋರಣ ಮುಹೂರ್ತ ಹಾಗೂ ಸಂಜೆ ಪ್ರಥಮ ಚೆಂಡು ,ಫೆಬ್ರವರಿ 27ರಂದು ಅಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರ ದೈವಸ್ಥಾನಕ್ಕೆ ಆಗಮಿಸಲಿದೆ.ಮಾರ್ಚ್ 2 ಗುರುವಾರದಂದು ಮಧ್ಯಾಹ್ನ 10 :45 ಕ್ಕೆ ನೂತನ ಧ್ವಜ ಪ್ರತಿಷ್ಠೆ ಧ್ವಜಾರೋಹಣವಾಗಿ ಬ್ರಹ್ಮಕಲಾಶಾಭಿಷೇಕ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.ಅಂದು ಸಂಜೆ ಮಜಿಲ ಗುತ್ತು ರಾಮ್‍ದಾಸ್ ಕೋಟ್ಯಾನ್ ಅವರಿಂದ ನೂತನ ಶಿಲಾದೀಪಸ್ತಂಭಗಳ ಸಮರ್ಪಣೆ ಹಾಗೂ ರಾತ್ರಿ ಕಂಚಿಲು ಸೇವೆ ನಡೆಯಲಿದೆ.ದಿನಾಂಕ 3 ಶುಕ್ರವಾರದಂದು ಪೂರ್ವಾಹ್ನ ದೈವಸ್ಥಾನದಲ್ಲಿ ಮಡಸ್ತಾನ ಸೇವೆ, ಬಸದಿಯಲ್ಲಿ ಶ್ರೀ ಪದ್ಮಾವತೀ ದೇವಿ ಪ್ರತಿಷ್ಟೆ , ಅನ್ನಸಂತರ್ಪಣೆ ,ಸಂಜೆ ಸಾಣದಲ್ಲಿ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ ನಡೆದು ರಾತ್ರಿ ಶ್ರೀ ಉಳ್ಳಾಕ್ಳು ಧರ್ಮ ದೇವತೆಗಳ ನೇಮ ಹಾಗೂ ಬಂಡಿ ಉತ್ಸವ ನಡೆಯಲಿದೆ.ಮರ್ಚ್ 4 ರಂದು ಶನಿವಾರ ಪೂರ್ವಾಹ್ನ ಚಂಡಿಕಾಯಾಗ ,ಅನ್ನಸಂತರ್ಪಣೆ ಸಂಜೆ ಅರ್ಕುಳ ಬಸದಿಯಲ್ಲಿ ಮಹಾಮಾತೆ ಪದ್ಮಾವತಿ ದೇವಿಗೆ ಲಕ್ಷ ಪುಷ್ಪಾರ್ಚಣೆ ಪೂಜೆ , ರಾತ್ರಿ ಶ್ರೀ ಮಗೃಂತಾಯಿ ಧರ್ಮದೈವದ ನೇಮ ಬಂಡಿ ಉತ್ಸವಗಳು ಸಂಪನ್ನಗೊಳ್ಳಲಿದೆ.

Arkula_Invitation_Release
ಶ್ರೀ ಕ್ಷೇತ್ರ ಅರ್ಕುಳದಲ್ಲಿ ನಡೆಯಲಿರುವ ಬ್ರಹ್ಮಕಲಶ , ನೇಮ ಉತ್ಸವಗಳಿಗೆ ಭಕ್ತಾಭಿಮಾನಿಗಳಿಗೆ ಆದರದ ಸ್ವಾಗತ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಅರ್ಕುಳ ಬೀಡು ರತ್ನ ರಾಜ ಶೆಟ್ಟಿ ,ಅರ್ಕುಳ ಗೋವಿಂದ ಶೆಣೈ ,ಅರ್ಕುಳ ಕಂಪ ಸದಾನಂದ ಆಳ್ವ ,ಡಾ. ಎ.ಜಯಕುಮಾರ ಶೆಟ್ಟಿ ಡಾ. ಅಶ್ವಿನಿ ಕುಮಾರ್,ತುಪ್ಪೆಕಲ್ಲು ಉಮೇಶ ಸೇಮಿತ ಮಂಟಮೆ ಜಯರಾಮ ಕರ್ಕೇರಾ ,ಕುಂಪಣಮಜಲು ಲಕ್ಷ್ಮಣ ಕುಮಾರ್ ,ಮನೋಹರ್, ಅರ್ಕುಳ ರಮೇಶ ,ಗ್ರಾ.ಪ.ಸದಸ್ಯ ಸಂತೋಷ್, ಮಂಟಮೆ ದಿನಕರ್ ಕರ್ಕೇರಾ ,ಅರ್ಕುಳ ಬೀಡು ಅಜಿತ್ ಕುಮಾರ್ ಶೆಟ್ಟಿ,ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *