ಮೂಡುಬಿದಿರೆ: ಸಾಹಿತ್ಯಕ್ಕೆ ಜಾತಿ, ಮತ,ಅಂತಸ್ತುಗಳನ್ನು ಮೀರಿ ನಿಲ್ಲುವ ಸಾಮಥ್ರ್ಯವಿದೆ. ಈ ಕಾರಣದಿಂದಾಗಿಯೇ ಜೀತದ ಸುಳಿಯಲ್ಲಿ ಕಮರಿದ್ದ ಕುಟುಂಬದಿಂದ ಒಡಹುಟ್ಟಿದವರು ನೀಡಿದ ಶೈಕ್ಷಣಿಕ ನೆರವು, ಎಲ್ಲಕ್ಕಿಂತ ಮುಖ್ಯವಾಗಿ ಸಾಹಿತ್ಯದ ಸಾಮಥ್ರ್ಯವಿರುವ ಕವಿತೆ ನನ್ನನ್ನು ಈ ಎತ್ತರಕ್ಕೆ ನನ್ನನ್ನು ತಂದು ನಿಲ್ಲಿಸಿದೆ ಎಂದು ಕವಿ, ಬೆಂಗಳೂರಿನ ಪ್ರೊ.ಟಿ.ಎಲ್ಲಪ್ಪ ಹೇಳಿದರು. ಅವರು ಕಾಂತಾವರ ಕನ್ನಡ ಸಂಘದ ವತಿಯಿಂದ ರವಿವಾರ ಕನ್ನಡ ಭವನದಲ್ಲಿ ನಡೆದ ಮುದ್ದಣ ಸಾಹಿತ್ಯೋತ್ಸವ 20017, ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ, ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿಪ್ರಶಸ್ತಿಗಳಿಂದ ಪುರಸ್ಕøತರಿಗೆ, ಕೆಲವೊಮ್ಮೆ ಪುರಸ್ಕøತರಿಂದ ಪ್ರಶಸ್ತಿಗಳಿಗೆ ಗೌರವ ಬರುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇದರ ನಡುವೆ ಹಸ್ತಪ್ರತಿಯಲ್ಲೇ ಮೌಲ್ಯಗಳನ್ನು ಹುಡುಕಿ ಅದರ ಹಿಂದಿರುವ ಪ್ರತಿಭೆಯನ್ನು ನಾಡಿನ ಮುಂದೆ ನಿಲ್ಲಿಸುವ ವಸ್ತುನಿಷ್ಠತೆಯ ಮಹತ್ಕಾರ್ಯ ಮುದ್ದಣ ಕಾವ್ಯ ಪ್ರಶಸ್ತಿಯ ಮೂಲಕ ನಡೆದಿದೆ. ಈ ಮೂಲಕ ಮೌಲಿಕ ಕಾರ್ಯಗಳನ್ನು ಹೆಚ್ಚಿಸುವಲ್ಲಿ ಕವಿಯನ್ನು ಹೆಚ್ಚಿನ ಆತ್ಮವಿಮರ್ಶೆಗೆ ಒಡ್ಡುವ ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವಾಗುತ್ತಿದೆ ಅವರು ತಮ್ಮ ‘ಕಣ್ಣ ಪಾಪೆಯ ಬೆಳಕು’ ಹಸ್ತಪ್ರತಿಗೆ 2016ನೇ ಸಾಲಿನ 42ನೆಯ ಮುದ್ದಣ ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಹತ್ತು ಸಾವಿರ ರೂ ಗೌರವ ನಗದು ಶಾಲು, ಹಾರ,ತಾಮ್ರಪತ್ರ ಗೌರವ ಸಹಿತ ಪ್ರಶಸ್ತಿ ಪ್ರದಾನ ಮಾಡಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಮಾತನಾಡಿ ಸಾಹಿತ್ಯ ಕೃತಿಗಳನ್ನು ಖರೀದಿಸಿ ಓದುವ ಪ್ರವೃತ್ತಿ ನಮ್ಮಲ್ಲಿ ಬೆಳೆಯಬೇಕು. ತಮ್ಮ ವಿಮರ್ಶೆ,ಅನಿಸಿಕೆಯನ್ನು ಸಾಹಿತಿಗಳಿಗೆ ತಲುಪಿಸುವುದರ ಮೂಲಕ ಓದುಗರು ಸಾಹಿತ್ಯದ ಬೆಳವಣಿಗೆಗೆ ಕೊಡುಗೆ ನೀಡುವಂತಾಗಬೇಕು ಎಂದವರು ಹೇಳಿದರು.ಕನ್ನಡಿಗರಿಗೇ ಆದ್ಯತೆ: ಮುದ್ದಣ ಸಾಹಿತ್ಯೋತ್ಸವ, ಪ್ರಶಸ್ತಿ ಪ್ರದಾನ, ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅದಾನಿ ಉಡುಪಿ ಪವರ್ ಕಾರ್ಪೊರೇಶನ್ ಲಿ.ನ ಯೋಜನಾಭಿವೃದ್ಧಿ ಮತ್ತು ಕಾರ್ಪೊರೇಟ್ ವ್ಯವಹಾರಗಳ ಉಪಾಧ್ಯಕ್ಷ ಕಿಶೋರ್ ಆಳ್ವ ಅದಾನಿ ಉದ್ಯಮ ಸಮೂಹವು ಉಡುಪಿಯ ತನ್ನ ವಿದ್ಯುತ್ ಸ್ಥಾವರದಲ್ಲಿ ಶೇ 82 ಪಾಲು ಕನ್ನಡಿಗರಿಗೆ ಉದ್ಯೊಗ ನೀಡಿದೆ, ತನ್ನ ಸಾಮಾಜಿಕ ಬದ್ದತೆಯ ವಿನಿಯೋಗದಲ್ಲಿ 80 ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿ, ಜಿಲ್ಲೆಯಲ್ಲಿ ಹನ್ನೆರಡು ಸಾವಿರ ಮಂದಿಗೆ ಜೀವ ವಿಮೆ, ಸಾಮಾಜಿಕ, ಸಾಹಿತ್ಯ ಹೀಗೆ ಹಲವು ರಂಗಗಳಲ್ಲಿ ನೆರವು ನೀಡಿದೆ. ಕಾಂತಾವರ ಕನ್ನಡ ಸಂಘದ ನಾಡು ನುಡಿ ಸೇವೆಯನ್ನೂ ಆರ್ಥಿಕವಾಗಿ ಆಧರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತೊಡಗಿಕೊಳ್ಳಲಿದ್ದೇವೆ ಎಂದು ಹೇಳಿದರು.

???????????????????????????????

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‍ನ ಅಧ್ಯಕ್ಷ ಕೆ.ಎಂ.ಉಡುಪ ಮಾತನಾಡಿ ಕನ್ನಡ ಪ್ರೀತಿಯನ್ನು ಬೆಳೆಸುವ ಕಾರ್ಯ ಇಂದಿನ ಅಗತ್ಯವಾಗಿದೆ. ಇದು ಕನ್ನಡಿಗರೆಲ್ಲರ ಕರ್ತವ್ಯವೂ ಹೌದು ಎಂದರು ಸರ್ಕಾರದಿಂದ ಏಕಾಂಗಿಯಾಗಿ ಕನ್ನಡ ಭಾಷಾಭಿವೃದ್ಧಿಯ ಕೆಲಸದಲ್ಲಿ ಯಶಸ್ಸಸು ನಿರೀಕ್ಷಿಸಲು ಸಾಧ್ಯವಿಲ್ಲ. ಉದ್ದಿಮೆಗಳಲ್ಲಿ ಇಂದು ಸಾಮಾಜಿಕ ಜವಾಬ್ದಾರಿಯ ನಿಧಿಯನ್ನು ಸಾಹಿತ್ಯ, ಬೌದ್ಧಿಕ, ಸಾಂಸ್ಕøತಿಕ ಕಾರ್ಯಗಳಿಗೂ ವಿನಿಯೋಗಿಸುವ ಕೆಲಸ ಹೆಚ್ಚಬೇಕಾಗಿದೆ ಎಂದವರು ಹೇಳಿದರು.

ಇದೇ ಸಂದರ್ಭದಲ್ಲಿ ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಹದಿನಾಲ್ಕು ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಗ್ರಂಥಮಾಲೆಯ ಸಂಪಾದಕ ಡಾ.ಬಿ.ಜನಾರ್ಧನ ಭಟ್ ವಿವರ ನೀಡಿದರು. ಸಂಘದ ನುಡಿನಮನ ಉಪನ್ಯಾಸ ಮಾಲೆಯ ಸಂಪುಟ ನುಡಿಹಾರದ ಏಳನೇ ಸಂಪುಟವನ್ನು ಲೋಕಾರ್ಪಣೆಗೊಳಿಸಿದರು. ನುಡಿಹಾರದ ಸಂಪಾದಕ ಡಾ.ಎಸ್.ಆರ್.ಅರುಣ ಕುಮಾರ್ ವಿವರ ನೀಡಿದರು.
ಗ್ರಂಥಮಾಲೆಯ ಸಾಧಕರುಗಳು, ಗ್ರಂಥ ಮಾಲೆಯ ಕೃತಿಕಾರರು, ಪ್ರಾಯೋಜಕರುಗಳು, ನುಡಿಹಾರ, ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ಸಂಪಾದಕರುಗಳನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿ, ಪ್ರಶಸ್ತಿ ಪುರಸ್ಕøತರನ್ನು ಪರಿಚಯಿಸಿ ವಂದಿಸಿದರು. ಬಾಬು ಶೆಟ್ಟಿ ನಾರಾವಿ,ವಿಠಲ ಬೇಲಾಡಿ ಕಾರ್ಯಕ್ರಮ ನಿರ್ವಹಿಸಿದರು.
ಅಪರಾಹ್ನ ಮಂಗಳೂರಿನ ಕು.ಲಹರಿ ಪ್ರಸಾದ್ ಅವರಿಂದ ಸಂಗೀತ ಸೌರಭ, ಕಾರ್ಕಳದ ಅನಂತಶಯನ ಮಹಿಳಾ ಯಕ್ಷಗಾನ ಮಂಡಳಿಯವರಿಂದ ಶ್ರೀರಾಮ ದರ್ಶನ ತಾಳಮದ್ದಳೆ ಕೂಟ ನಡೆಯಿತು.

//ಬಾಕ್ಸ್//

ನಾಡಿಗೆ 187ನೇ ನಮಸ್ಕಾರ!

ಸುವರ್ಣ ಕರ್ನಾಟಕ ಸಂಭ್ರಮದ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಧಕರ ಜೀವನಾದರ್ಶಗಳ ಸಾಧನೆಯನ್ನು ದಾಖಲಿಸಿದ ಕಿರು ಹೊತ್ತಗೆಗಳ ಗ್ರಂಥಮಾಲೆಯೇ ನಾಡಿಗೆ ನಮಸ್ಕಾರ. ಈಗಾಗಲೇ 175 ಕೃತಿಗಳು ಪ್ರಕಟವಾಗಿದ್ದು ಈ ಸಂದರ್ಭದಲ್ಲಿ ಮತ್ತೆ 12ಕೃತಿಗಳು ಲೊಕಾರ್ಪಣೆಗೊಂದು ನಾಡಿಗೆ 188 ನಮಸ್ಕಾರಗಳು ಸಂದಂತಾಗಿವೆ.
ಡಾ.ಟಿ.ಎನ್.ಭಟ್( ಲೇ: ಎಸ್.ಆರ್.ಅರುಣ ಕುಮಾರ್), ಅಂಬಾತನಯ ಮುದ್ರಾಡಿ(ಲೇ:ಪಾದೇಕಲ್ಲು ವಿಷ್ಣು ಭಟ್), ರಮಾನಂದ ಘಾಟೆ(ಡಾ.ಬಿ.ಜನಾರ್ದನ ಭಟ್), ಕಾಪು ಮುದ್ದಣ ಶೆಟ್ಟಿ (ಅಲ್ಬರ್ಟ್ ರೋಡಿಗ್ರಸ್) ಕೋಟ ಲಕ್ಷ್ಮೀ ನಾರಾಯಣ ಆಚಾರ್ಯ(ಲೇ: ಕಾರ್ಕಡ ಮಹಾಬಲೇಶ್ವರ ಆಚಾರ್ಯ) ಶ್ರೀಧರ ಹಂದೆ( ಲೇ: ಮಂಜುನಾಥ ಉಪಾಧ್ಯ) ಗಂಗಾ ಪಾದೇಕಲ್ಲು (ಲೇ: ದಿವ್ಯಗಂಗಾ ಕಾಸರಗೋಡು),ಸಂಗೀತ ವಿದ್ವಾಂಸ ನಂದಾವರ ಕೇಶವ ಭಟ್ (ಲೇ:ಬಿ.ಎಂ.ರೋಹಿಣಿ) ಯಕ್ಷಗಾನದ ಸವ್ಯಸಾಚಿ ಕವಿಭೂಷಣ ವೆಂಕಪ್ಪ ಶೆಟ್ಟಿ(ಲೇ: ಕೆದಂಬಾಡಿ ತಿಮ್ಮಪ್ಪ ರೈ),ನವಕರ್ನಾಟಕದ ರೂವಾರಿ ಆರ್.ಎಸ್. ರಾಜಾರಾಂ (ಲೇ: ಸಿ.ಆರ್.ಕೃಷ್ಣರಾವ್),ಗಿರಿಬಾಲೆ( ಡಾ.ವಸಂ ಕುಮಾರ್ ಉಡುಪಿ), ಗಲ್ಫ್ ಕನ್ನಡಿಗ ಬಿ.ಜಿ.ಮೋಹನದಾಸ (ಲೇ: ಅಂಶುಮಾಲಿ) ಕೃತಿಗಳು ಇದೀಗ ಲೋಕಾರ್ಪಣೆಗೊಂಡಿವೆ.

By Suddi9

Leave a Reply

Your email address will not be published. Required fields are marked *