ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಪ್ರಸಿದ್ಧ ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನದಲ್ಲಿ ಇದೇ 21ರಿಂದ 22ರತನಕ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ.
ಫೆ.21ರಂದು ಬೆಳಿಗ್ಗೆ ಸಿದ್ಧಕಟ್ಟೆ ಮಹಮ್ಮಾಯಿ ಕಟ್ಟೆಯಲ್ಲಿ ಬಿಂಬ ಪ್ರತಿಷ್ಠೆ, ದೇವಸ್ಥಾನದಲ್ಲಿ ಚಂಡಿಕಾಯಾಗ, ಪುಣ್ಯಾಹ ಕಲಶ, ಸಾನಿಧ್ಯ ಪುಷ್ಠಿ ನವಕ ಕಲಶಾಭಿಷೇಕ, ದೈವಗಳಿಗೆ ನವಕ ಕಲಶಾಭಿಷೇಕ, ಮಧ್ಯಾಹ್ನ ಆಶ್ಲೇಷಾ ಬಲಿ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಮಹಿಷಂದಾಯ ದೈವದ ನೇಮ, ರಾತ್ರಿ 9ಗಂಟೆಗೆ ಮಹಮ್ಮಾಯಿ ಬಿಂಬದ ಶೋಭಾಯಾತ್ರೆ, 11ಗಂಟೆಗೆ ರಂಗಪೂಜೆ, 1ಗಂಟೆಗೆ ಧೂಮಾವತಿ ಬಂಟ ದೈವಗಳ ನೇಮೋತ್ಸವ, ದೇವರ ಬಲಿ ಉತ್ಸವ, ಮಹಾಪೂಜೆ, ಮುಂಜಾನೆ 4ಗಂಟೆಗೆ ಮಹಮ್ಮಾಯಿ ದರ್ಶನ ರಾಶಿಪೂಜೆ , ಬಲಿ ಉತ್ಸವ, ಪ್ರಸಾದ ವಿತರಣೆ ನಡೆಯಲಿದೆ.
ಫೆ.22ರಂದು ಸಂಜೆ 6ಗಂಟೆಗೆ ವಾರಾಹಿ ದೈವದ ನೇಮ, ದೈವಗಳ ಭಂಡಾರ ಅವರೋಹಣ, ಇದೇ ವೇಳೆ ನೌಶಾದ್ ಬಳಗದಿಂದ ಸಂಗೀತ ರಸಮಂಜರಿ, ರಾಯಿ-ಕೊಯಿಲ ಕುಸಾಲ್ದ ಕಲಾವಿದರಿಂದ ‘ಮುಗಲ್’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದೆ.
—
