ಮಕ್ಕಳು ಶಾಲೆಯಲ್ಲಿಅಥವಾಕಲಾಜೀಜಿನಲ್ಲಿ ಪಾಠಓದಿದನ್ನು 3 ಗಂಟೆಯಲ್ಲಿ ಬರೆಯುವ ಕಾಲ ಬಂದಿದೆ ಮಕ್ಕಳು ಪರೀಕ್ಷೆ ಎಂಬ ಉದ್ವೇಗದಿಂದ ಹೊರ ಬರಲು ಪ್ರಯತ್ನಿಸಬೇಕಾಗಿದೆ.ಪ್ರಾಥಮಿಕ ಶಾಲೆಯಿಂದ 9 ನೇ ತರಗತಿಯವರೆಗೆ ಪರೀಕ್ಷೆಗಳು ಸರಿಸುಮಾರು ಮಾರ್ಛ 2ನೆ ವಾರದಿಂದ ಪ್ರಾರಂಬವಾಗುತ್ತದೆ.ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ31 ರಿಂದ ಪ್ರಾರಂಭವಾಗಿದೆ.ಇನ್ನು ಉಳಿದ ಕೆಲವು ದಿನಗಳಲ್ಲಿ ಮಕ್ಕಳು ಸರಿಯಾದಅಭ್ಯಾಸ ಮಾಡಿದರೆಯಶಸ್ಸು ಸಾದ್ಯ.

ಅದಕ್ಕೆ ಕೆಲವು ಸೂತ್ರಗಳನ್ನು ಅನುಸರಿಸಬಹುದಾಗಿದೆ.

ಉಳಿದ ದಿನಗಳ ಕುರಿತು ಲೆಕ್ಕ ಹಾಕಿ:-
ಮಕ್ಕಳೆ ಪರೀಕ್ಷೆಗೆ ಉಳಿದ ದಿಗಳ ಕುರಿತು ಲೆಕ್ಕ ಹಾಕಿ ಉದಾ:25 ದಿಗ ಉಳಿದರೆ ನಿಮಗಿರುವ 6-8 ವಿಷಯಗಳನ್ನು ಗುರುತಿಸಿಕೊಳ್ಳಿ.ಅವುಗಳಲ್ಲಿ ಸುಲಭವಾದ ವಿಷಯಗಳಿಗೆ ಕಡಿಮೆ ದಿನಗಳನ್ನು ಕಷ್ಟಕರವಾದ ವಿಷಯಗಳಿಗೆ ಹೆಚ್ಚು ದಿನಗಳನ್ನು ಹೊಂದಿಸಿಕೊಳ್ಳಿಈ ಸಮಯವನ್ನು ಹೊಂದಾಣಿಕೆ ಮಾಡುವಾಗಕೊನೆಯ 2 ದಿನಗಳಣ್ನು ಬಿಡಿ ಎಕೆಂದರೆ ಆ ದಿನಗಳಲ್ಲಿ ನಿಮ್ಮ ಮನಸ್ಸು ಪ್ರೆಶ್ ಆಗಬೇಕು ಅದಕ್ಕಾಗಿ.ಸುಲಭವಾದ ವಿಷಯಗಳು ಪ್ರತಿಯೊಬ್ಬರಿಗೆ ಬೇರೆ ಬೇರೆಯಾಗಿರುತ್ತದೆ.ಕೆಲವರಿಗೆಗಣಿತ ಸುಲಭವಾದರೆ ಮತ್ತೆ ಕೆಲವರಿಗೆಅದುಕಬ್ಬಿಣದಕಡಲೆಯಾಗಿರುತ್ತದೆ.
ಕಷ್ಟವಾದ ವಿಷಯಗಳಿಗೆ ಹೆಚ್ಚಿನಆದ್ಯತೆ ನೀಡಿಅದರ ಬಗ್ಗೆ ಗಮನ ಹರಿಸಿ:-
ಕಷ್ಟವಾದ ವಿಷಯಗಳನ್ನು ಮೊದಲು ಕೈಗಿತ್ತಿಕೊಳ್ಲಿ.ಗಣಿತದ ಸೂತ್ರ ಬಿಡಿಸಲು,ಇಂಗ್ಲೀಷ್ ಬರೆಯಲುಕಷ್ಟವಾಗುತ್ತೆಎಂದರೆಮೊದಲು ಆ ವಿಷಯಗಳ ಪಠ್ಯಪುಸ್ತಕ,ನೋಟ್ಸ್ ಮಾಡಿಕೊಂಡುಓದಲು ಪ್ರಾರಂಭಿಸಿ.ಕಡಿಮೆ ಸಮಯಇದೆಎಂದುಅವಸರದಿಂದಓದದೆ ವಿಷಯವನ್ನುಅರ್ಥ ಮಾಡಿಕೊಂಡುಓದಿದರೆಉತ್ತಮ.ಆದಷ್ಟು ಬರೆದುಓದಿದರೆ ನೆನಪು ಉತ್ತಮವಾಗಿ ಉಳಿಯುತ್ತದೆ.ಇಂಗ್ಗೀಷ್ ಸ್ಪೆಲ್ಲಿಂಗ್ ನ್ನು ಬರೆಯಿರಿ ಮತ್ತುಅದನ್ನು ಮನನ ಮಾಡಿರಿಇದರಿಂದತರಗತಿಯಲ್ಲಿ ಶಿಕ್ಕಕರು ಹೇಳಿದ ಮಾತು ಮತ್ತು ನೀವು ಓದಿದ ವಿಷಯ ಪೂರಕವಾಗಿ ನೆನಪು ಉಳಿಯುತ್ತದೆ.ನಿಮಗೆ ಬೇಕಾದಲ್ಲಿ ನಿಮ್ಮ ಹಿರಿಯರನ್ನು ಕೀಳಿರಿ ಅವರು ನಿಮಗೆ ಸಹಾಯ ಮಾಡುತ್ತಾರೆಕೀರಿಮೆ ಬೇಡ.ಓದಿದ ವಿಷಯಅರ್ಥವಾಗದಿದ್ದರೆ ಆ ವಿಷಯದಕುರಿತು ಬೇರೆಯವರೊಂದಿಗೆ ಕೇಳಿ ಸರಿಯಾಗಿಅರ್ಥಮಾಡಿದ ಬಳಿಕವೇ ಮುಂದೆ ಓದಿ ಇಲ್ಲವಾದರೆಅದು ಸ್ಪಷ್ಟವಾಗಿಅರ್ಥವಾಗದಿದ್ದರೆಅದೇತಲೆಯಲ್ಲಿ ಉಳಿಯುತ್ತದೆ.
ಕೆಲವು ವಿದ್ಯಾರ್ಥಿಗಳಲ್ಲಿ ನಾನಿಗಲೇ 1-2 ಬಾರಿರಿವಿಜನ್ ಮಾಡಿದ್ದೇನೆ.ಪರೀಕ್ಷೆಯ ಹಿಂದಿನ ದಿನಬ ಓದಿದರಾಯಿತು ಎಂದುಉದಾಸಿನ ಮಾಡಿಕೊಂಡು ಬಿಡಬೇಡಿಅತಿಯಾದಆತ್ಮವಿಶ್ವಾಸಕೂಡಉತ್ತವಾದದಲ್ಲ.ಮೊದಲುಓದಿರುವಾಗ ಕೆಲವು ವಿಷಯಗಳನ್ನು ನೀವು ಬಿಟ್ಟಿರಬಹುದುಅದನ್ನು ಮತ್ತೊಮ್ಮೆ ಓದಿ,ಮುಂದುವರೆಯಿರಿ.ಈ ಸಮಯಅತ್ಯಂತ ಮಹತ್ವದ್ದು.ಕೊನೆಗಳಿಗೆಯಲ್ಲಿ ಸಾದ್ಯವಾಗದೆ ಬೇಸರಮಾಡಿಕೊಂಡುಇರಬೇಡಿ.
ಪರೀಕ್ಷಾ ಪಟ್ಟಿಯಲ್ಲಿ ವಿಷಯಗಳ ನಡುವೆ ಮದ್ಯೆ ಬಿಡುವುಇರುತ್ತದೆ.ಒಂದು ವಿಷಯ ಮುಗಿದಕೂಡಲೇ 2-3 ದಿನ ರಜೆಯಿರುತ್ತದೆ.ಇದನ್ನು ಸದುಪಯೋಗಪಡಿಸಿಕೊಳ್ಳಿ.ಪರಿಕ್ಷೆಯ ವೇಳಾ ಪಟ್ಟಿಯನ್ನು ನೀವು ಮಲಗುವ ಕೋಣೆಯಲ್ಲಿದೊಡ್ಡದಾಗಿ ಬರೆದುತೂಗು ಹಾಕಿ.ಮತ್ತುಅದಕ್ಕೆ ಸರಿಯಾಗಿಓದಿರಿ ಕೆಲವು ವಿದ್ಯಾರ್ಥಿಗಳು ಪರೀಕ್ಷೆಯ ದಿನ ಬೇರೆ ವಿಷಯವನ್ನು ಓದಿ ಬರುವುದುಅಥವಾರಜೆಯ ದಿನ ಪರೀಕ್ಷೆಇದೆಎಂದು ತಿಳಿದು ಶಾಲೆಗೆ ಬರುವುದು.ಈರೀತಿಯತಪ್ಪಿನಿಂದತೊಂದರೆಯಾಗಬಹುದು ಹೀಗಾಗಿ ಈ ಬಗ್ಗೆ ಗಮನ ವಿರಲಿ.
ಓದುವ ಸಮಯ ನಿದಿಪಡಿಸಿಕೊಳ್ಳಿ:-
ಓದಿಗೆ ಕುಳಿತುಕೊಳ್ಳುವ ಸಮಯ ಮತ್ತು ಸ್ಥಳ ಅತ್ಯಂತ ಪ್ರಾಮುಖ್ಯವಾದದುಎಕೆಂದರೆಇದುಕೂಡ ಓದಿನಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ.ಬೆಳಿಗ್ಗೆ ಬೇಗನೆ ಎದ್ದು ಮುಖ ತೊಳೆದು ಓದಿದರೆಉತ್ತಮ ಆಗ ವಾತಾವರಣ ಶುಬ್ರವಾಗಿದ್ದುಯಾವುದೇರೀತಿಯ ಗಲಾಟೆಗಳು ಇರುದಿಲ್ಲ. ನಿದ್ದೆಗಟಟ್ಟುಓದಬೇಡಿಇದುಆರೋಗ್ಯದಕಾರಣಉತ್ತಮವಲ್ಲ.ಸಂಜೆಯ ವೇಳೆಯು ಕೂಡಓದಲುಉತ್ತಮವಾದ ಸಮಯವಾಗಿದೆ.ನಿಮ್ಮ ಮನೆಯ ಪಕ್ಕದಲ್ಲಿ ಮರಗಳು ಇದ್ದರೆಅದರ ಹತ್ತಿರ ಹೋಗಿ ಓದಿದರೆಉತ್ತಮಅಲ್ಲಿ ಗಾಳಿ ಮತ್ತುಉತ್ತಮ ವಾತಾವರಣಇರುತ್ತದೆ.
ಶುದ್ದ ನೀರು ಹೆಚ್ಚು ಕುಡಿಯಿರಿ:-
ಈಗಾಗಲೇ ಸೆಕೆಯಿರುದರಿಂದಅಂಗಡಿಯಲ್ಲಿ ಸಿಗುವ ಪಾನೀಯಗಳನ್ನು ಕುಡಿಯದೆ ಶುದ್ದವಾದ ನೀರುಆದಷ್ಟು ಹೆಚ್ಚು ಕುಡಿಯಿರಿಇದುಆರೋಗ್ಯಕ್ಕೆಉತ್ತಮಅಲ್ಲದೆಏಕಾಗ್ರತೆಯದೃಷ್ಟಿಯಿಂದಲೂಉತ್ತಮವಾಗಿದೆ.ಕರಿದ ತಿಂಡಿಗಳ ಬಗ್ಗೆ ಜಾಗರೂಕತೆ ವಹಿಸಿ ನಿಮ್ಮಆರೋಗ್ಯಉತ್ತಮವಾಗಿದ್ದರೆ ಮಾತ್ರ ನೀವು ಉತ್ತಮವಾಗೆ ಪರೀಕ್ಷೆಯಲ್ಲಿ ಬರೆದುಉತ್ತಮ ಅಂಕ ಗಳಿಸಬುದು.ನಿಮ್ಮ ಪರಿಸರವನ್ನು ಶುದ್ದವಾಗಿರಿಸಿ ಇದುಆರೋಗ್ಯದಕಾರಣದಿಂದಅಗತ್ಯವಾಗಿದೆ.
ಓದಿನ ನಡುವೆ ಮದ್ಯೆಯಲ್ಲಿ ಬಿಡುವುಇರಲಿ:-
ನಿರಂತರವಾಗಿಓದುತ್ತಾಇರದೆ ಮದ್ಯೆಯಲ್ಲಿ ಸ್ವಲ್ಪ ಬಿಡುವು ಮಾಡುಏಕಾಗ್ರತೆಯಆಟವನ್ನುಆಡಿರಿಇದರಿಂದಉತ್ತಮವಾದ ನೆನಪು ಉಳಿಯಲು ಸಾದ್ಯ.ಗಟ್ಟಿಯಾಗಿಓದುದರಿಂದ ನೆನಪು ಉಳಿಯುದರಿಂದ ಆದಷ್ಟುಗಟ್ಟಿಯಾಗಿ ಓದಿ.ಅವಸರದಿಂದಓದದೆಅರ್ಥಮಾಡಿಕೊಂಡು ಓದಿ.ಪರೀಕ್ಷೆಗೆಕಡಿಮೆ ದಿನವಿರುದರಿಂದ ಈ ಸಮಯವನ್ನು ಸದುಪಯೋಗಿಪಡಿಸಿರಿ.ಮಗ್ಗಿಯನ್ನು ಹೇಳುವಾಗಲೂ ನಿಮಗೆ ಕೇಳುವಷ್ಟು ಸ್ವರದಲ್ಲಿ ಓದಿ.ಅತೀಯಾದಗಟ್ಟಿ ಸ್ವರ ಬೇಡ.
ಗಣಿತದ ಸೂತ್ರವನ್ನುಅರ್ಥಮಾಡಿಕೊಂಡು ನೆನಪು ಮಾಡಿ.

ಟಿ.ವಿ ಮೋಬೈಲ್‍ಗೆ,ಕಂಪ್ಯೂಟರ್ಗೆ ವಿರಾಮ ನೀಡಿ:-
ಮನಸ್ಸು ಚಂಚಲವಾಗಿರುವ ಟಿ.ವಿ ಕಾರ್ಯಕ್ರಮಗಳು,ಮೋಬೈಲ್ ಆಟ ಕಂಪ್ಯೂಟರ್ ಇತ್ಯಾದಿಗಳನ್ನುಈ ದಿನಗಳಲ್ಲಿ ಮಾಡಬೇಡಿ.ಅವನ್ನೆಲ್ಲಾ ಪರೀಕ್ಷೆ ಮುಗಿದ ಬಳಿಕವಷ್ಟೆ ಗಮನ ನೀಡಿಅದರ ಬದಲು ಓದಿನ ಮದ್ಯದಲ್ಲಿಏಕಾತಾನತೆ ಸಡಿಲಗೊಳಿಸಲು ಶಾಂತ ಪರಿಸರದಲ್ಲಿವಾಕ್ ಮಾಡಿ.ಮನೆಯಲ್ಲಿಜೋಕಾಲಿ ಇದ್ದರೆಅದರಲ್ಲಿ ಸ್ವಲ್ಪ ಕುಳಿತುಕೊಳ್ಳಿ.ಸಮಯವಿದ್ದರೆ ಹಿಂದಿನ ಪ್ರಶ್ನೆ ಪತ್ರಿಕೆಗೆ ಉತ್ತರಿಸಿ ಇದರಿಂದ ನಿಮಗೆ ಆತ್ಮವಿಶ್ವಾಸಅಲ್ಲದೆ ಸಮಯದಹೊಂದಾಣಿಕೆಗೆಉತ್ತಮ.ಪರೀಕ್ಷಯೆಯಲ್ಲಿ ಬರಹ ಮತ್ತುಕಾಗುಣಿತ,ಪೂರ್ಣವಿರಾಮಅಲ್ಪವಿರಾಮದ ಬಗ್ಗೆ ಗಮನಹರಿಸಿ.
ಕಂಬೈಡ್ ಸ್ಟಡಿಇರಲಿ ಆದರೆಅವರೊಂದಿಗೆ ಸ್ಪರ್ದೇಯಲ್ಲಿ ಬಿಳಬೇಡಿ:
ಪಠ್ಯಪುಸ್ತಕ,ನೋಟ್ಸ್,ಗುರುಗಳು ಹೇಳಿದ ಪಾಠ ನಿಮಗೆ ಆಸ್ತಿ ಅದರ ಬದಲು ಮಾರುಕಟೆಯಲ್ಲಿರುವಗೈಡ್ ಬಗ್ಗೆ ಗಮನ ನೀಡಬೇಡಿ.ಮನೆಯ ಪಕ್ಕದಲ್ಲಿ ನಮ್ಮಕ್ಯಾಸ ಮೇಟ್‍ಇದ್ದರೆಅವರೊಂದಿಗೆಒಟ್ಟಾಗಿ ಸ್ಟಡಿ ಮಾಡಿಆದರೆ ಸ್ಪರ್ದೇ ಬೇಡ.ಪ್ರತಿಯೊಬ್ಬರಿಗೆಅವರದೆಆದ ಸಾಮರ್ಥಇರುತ್ತದೆ.ಆದಷ್ಟು ಬರೆದುಕೊಂಡು ಓದಿ.
ಓದಿನಲ್ಲಿ ನೀರಾಳತೆ ಇರಲಿ:
ಸಮಯವನ್ನು ವಿಷಯಕ್ಕೆತಕ್ಕಂತೆ ಮೀಸಲಿಟ್ಟು ಓದಿ.ಪರೀಕ್ಷಾಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆ ಸಿಕ್ಕಿದ ಕೂಡಲೇ ಬರೆಗದೆಅದನ್ನುಒಂದು ಬಾರಿಓದಿ ನಂತರ ಉತ್ತರಿಸಿ.ಪ್ರಶ್ನೆಗೆ ಉತ್ತರಿಸುವಾಗ ಸಮಯದ ಬಗ್ಗೆ ಗಮನ ಇರಲಿ ಗೊತ್ತಿರುವಉತ್ತರವನ್ನು ಸ್ಪಷ್ಟವಾಗಿ ಬರೆಯಿರಿ.ಮುಗಿಸಿದಾಗ ಓದಿ ತಪ್ಪಾದಉತ್ತರವನ್ನು ಸರಿ ಮಾಡಿ ಬರೆದು ನೀಡಿ.ಆರಾಮವಾಗಿ ಉತ್ತರಿಸಿ ಉದ್ವೇಗ ಬೇಡ.
ನಿಮ್ಮ ಪರೀಕ್ಷೆಗಳು ಚೆನ್ನಾಗಿರಲಿ ನಿಮಗೆ ಶುಭವಾಗಲಿ

IMG_20160608_111632

ರಾಘವೇಂದ್ರ ಪ್ರಭು , ಕರ್ವಾಲು.

By suddi9

Leave a Reply

Your email address will not be published. Required fields are marked *