ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ತಿಂಗಳಿನಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ದಡಾರ – ರುಬೆಲ್ಲಾ ಲಸಿಕಾ ಅಭಿಯಾನ ನಡೆಯಿತು. ಶಾಲೆಯ ಕೊಠಡಿಗಳನ್ನು 5 ಕೌಂಟರ್ ಗಳನ್ನಾಗಿ ಮಾರ್ಪಡಿಸಿ ಲಸಿಕೆಯನ್ನು ನೀಡಲಾಯಿತು. ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ||ಶಶಿಕಲಾರವರ ನೇತೃತ್ವದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಚುಚ್ಚುಮದ್ದು ನೀಡಿದರು. ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಕೊಡಾಜೆ ಬಾಲಕೃಷ್ಣ ಆಳ್ವರವರು ಲಸಿಕಾ ಅಭಿಯಾನ ವೀಕ್ಷಿಸಿದರು. ಶಾಲಾ ಆಡಳಿತಾಧಿಕಾರಿ ಹಾಗೂ ಮುಖ್ಯೋಪಾಧ್ಯಾಯಿನಿಯರು ಉಪಸ್ಥಿತರಿದ್ದರು.


