ಸಾಂಸ್ಕೃತಿಕ ಕಾರ್ಯಕ್ರಮ-ಸ್ವರ್ಣಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆ
ಮುಂಬಯಿ, ಜ.29: ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ರಿ.) ಸಂಚಾಲಕತ್ವದ ಶ್ರೀ ಶನಿಮಹಾತ್ಮ ಮಂದಿರದ ಸುವರ್ಣ ಮಹೋತ್ಸವವು ಇಂದಿಲ್ಲಿ ಭಾನುವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ಮುಖ್ಯ ಅತಿಥಿಯಾಗಿ ಉಪಸ್ಥಿತ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ದೀಪ ಬೆಳಗಿಸಿ 50ನೇ ವಾರ್ಷಿಕೋತ್ಸವ ಸಂಭ್ರಮ ಸಮಾರಂಭ ಉದ್ಘಾಟಿಸಿ `ಖಾರ್ ಶನೀಶ್ವರ’ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿದರು.
ಅತಿಥಿüಗಳಾಗಿ ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ದಾಮೋದರ ಸಿ.ಕುಂದರ್, ನ್ಯಾ| ಎಸ್.ಬಿ ಅವಿೂನ್, ಚಲನಚಿತ್ರ ಪ್ರಶಸ್ತಿ ಪುರಸ್ಕøತ ನಟ, ನಿರ್ದೇಶಕ ಡಾ| ರಾಜಶೇಖರ ಆರ್.ಕೋಟ್ಯಾನ್, ನ್ಯಾಯವಾದಿ ಸೀತರಾಮ ಶೆಟ್ಟಿ, ಉದ್ಯಮಿ ಅಶೋಕ್ ಮೂಡಬಿದ್ರಿ, ದಿವಾಕರ್ ಅವಿೂನ್, ಸಿಎ| ಪ್ರಕಾಶ್ ಶೆಟ್ಟಿ, ನಾಗೇಶ್ ಶೆಟ್ಟಿ, ಭಾರತಿ ನಿಟ್ಟೇಕರ್, ಉಮೇಶ್ ಕಾಪು, ಶ್ಯಾಮರಾಜ ಶೆಟ್ಟಿ, ಹರಿದಾಸ ಜಿ.ಶೆಟ್ಟಿ ವಿದ್ಯಾವಿಹರ್ ಉಪಸ್ಥಿತರಿದ್ದು ಸೇವಾ ಸಮಿತಿಗೆ ಕಳೆದ ಐದು ದಶಕಗಳಿಂದ ಅತ್ಯಾಮೂಲ್ಯ ಸೇವೆ ನೀಡಿದ ಗಣ್ಯರನ್ನು ಸತ್ಕರಿಸಿ ಗೌರವಿಸಿದರು.
ಸೇೀವಾ ಸಮಿತಿ ಗೌರವಾಧ್ಯಕ್ಷ ಶ್ರೀಧರ್ ಜೆ.ಬಂಗೇರ, ಉಪಾಧ್ಯಕ್ಷ ದೇವೇಂದ್ರ ವಿ.ಬಂಗೇರ, ಗೌ| ಪ್ರ| ಕೋಶಾಧಿಕಾರಿ ನಾಗೇಶ್ ಜಿ.ಸುವರ್ಣ, ಮಹಿಳಾ ಮಂಡಳಿ ಮುಖ್ಯಸ್ಥೆ ಕೇಸರಿ ಬಿ.ಅಮೀನ್, ಪ್ರಕಾಶ್ ಮೂಡಬಿದ್ರಿ ವೇದಿಕೆಯಲ್ಲಿ ಆಸೀನರಾಗಿದ್ದು ಸೇವಾ ಸಮಿತಿಯಲ್ಲಿ ನಿರಂತರ 50 ವರ್ಷಗಳ ಸೇವೆಯೊಂದಿಗೆ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಯೋಗೆಶ್ ಕೆ.ಹೆಜ್ಮಾಡಿ ಮತ್ತು ಲೀಲಾ ಯೋಗೆಶ್ ದಂಪತಿಯನ್ನು ಅತಿಥಿüಗಳು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಆದಿಯಲ್ಲಿ ಶ್ರೀ ಶನೈೀಶ್ವರ ದೇವರಿಗೆ ಪೂಜೆ ನೆರವೇರಿಸಿ ಆರತಿಗೈಯಲಾಯಿತು. ಶೋಭಾ ಪೂಜಾರಿ ಪ್ರಾರ್ಥನೆಯನ್ನಾಡಿದರು. ಸೇವಾ ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ ಸ್ವಾಗತಿಸಿ ಪ್ರಸ್ತಾವನೆಗೈ ದರು. ಗೌರವಾಧ್ಯಕ್ಷ ಶ್ರೀಧರ್ ಜೆ.ಬಂಗೇರ ಸಮಿತಿಯ ಐವತ್ತರ ನಡೆಯನ್ನು ಭಿತ್ತಸಿದರು. ನಾಗೇಶ್ ಜಿ.ಸುವರ್ಣ ಸನ್ಮಾನಿತರನ್ನು ಪರಿಚಯಿಸಿದರು. ಸಮಿತಿ ಗೌರವ ಪ್ರಧಾನ ಕಾರ್ಯದರ್ಶಿ ಯೋಗೆಶ್ ಕೆ.ಹೆಜ್ಮಾಡಿ ಅತಿಥಿüಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ರಮೇಶ್ ಎನ್.ಪೂಜಾರಿ ವಂದಿಸಿದರು.
ಪಂಚದಶ ವಾರ್ಷಿಕೋತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಮಿತಿ ಸದಸ್ಯರು ಮಕ್ಕಳು ಮತ್ತು ಮಹಿಳಾ ಮಂಡಳಿ ಸಂಗೀತ-ನೃತ್ಯಾವಳಿಗಳನ್ನು, ಮಹಿಳಾ ಮಂಡಳಿಯು `ಸ್ವರ್ಣ ಶನೀಶ್ವರ’ ಕಿರು ನಾಟಕ ಪ್ರದರ್ಶಿಸಿದರು. ನಂತರ ನೌಶೀಲ್ ಮೆಹ್ತಾ ರಚಿಸಿ ಲತೇಶ್ ಮೋಹನ್ ಪೂಜಾರಿ ನಿರ್ದೇಶಿತ `ಮಣ್ಣಿ’ ನಾಟಕ ಪ್ರದರ್ಶಿಸಿಸಿದರು. ಸಚಿನ್ ಪೂಜಾರಿ ಮತ್ತು ಹರೀಶ್ಚಂದ್ರ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ವಿಶ್ವಸ್ಥ ಸದಸ್ಯ ನಾರಾಯಣ ಜಿ. ಕೋಟ್ಯಾನ್, ಜೊತೆ ಸಹಾಯಕ ಕಾರ್ಯದರ್ಶಿಗಳಾದ ಸಿ.ಎನ್ ಶೆಟ್ಟಿ ಮತ್ತು ಜಯರಾಮ ಶೆಟ್ಟಿ, ಜೊತೆ ಕೋಶಾಧಿಕಾರಿ ವಿನೋದ್ ವೈ.ಹೆಜ್ಮಾಡಿ, ಕಾರ್ಯಾಧ್ಯಕ್ಷ ಆರ್.ಡಿ ಕೋಟ್ಯಾನ್, ಉಪ ಕಾರ್ಯಾಧ್ಯಕ್ಷ ಪುರಂದರದಾಸ್ ಶೆಟ್ಟಿ, ಮಹಿಳಾ ಮಂಡಳಿಯ ಶೋಭಾ ವಿ.ಕೋಟ್ಯಾನ್, ವಿಶ್ವಸ್ಥ ಮಂಡಳಿ ಸದಸ್ಯರುಗಳಾದ ವಾಸು ಪಿ.ಶೆಟ್ಟಿ, ವಾಸು ಎಸ್.ಕೋಟ್ಯಾನ್, ಭೋಜ ಸಿ.ಪೂಜಾರಿ, ವಿಜಯ ಎನ್.ಸಾಲಿಯಾನ್, ಭುವಾಜಿ ಆರ್.ಜಿ ಕೋಟ್ಯಾನ್, ಹರೀಶ್ ಅಂಚನ್ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದರು.


















