ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ಅರಳ-ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ದೇವಳದಲ್ಲಿ ಉಗ್ರಾಣವನ್ನು ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಜಯಕರ ಪಕ್ಕಳ ರಾಯಿ ಇವರು ಗುರುವಾರ ಉದ್ಘಾಟಿಸಿದರು. ಅರ್ಚಕ ಎ.ರಾಜ ಭಟ್ ಹುಣ್ಸೆಯಡಿ, ಜಗದೀಶ ಆಳ್ವ ಅಗ್ಗೊಂಡೆ, ಮುರಳೀಧರ ಶೆಟ್ಟಿ, ಹರೀಶ ಭಟ್ ಮತ್ತಿತರರು ಇದ್ದಾರೆ.

